ಉ.ಪ್ರದೇಶ:  ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಕುಟುಂಬ

Source: sonews | By sub editor | Published on 3rd October 2018, 5:20 PM | National News | Special Report | Don't Miss |

ಲಕ್ನೋ: ತನ್ನ ಪುತ್ರನ ಅಸಹಜ ಸಾವನ್ನು ಕೊಲೆಯೆಂದು ಪರಿಗಣಿಸದೆ ಆತ್ಮಹತ್ಯೆಯೆಂದು ಪರಿಗಣಿಸಿದ ಪೊಲೀಸರ ಕ್ರಮದಿಂದ ನೊಂದು ಉತ್ತರ ಪ್ರದೇಶದ ಬಾಘಪತ್ ಜಿಲ್ಲೆಯ ಬಡರ್ಖ ಗ್ರಾಮದ ನಿವಾಸಿ ಅಖ್ತರ್ ಎಂಬವರು ಇಸ್ಲಾಂ ಧರ್ಮ ತೊರೆದು ತಮ್ಮ ಕುಟುಂಬ ಸಮೇತ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈಗಲಾದರೂ ತನ್ನ ಮಗನ `ಕೊಲೆ' ಪ್ರಕರಣವನ್ನು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂಬ ಆಶಾವಾದವಿದೆ ಎಂದು ಹೇಳಿದ್ದಾರೆ.

ತಾನು ಹಾಗೂ ತನ್ನ ಕುಟುಂಬದ 12 ಮಂದಿ ಸದಸ್ಯರು ಸ್ವಇಚ್ಛೆಯಿಂದ ಮತಾಂತರಗೊಂಡಿದ್ದಾಗಿ ಅಖ್ತರ್ ತನ್ನ ಪ್ರದೇಶದ ಸಬ್-ಡಿವಿಷನಲ್ ಮ್ಯಾಜಿಸ್ಟ್ರೇಟರಿಗೆ ಅಫಿದಾವತ್ ಸಲ್ಲಿಸಿದ್ದಾರೆ.

ಅಖ್ತರ್ ಕುಟುಂಬ ಹವನ ಹಾಗೂ ಇತರ ಪ್ರಕ್ರಿಯೆ ನಡೆಸಿ ತಮ್ಮ ಹೆಸರುಗಳನ್ನೂ ಬದಲಾಯಿಸಿದೆ ಎಂದು ರಾಜ್ಯ ಯುವ ಹಿಂದು ವಾಹಿನಿ ಅಧ್ಯಕ್ಷ ಶೌಕೇಂದ್ರ ಖೋಕರ್ ಹೇಳಿದ್ದಾರೆ. ಅಖ್ತರ್ ಪುತ್ರ ಗುಲ್‍ಹಸನ್ ಎಂಬಾತನನ್ನು ಕೊಲೆಗೈದು ನಂತರ ಆತನ ದೇಹವನ್ನು ನೇತು ಹಾಕಲಾಗಿದೆ ಎಂಬ ಬಲವಾದ ಅನುಮಾನ ಕುಟುಂಬಕ್ಕಿದೆ ಎಂದೂ ಶೌಕೇಂದ್ರ ಹೇಳಿದ್ದಾರೆ.

ಈ ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುವಂತೆ ಕುಟುಂಬ ಪೊಲೀಸರನ್ನು ವಿನಂತಿಸಿದ್ದರೂ ಅವರು ಇದನ್ನೊಂದು ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿದ್ದರು ಎಂದು ಆತ ತಿಳಿಸಿದ್ದಾರೆ. ಅಖ್ತರ್ ತನ್ನ ಸಮುದಾಯದ ಮಂದಿಯ ಸಹಾಯ ಕೋರಿದ್ದರೂ ಯಾರೂ ಮುಂದೆ ಬರಲಿಲ್ಲವೆಂದೂ ಯುವ ವಾಹಿನಿ ನಾಯಕ ಹೇಳಿದ್ದಾರೆ.

ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ ಹಾಗೂ ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಗಮನ ಸೆಳೆಯಲಾಗಿದೆ ಎಂದು ಬಾಘಪತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಮಾರ್ ಹೇಳಿದ್ದಾರೆ.

Read These Next

ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಮೂವರು ಸಚಿವ ಖಾತೆ, ಜೋಷಿ, ಡಿವಿಎಸ್, ಸುರೇಶ್ ಅಂಗಡಿಗೆ ಖಾತೆ ಹಂಚಿಕೆ

ಪ್ರಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ  ಸಚಿವ ಸಂಪುಟದ ಖಾತೆ ಹಂಚಿಕೆ ತೀರ್ಮಾನವಾಗಿದ್ದು ರಾಜ್ಯದ ಮೂವರು ...

ಅಮಿತ್ ಶಾಗೆ ಗೃಹ ಖಾತೆ, ರಾಜನಾಥ್ ಸಿಂಗ್ ಗೆ ರಕ್ಷಣೆ; ಮೋದಿ ಹೊಸ ಸರ್ಕಾರದ ಸಚಿವರ ಖಾತೆ ಹಂಚಿಕೆ ಪಟ್ಟಿ ಇಲ್ಲಿದೆ

2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ...

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...

ದಮನಿತ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ: ಫಲಾನುಭವಿಗಳನ್ನು ಶೀಘ್ರ ಆಯ್ಕೆ: ಜಿಲ್ಲಾಧಿಕಾರಿ ದೀಪಾ ಚೋಳನ್

ದಮನಿತ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ: ಫಲಾನುಭವಿಗಳನ್ನು ಶೀಘ್ರ ಆಯ್ಕೆ: ಜಿಲ್ಲಾಧಿಕಾರಿ ದೀಪಾ ಚೋಳನ್