ಮುರುಢೇಶ್ವರ ಪೊಲೀಸ್ ಠಾಣೆ ಪಿ.ಎಸ್.ಐ ಮಂಜುನಾಥ್ ಅಮಾನತು

Source: SOnews | By Staff Correspondent | Published on 3rd September 2024, 9:40 PM | Coastal News | Don't Miss |

 

ಭಟ್ಕಳ: ಭಟ್ಕಳದ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಕರ್ತವ್ಯ ಲೋಪ ಎಸಗಿದ ಹಿನ್ನೆಯಲ್ಲಿ ಅಮಾನುತ್ತುಗೊಂಡಿರುವ ಬೆನ್ನ ಹಿಂದೆಯೇ ಮಂಗಳವಾರ ಮುರುಢೇಶ್ವರ ಪೊಲೀಸ್ ಠಾಣೆಯ ಪಿ.ಎಸ್.ಐ ಮಂಜುನಾಥ್ ಎಂಬುವರರನ್ನು ಕರ್ತವ್ಯ ಲೋಪ ಎಸೆಗಿದ್ದಾರೆ ಎಂದು ಆರೋಪಿಸಿ ಉ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು ಅಮಾನತ್ತುಗೊಳ್ಳಿಸಿ ಆದೇಶ ನೀಡಿದ್ದಾರೆ.

ಮುರುಡೇಶ್ವರದ ಲಾಡ್ಜ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ತಡೆಯುವಲ್ಲಿ  ಮುರುಢೇಶ್ವರ ಠಾಣಾಧಿಕಾರಿ ಮಂಜುನಾಥ್ ವಿಫಲಗೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮುರುಢೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಧಂದೆ, ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಇದನ್ನು ತಡೆಯುವಲ್ಲಿ ವಿಫಲಗೊಂಡಿದ್ದಾರೆ. ಕರ್ತವ್ಯ ಪಾಲನೆಯಲ್ಲಿ ಘೋರ ಅಶಿಸ್ತು, ದುರ್ನಡತೆ ಹಾಗೂ ಬೇಜವಾಬ್ದಾರಿತನ ತೋರಿಸಿದ್ದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣ ಜಾರಿಗೆ ಬರುವಂತೆ ಕರ್ತವ್ಯದಿಂದ ಪಿ.ಎಸ್.ಐ ಮಂಜುನಾಥ್ ರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದು, ಅಧೀನ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡದೇ ಮತ್ತು ಮೇಲ್ವಿಚಾರಣೆ ನಡೆಸದೆ ಗ್ರಾಮೀಣ ವೃತ್ತದ ಪ್ರಭಾರ ಹೊಂದಿರುವ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕರ ವಿರುದ್ಧವೂ ಶಿಸ್ತುಕ್ರಮ ಜರುಗಿಸಲು ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Read These Next

ಭಟ್ಕಳ ಬಂದ್: ಮುಸ್ಲಿಂ ಸಮುದಾಯದ ವ್ಯಾಪಾರ-ವ್ಯವಹಾರ ಸ್ಥಬ್ಧ- ಮುರುಢೇಶ್ವರದಲ್ಲೂ ಬಂದ್ ಗೆ ಬೆಂಬಲ

ಭಟ್ಕಳ: ಪ್ರವಾದಿ ಮುಹಮ್ಮದ್ (ಸ) ವಿರುದ್ದ ನಿಂದನಾತ್ಮಕ ಹೇಳಿಕೆ ನೀಡುತ್ತಿರುವ ಉತ್ತರ ಪ್ರದೇಶದ ಯತಿ ನರಸಿಂಗಾನಂದ ಸ್ವಾಮಿಜಿ ...

ಭಟ್ಕಳ: ಪ್ರವಾದಿ ನಿಂದಕ ಯತಿ ನರಸಿಂಗನಂದಾ ಸ್ವಾಮಿಯನ್ನು ದೇಶದ್ರೋಹ ಪ್ರಕರಣದಡಿ ಬಂಧಿಸುವಂತೆ ತಂಝೀಮ್ ಆಗ್ರಹ

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಅತ್ಯಂತ ಅಸಭ್ಯವಾಗಿ ನಿಂದಿಸಿದ ಮನುಷ್ಯ ವಿರೋಧಿ ಯತಿ ನರಸಿಂಹನಂದಾ ಸರಸ್ವತಿ ...

ಮುರ್ಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂಧಿ

ಭಟ್ಕಳ: ರಜೆ ದಿನಗಳನ್ನು ಕಳೆಯಲುದು ಬೆಂಗಳೂರಿನಿಂದ ಮರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ 19 ವರ್ಷದ ಪುನೀತ್ ಎಂಬ ಯುವಕ ಸಮುದ್ರದಲ್ಲಿ ...