ಮುರ್ಡೇಶ್ವರ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Source: sonews | By Staff Correspondent | Published on 28th July 2020, 9:52 PM | Coastal News |

ಭಟ್ಕಳ: ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ಸಮಾಜಮುಖಿ ಕಾರ್ಯಗಳಿಂದ ಇತರರಿಗೆ ಮಾದರಿಯಾಗಿದೆ ಎಂದು 317ಬಿ ಲಯನ್ ಜಿಲ್ಲೆಯ ಗವರ್ನರ್ ಡಾ.ಗಿರೀಶ ಕುಚಿನಾಡ್ ಹೇಳಿದರು.  

ಅವರು ಮುರ್ಡೇಶ್ವರದ ಹೊಟೇಲ್ ಪಾಮ್‍ಗ್ರೋವ್‍ನ ಲಯನ್ ಸಭಾಂಗಣದಲ್ಲಿ ಕ್ಲಬ್‍ನ ನೂತನ ಪದಾಧಿಕಾರಿಗಳ  ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಮುರ್ಡೇಶ್ವರ ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಗೌರೀಶ ಆರ್ ನಾಯ್ಕ, ಕಾರ್ಯದರ್ಶಿಗಳಾಗಿ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾಗಿ ಗೌರೀಶ ಟಿ ನಾಯ್ಕರಿಗೆ ಪ್ರಮಾಣವಚನ ಬೋಧಿಸಲಾಯಿತು.

ಮೊದಲ ಉಪಾಧ್ಯಕ್ಷರಾಗಿ ಬಸ್ತ್ಯಾಂವ್ ಡಿಕೋಸ್ತ, ಎರಡನೇ ಉಪಾಧ್ಯಕ್ಷರಾಗಿ ಕಿರಣ ಕಾಯ್ಕಿಣಿ, ಸಹ ಕಾರ್ಯದರ್ಶಿಯಾಗಿ ಪಾಂಡುರಂಗ ಅಳ್ವೆಗದ್ದೆ, ಸದಸ್ಯತ್ವ ಅಭಿಯಾದ ಅಧ್ಯಕ್ಷರಾಗಿ ಕಿರಣ ಮಾನಕಾಮೆ, ಕ್ಲಬ್ ಸಮನ್ವಯಾಧಿಕಾರಿಯಾಗಿ ನಾಗರಾಜ ಭಟ್, ಸೇವಾ ಚಟುವಟಿಕೆಗಳ ಅಧ್ಯಕ್ಷರಾಗಿ ವಿಶ್ವನಾಥ ಮಡಿವಾಳ, ಸದಸ್ಯತ್ವ ಸಮಿತಿಯ ಅಧ್ಯಕ್ಷರಾಗಿ ಡಾ. ಹರಿಪ್ರಸಾದ ಕಿಣಿ, ವ್ಯಾವಹಾರಿಕ ಸಂವಹನದ ಅಧ್ಯಕ್ಷರಾಗಿ ಮಂಜುನಾಥ ನಾಯ್ಕ, ಲಯನ್ ಟೇಮರ್ ಆಗಿ ಶಿವಾನಂದ ದೈಮನೆ, ಟೇಲ್‍ಟ್ವಿಸ್ಟರ್ ಆಗಿ ಕೃಷ್ಣ ಹೆಗಡೆ, ನಿರ್ದೇಶಕರುಗಳಾಗಿ ಎ.ಎನ್ ಶೆಟ್ಟಿ, ದಯಾನಂದ ಮೆಣಸಿನಮನೆ, ದ್ಯಾನೇಶ್ ಮಾನಕಾಮೆ, ಮೋಹನ್ ನಾಯ್ಕ, ಡಾ.ಆಯ್.ಆರ್ ಭಟ್, ಜಗದೀಶ ಜೈನ್, ಡಾ.ಮನೋಜ್ ಆಚಾರ್ಯ, ವಿಶ್ವನಾಥ ಕಾಮತ, ಬಾಬು ಮೊಗೇರ್, ಹಾಗೂ  ಗಜಾನನ ಭಟ್‍ರವರನ್ನು ನಿಯುಕ್ತಿಗೊಳಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ರಾಮದಾಸ ಶೇಟ್ ನೂತನ ಅಧ್ಯಕ್ಷ ಗೌರೀಶ ಆರ್ ನಾಯ್ಕರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷ ಮಾತನಾಡಿ ಕ್ಲಬ್‍ನ ಎಲ್ಲಾ ಸದಸ್ಯರ ಸಹಯೋಗದೊಂದಿಗೆ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಹಲವಾರು ಸೇವಾ ಕಾರ್ಯಗಳೊಂದಿಗೆ ಶೈಕ್ಷಣಿಕ ಕ್ಷೇತ್ರಕ್ಕೆ ಮೊದಲ ಆಧ್ಯತೆಯೊಂದಿಗೆ ಸಮಾಜಮುಖಿ ಕೆಲಸ ಮಾಡಲು ಸಿದ್ಧರಿರುವುದಾಗಿ ತಿಳಿಸಿದರು.

ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳ ಲಯನ್ ವರ್ಷದ ಸಮಗ್ರ ವರದಿಯನ್ನು ಮಂಡಿಸಿದರು. ರಾಮದಾಸ ಶೇಟ್ ಸ್ವಾಗತಿಸಿದರು. ಗಜಾನನ ಭಟ್ ವಂದಿಸಿದರು. ಹಿರಿಯ ಲಯನ್ ಸದಸ್ಯಾದ ಎಮ್.ವಿ ಹೆಗಡೆ, ಹಾಗೂ ಕೆ.ಬಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.


    

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...