ಮುರ್ಡೇಶ್ವರ: “ಅಂಕೀಕರಣದೆಡೆಗೆ” ತರಬೇತಿ ಕಾರ್ಯಕ್ರಮ.

Source: satish | By Arshad Koppa | Published on 28th October 2017, 9:25 AM | Coastal News | Special Report |

ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ, ಭಟ್ಕಳ ಇವರ ಆರ್ಥಿಕ ಸಾಕ್ಷರತಾ ವಿಶೇಷ ಅಭಿಯಾನದ ಅಡಿಯಲ್ಲಿ, ಮುರ್ಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.), ಮುರ್ಡೇಶ್ವರದ ಸಹಕಾರದಲ್ಲಿ, ಸಿಂಡಿಕೇಟ್ ಬ್ಯಾಂಕ್‍ನ ಪ್ರಾಯೋಜಕತ್ವ ಹಾಗೂ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಸಹಕಾರ ಮತ್ತು ಆರ್ಥಿಕ ನೆರವಿನೊಂದಿಗೆ “ ಅಂಕೀಕರಣದೆಡೆಗೆ” ಎಂಬ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ, ಶ್ರೀ ಎಸ್. ಎಸ್. ಕಾಮತ್, ಆಡಳಿತ ಧರ್ಮದರ್ಶಿಗಳು, ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.), ಮುರ್ಡೇಶ್ವರ , ಉದ್ಘಾಟಕರಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಮುರ್ಡೇಶ್ವರದ ಶ್ರೀ ಸುನೀಲ್ ಅಲಜಂಜಿ ರವರು, ಅಥಿತಿಗಳಾಗಿ ಶ್ರೀಮತಿ ಆಶಾ ಕಾಮತ್, ಯೋಜನಾ ನಿರ್ದೇಶಕರು, ಮುರ್ಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.), ಮುರ್ಡೇಶ್ವರ, ಚಂದ್ರಕಲಾ ಕಾಮತ್, ವ್ಯವಸ್ಥಾ ನಿರ್ದೇಶಕಿ, ಮುರ್ಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.), ಮುರ್ಡೇಶ್ವರ , ಕೆ.ವಿ.ಜಿ. ಬ್ಯಾಂಕ್, ಮುರ್ಡೇಶ್ವರದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುರ್ಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.) , ಸಂಸ್ಥೆಯ ವಿದ್ಯಾರ್ಥಿನಿಯಾದ ಶ್ರೀಮತಿ ಸಂಗೀತಾ ಆರ್. ಭಟ್ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮವನ್ನು ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ, ಭಟ್ಕಳ ದ ಸಮಾಲೋಚಕಿಯಾದ ಕು. ಗೀತಾ ನಾಯ್ಕ ರವರು ಪ್ರಾಸ್ಥಾವಿಕ ನುಡಿಗಳನ್ನಾಡಿದರು. ನಂತರ ಉದ್ಘಾಟಕರು ಹಗೂ ಸಭಾಗಣ್ಯರೆಲ್ಲರೂ ಸೇರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಸುನೀಲ್ ಅಲಜಂಜಿಯವರು ಡಿಜಿಟಲ್ ವ್ಯವಹಾರದ ಉತ್ತೇಜನ ಕಾರ್ಯಕ್ರಮದ ಅಂಗವಾಗಿ, ಹಾಜರಿದ್ದ ಶಿಬಿರಾರ್ಥಿಗಳಿಗೆ ಮೊಬೈಲ್ ಬ್ಯಾಂಕಿಂಗ್, ಆಧಾರ್ ಆಧರಿತ ಪಾವತಿ ವಿಧಾನ, ಅಂತರ್ಜಾಲ ಬ್ಯಾಂಕಿಂಗ್ ಮುಂತಾದ ವಿಷಯಗಳ ಮೆಲೆ ಮಾಹಿತಿ ನೀಡಿ, ಶಿಬಿರಾರ್ಥಿಗಳ ಮೂಲಕವಾಗಿ ಪ್ರಾಯೋಗಿಕವಾಗಿ ಈ ವಿಷಯಗಳ ಬಗ್ಗೆ ವಿವರಿಸಿದರು. ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ, ಭಟ್ಕಳದ ಸಮಲೋಚಕರಾದ ಶ್ರೀ ದಯಾನಂದ ಗುಂಡು ರವರು, ಬ್ಯಾಂಕುಗಳಲ್ಲಿನ ಸಾಲ ಸೌಲಭ್ಯಗಳು ಹಾಗೂ ಇತರ ಸೇವೆಗಳ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿ, ಪ್ರಸ್ತುತ ಕೇಂದ್ರ ಸರಕಾರದ, ಸಾಮಾಜಿಕ ಸುರಕ್ಷಾ ಯೋಜನೆಯ ಅಡಿಯಲ್ಲಿನ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ, ಜೀವವಿಮೆ, ವೈದ್ಯಕೀಯ ವಿಮೆ, ಸಾಮಾನ್ಯ ವಿಮಾ ಪಾಲಿಸಿಗಳನ್ನು ಪಡೆದುಕೊಂಡು, ನೆಮ್ಮದಿಯಾಗಿ

ಬಾಳುವ ಪರಿಕಲ್ಪನೆಯನ್ನು ಶಿಬಿರಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಭಾಧ್ಯಕ್ಷರಾದ ಶ್ರೀ ಎಸ್. ಎಸ್. ಕಾಮತ್ ರವರು, ಬ್ಯಾಂಕಿನ ಸವಲತ್ತುಗಳ ವಿವರಣೆಯನ್ನು ನೀಡಿ, ವಿಶ್ವಾಸ ಪೂರ್ವಕವಾಗಿ ಬ್ಯಾಂಕಿನ ಸೌಲಭ್ಯಗಳನ್ನು ಬಳಸುವಂತೆ, ಶಿಬಿರಾರ್ಥಿಗಳಿಗೆ ನಿದರ್ಶನದೊಂದಿಗೆ ವಿವರಿಸಿದರು. ಶಿಬಿರಾರ್ಥಿಗಳೆಲ್ಲರಿಗೂ ಶುಭಕೋರಿ, ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಮಾಲೋಚಕರಾದ ಕು. ಗೀತಾ ನಾಯ್ಕ ಆಭಾರ ಮನ್ನಿಸಿ, ಎಲ್ಲರನ್ನು ಅಭಿನಂದಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...