ಮುರ್ಡೇಶ್ವರ ಪೊಲೀಸರ ಕಾರ್ಯಾಚರಣೆ: ಹೆದ್ದಾರಿ ದರೋಡೆಕೋರರ ಬಂಧನ

Source: so news | By MV Bhatkal | Published on 22nd January 2023, 11:39 PM | Coastal News | Don't Miss |

ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ರಾಷ್ಟಿಯ ಹೆದ್ದಾರಿಯ ಗುಡಿಗದ್ದೆ ಕ್ರಾಸ್‌ನಲ್ಲಿ ತಡರಾತ್ರಿ ಐವರು ವಾಹನಗಳನ್ನು ಅಡ್ಡಗಟ್ಟಿ ಅವರಿಂದ ಹಣ ಮತ್ತು ಮೊಬೈಲ್ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ದೋಚುವ ಹುನ್ನಾರ ನಡೆಸಿರುವ ಕುರಿತು ತಿಳಿದು ಬಂದ ತಕ್ಷಣ ದಾಳಿ ನಡೆಸಿದ ಪೊಲೀಸ್ ಸಬ್ ಇನ್ಸಪೆಕ್ಟರ್ ದೇವರಾಜ ಬೀರಾದಾರ ಮತ್ತು ಸಿಬ್ಬಂದಿಗಳು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವೀಯಾಗಿದ್ದಾರೆ. 
ರಾತ್ರಿ ೧೧.೩೦ರ ಸುಮಾರಿಗೆ ದೂರವಾಣಿ ಕರೆಯೊಂದು ಬಂದಿದ್ದು ಕರೆ ಮಾಡಿದ ವ್ಯಕ್ತಿ ಬೈಲೂರು ಗುಡಿಗದ್ದೆ ಕ್ರಾಸ್‌ನಲ್ಲಿ ಕೆಲವು ವ್ಯಕ್ತಿಗಳು ಕಬ್ಬೀಣದ ರಾಡ್ ಇತ್ಯಾದಿಗಳನ್ನು ಇಟ್ಟುಕೊಂಡು ದರೋಡೆ ಮಾಡುವ ಉದ್ದೇಶದಿಂದ ನಿಂತುಕೊAಡಿದ್ದಾರೆ ಎಂದು ತಿಳಿಸಿದ ಮೇರೆಗೆ ಸಬ್ ಇನ್ಸಪೆಕ್ಟರ್ ತಕ್ಷಣ ಸಿಬ್ಬಂದಿಗಳೊAದಿಗೆ ದಾಳಿ ಮಾಡಿದರು ಎನ್ನಲಾಗಿದೆ. ಈ ಸಮಯದಲ್ಲಿ ಮೂವರು ಪರಾರಿಯಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವೀಯಾಗಿದ್ದಾರೆ. ಅವರಿಂದ ಕಬ್ಬೀಣಡ ರಾಡ್, ಕಾರದ ಪುಡಿ ಪ್ಯಾಕೆಟ್ ಸೇರಿದಂತೆ ಇತರೇ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.  
ಬಂಧಿತ ಆರೋಪಿಗಳನ್ನು ಮಹಾರಾಷ್ಟçದ ಪುಣೆಯ ರಾಜೇಶ ತಂದೆ ಗಣೇಶ ಜಾಧವ (೨೩) ಹಾಗೂ ಪುಣೆಯ  ಅರ್ಜುನ್ ತಂದೆ ಹೀರಾಮನ್ ಸುಕ್ಳಿ (೧೯) ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳಿಗಳ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಕುರಿತು ದೇವರಾಜ ಬೀರಾದಾರ ಅವರು ನೀಡಿದ ದೂರಿನಂತೆ ಸಬ್ ಇನ್ಸಪೆಕ್ಟರ್ ಪರಮಾನಂದ ಕೊಣ್ಣೂರ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...