ಮುರ್ಡೇಶ್ವರದ ಶಿವನ ಮೂರ್ತಿಗೆ ಪೀಪಲ್ಸ್ ಚಾಯ್ಸ್ ಅವಾರ್ಡ

Source: so news | By MV Bhatkal | Published on 18th June 2021, 8:04 PM | Coastal News |

ಭಟ್ಕಳ: ಮುರ್ಡೇಶ್ವರದ ಶಿವನ ಮೂರ್ತಿಗೆ ಗ್ಲೋಬಲ್ ಪಿಲಿಪ್ಸ್ ಆಯೋಜಿಸಿದ್ದ ಪೀಪಲ್ಸ್ ಚಾಯ್ಸ್ ಅವಾರ್ಡ ಬಂದಿದ್ದು ಶಿವನ ಮೂರ್ತಿಗೆ ಅಳವಡಿಸಿದ್ದ ಲೈಟಿಂಗ್‍ಗೆ ಈ ಅವಾರ್ಡ ದೊರೆತಿದೆ. 
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಮುಡೇಶ್ವರ ಕುಳಿತ ಭಂಗಿಯಲ್ಲಿರುವ 132 ಅಡಿ ಎತ್ತರದ ಶಿವನ ಮೂರ್ತಿ ಏಷ್ಯಾದಲ್ಲಿಯೇ ಎರಡನೇ ಅತೀ ಎತ್ತರದ ಶಿವನ ಮೂರ್ತಿಯಾದರೆ, ದೇವಸ್ಥಾನದ ಎದುರಿಗಿರುವ 123 ಅಡಿ ಎತ್ತರದ ಸ್ವಾಗತ ಗೋಪುರ ಏಷ್ಯಾದಲ್ಲಿಯೇ ಪ್ರಥಮದ್ದಾಗಿದೆ. 
ಮುರ್ಡೇಶ್ವರ ನಿರ್ಮಾತೃ ಆರ್. ಎನ್. ಶೆಟ್ಟಿಯವರು ಅತ್ಯಂತ ಭಕ್ತಿಯಿಂದ ಶಿವನ ಮೂರ್ತಿಯನ್ನು ನಿರ್ಮಾಣ ಮಾಡಿದ್ದು ನಂತರದ ದಿನಗಳಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆಯಿತು.  ಶಿವನ ಮೂರ್ತಿಗೆ ಫಿಲಿಪ್ಸ್ ಕಂಪೆನಿಯ ವತಿಯಿಂದ ಲೈಟಿಂಗ್ ಅಳವಡಿಕೆ ಮಾಡಿದ್ದು ಅತ್ಯಂತ ಸುಂದರವಾಗಿ ಸುಮಾರು ಎರಡು ಕಿ.ಮಿ. ದೂರದಿಂದಲೂ ಕಾಣುವಂತಾಗಿದ್ದು ವಿಶೇಷವಾಗಿದೆ. ಶಿವನ ಮೂರ್ತಿಯ ಮೇಲೆ ಬೀಳುವ ಬೆಳಕು ಅತ್ಯಂತ ಪ್ರಖರವಾಗಿ ಬಹಳ ಅಂದವಾಗಿ ಕಾಣಿಸುತ್ತಿದ್ದು ಪ್ರತಿ ನಿಮಿಷಕ್ಕೂ ಬೆಳಕಿನ ಬಣ್ಣ ಬದಲಾಯಿಸುತ್ತಾ ಬೆಳಕಿನ ಡಿಗ್ರಿಯೂ ಕೂಡಾ ಬದಲಾಗುತ್ತಾ ಬರುವುದು ವಿಶೇಷವಾಗಿದೆ. 
ಇತ್ತೀಚೆಗಷ್ಟೇ ಗ್ಲೋಬಲ್ ಫಿಲಿಪ್ಸ್‍ನಿಂದ ಆಯೋಜಿಸಲ್ಪಟ್ಟ ಅಮೇರಿಕಾದ ಪ್ರಖ್ಯಾತ ಅವಾರ್ಡ ಶೋ "ಪೀಪಲ್ಸ್ ಚಾಯ್ಸ್" ಸ್ಪರ್ಧೆಯಲ್ಲಿ ಜಗತ್ತಿನ ಸುಮಾರು 24 ವಿಶೇಷ ಪ್ರಾಜೆಕ್ಟ್‍ಗಳಲ್ಲಿ ಮುರ್ಡೇಶ್ವರದ ಬೃಹತ್ ಈಶ್ವರನ ಮೂರ್ತಿಯೂ ಕೂಡಾ ಒಂದಾಗಿದ್ದು ಸ್ಪರ್ಧೆಯಲ್ಲಿ ಸುಮಾರು 6871ಕ್ಕೂ ಹೆಚ್ಚು ಆನ್‍ಲೈನ್ ಮತಗಳಲ್ಲಿ 2500ಕ್ಕೂ ಹೆಚ್ಚು ಓಟಿಂಗ್ ಪಡೆದು ಪ್ರಶಸ್ತಿಯನ್ನು ಗಳಿಸುವಲ್ಲಿ ಈಶ್ವರನ ಮೂರ್ತಿ ಯಶಸ್ವೀಯಾಗಿದ್ದು ಕರ್ನಾಟಕಷ್ಟೇ ಅಲ್ಲ ಇಡೀ ಭಾರತ ದೇಶಕ್ಕೇ ಹೆಮ್ಮೆಯ ವಿಷಯವಾಗಿದೆ. 
ಪೀಪಲ್ಸ್ ಚಾಯ್ಸ್ ಅವಾರ್ಡ ಅಮೇರಿಕಾದ ಅವಾರ್ಡ ಶೋ ಆಗಿದ್ದು 1975ರಿಂದಲೂ ಪ್ರತಿ ವರ್ಷ ನಡೆಸಲಾಗುತ್ತಿದ್ದು 2005ರಿಂದ ಆನ್ ಲೈನ್ ಮತಗಳನ್ನು ಪಡೆಯಲಾಗುತ್ತಿದ್ದು 2021ರಲ್ಲಿ ಮುರ್ಡೇಶ್ವರದ ಪ್ರತಿಮೆಗೆ ಆನ್‍ಲೈನ್ ಮತಗಳ ಆಧಾರದ ಮೇಲೆಯೇ ಪ್ರಶಸ್ತಿ ಘೋಷಿಸಲಾಯಿತು. ಮುರ್ಡೇಶ್ವರದ ನಿರ್ಮಾತೃ ಡಾ. ಆರ್. ಎನ್. ಶೆಟ್ಟಿಯವರ ಕನಸಿನ ಕೂಸಾದ ಶಿವನ ಮೂರ್ತಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿರು ಈ ಸಂದರ್ಭದಲ್ಲಿ ಅತ್ಯಂತ ಸಂತಸ ಪಡುವ ವ್ಯಕ್ತಿಯೇ ಅವರಾಗುತ್ತಿದ್ದರು ಎನ್ನುವುದು ಒಟ್ಟಾಭಿಪ್ರಾಯವಾಗಿದೆ. 

 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...