ಮುರುಡೇಶ್ವರ,ಶಿರಾಲಿಯಲ್ಲಿ ಸ್ವಯಂಪ್ರೇರಿತ ಲಾಕ್​​ಡೌನ್​​ಗೆ ಒಳಗಾದ ಜನತೆ

Source: so news | Published on 8th July 2020, 7:43 PM | Coastal News | Don't Miss |

ಭಟ್ಕಳ: ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಭಟ್ಕಳ, ಜಾಲಿ ಹಾಗೂ ಹೇಬಳೆ ಭಾಗದಲ್ಲಿ ಮಧ್ಯಾಹ್ನ 2 ಗಂಟೆಯ ಬಳಿಕ ಲಾಕ್​ಡೌನ್​​​ ಮಾಡಲು ಆದೇಶ ನೀಡಲಾಗಿದೆ.
ಈ ನಡುವೆ ಮುರುಡೇಶ್ವರ ಹಾಗೂ ಶಿರಾಲಿಯಲ್ಲಿಯೂ ಜನತೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಆಡಳಿತಕ್ಕೆ ನೆರವಾಗಿದ್ದಾರೆ.ಭಟ್ಕಳದಲ್ಲಿ ಕೊರೊನಾ ತಂದ ಆತಂಕ... ಸ್ವಯಂಪ್ರೇರಿತ ಲಾಕ್​​ಡೌನ್​​ಗೆ ಒಳಗಾದ ಜನತೆತಾಲೂಕಿನ ಮುರುಡೇಶ್ವರದಲ್ಲಿನ ಕಿರಾಣಿ ವ್ಯಾಪಾರಿಗಳು, ಮೊಬೈಲ್ ಶಾಪ್​​​ಗಳು, ತರಕಾರಿ ಅಂಗಡಿಗಳು ಹಾಗೂ ಸಣ್ಣಪುಟ್ಟ ಅಂಗಡಿದಾರರು ಬೆಳಗ್ಗೆ 6ರಿಂದ ಮದ್ಯಾಹ್ನ 2 ಗಂಟೆಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಿ, ಕೆಲವು ದಿನಗಳವರೆಗೆ ಮದ್ಯಾಹ್ನ 2 ಗಂಟೆಯ ನಂತರ ವ್ಯವಹಾರವನ್ನು ಸ್ಥಗಿತಗೊಳಿಸಲು ಸ್ವಯಂಪ್ರೇರಣೆಯಿಂದ ನಿರ್ಧರಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಕಿರಾಣಿ ವ್ಯಾಪಾರಿ ರಾಘವೇಂದ್ರ ಗಾಯತೊಂಡೆ, ದಿನ ಕಳೆದಂತೆ ಕೊರೊನಾ ಮಹಾಮಾರಿ ಹೆಚ್ಚಾಗುತ್ತಿದ್ದು, ತಾಲೂಕಿನ ಪಟ್ಟಣ ಪ್ರದೇಶ, ಜಾಲಿ ಭಾಗದಲ್ಲಿ 2 ಗಂಟೆಯ ನಂತರ ವ್ಯಾಪಾರ ಬಂದ್ ಮಾಡಲಾಗಿದೆ. ಅದರಂತೆ ಮುರುಡೇಶ್ವರ ಭಾಗದ ವ್ಯಾಪಾರಿಗಳೆಲ್ಲರೂ ಸೇರಿ ಸ್ವಯಂಪ್ರೇರಿತರಾಗಿ ಮಧ್ಯಾಹ್ನ 2 ಗಂಟೆಯ ನಂತರ ಅಂಗಡಿಗಳನ್ನು ಮುಚ್ಚಲಿದ್ದೇವೆ ಎಂದರು.ಇನ್ನೋರ್ವ ವ್ಯಾಪಾರಸ್ಥ ಶಂಕರ ನಾಯ್ಕ ಮಾತನಾಡಿ, ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಾಪಿಸುತ್ತಿರುವ ಕೊರೊನಾ ಮಹಾಮಾರಿ ನಮ್ಮನ್ನು ಭಯಪಡಿಸುತ್ತಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮುರುಡೇಶ್ವರದಲ್ಲಿನ ಅಂಗಡಿ-ಮುಂಗಟ್ಟುಗಳು ತೆರೆದಿರುತ್ತವೆ. ನಂತರ ಸ್ವಯಂಪ್ರೇರಿತವಾಗಿ ಬಂದ್​​ ಮಾಡಲಿದ್ದೇವೆ ಎಂದರು.

Read These Next

ಕೋಸ್ಟಲ್ ಎಕನಾಮಿಕ್ ಝೋನ್ ಮಾಡುವ ಕುರಿತು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ-ಅನಂತ್ ಕುಮಾರ್ ಹೆಗಡೆ

ಭಟ್ಕಳ: ಕರಾವಳಿಯ ತಾಲೂಕುಗಳ ಅಭಿವೃದ್ಧಿಯು ಬಂದರ ಅಭಿವೃದ್ಧಿಯಿಂದ ಮಾತ್ರ ಸಾಧ್ಯವಾಗುವುದು. ಈಗಾಗಲೇ ಕೋಸ್ಟಲ್ ಎಕನಾಮಿಕ್ ಝೋನ್ ...

ವಾರದ ಏಳು ದಿನ ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದ ಸಚಿವ ಶಿವರಾಮ ಹೆಬ್ಬಾರ

ಮುಂಡಗೋಡ: ಪ್ರಕೃತಿಯ ಮುನಿಸು  ತಗ್ಗಿ ಶಾಂತವಾಗಿ  ಸಹಜ  ಸ್ಥಿತಿಗೆ ಮರಳುವವರೆಗೂ ವಾರದ ಏಳುದಿನ ಎಲ್ಲ ಇಲಾಖೆಯ ಅಧಿಕಾರಿಗಳು ...

ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ; ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಿರಸಿಯ ಸನ್ನಿಧಿ ಹೆಗಡೆಯ ಮನದಿಂಗಿತ

ಭಟ್ಕಳ: ಕೊರೋನಾ ಲಾಕ್ಡೌನ್ ಸದೂಪಯೋಗಗೊಂಡಿದ್ದು ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ ಎಂದು 625/625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ...

ಗುಳ್ಳಾಪುರ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಆಗ್ರಹ. ಜಿಲ್ಲಾದ್ಯಂತ ಹೋರಾಟಕ್ಕೆ ಎಚ್ಚರಿಕೆ

ಭಟ್ಕಳ: ಸಾಂಕ್ರಾಂಮಿಕ ರೋಗ ಕೋರೋನಾ ಕೋವೀಡ್ ಹಾಗೂ ತೀವೃ ಅತೀವೃಷ್ಟಿಯ ಸಂದರ್ಭದಲ್ಲಿ ಯಲ್ಲಾಪುರ ತಾಲೂಕ ಗುಳ್ಳಾಪುರ ಗ್ರಾಮದಲ್ಲಿ ...