ವನಹಳ್ಳಿ ಗ್ರಾಮವಾಸಿಯ ಕೊಲೆ ಪ್ರಕರಣ, ಆರೋಪಿತರ ಬಂಧನ

Source: SO News | By Laxmi Tanaya | Published on 14th January 2022, 10:06 PM | State News | Don't Miss |

ಧಾರವಾಡ:   ಹೆಬ್ಬಳ್ಳಿ ವನಹಳ್ಳಿ ರಸ್ತೆಯ ಪಕ್ಕದಲ್ಲಿರುವ ಹೊಲದ ಮ್ಯಾರಿಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ

 ಭೀಮಸಿ ಯಾನೆ ಭೀಮಪ್ಪ ಮಡಿವಾಳಪ್ಪ ಭಂಗಿ, ಶ್ರೀಶೈಲ ವೀರಭದ್ರಪ್ಪ ನರಗುಂದ, ರವಿ  ಶಂಕ್ರೆಪ್ಪ ಆರೆನ್ನವರ, ಮಂಜುನಾಥ ಗಂಗಪ್ಪ ಮಟ್ಟಿ ಬಂಧಿತರು.

ಜನವರಿ 12ರಂದು  ಶಿವಪ್ಪ  ನಿಂಗಪ್ಪ ಆರೆನ್ನವರ (56) ವನಹಳ್ಳಿ‌ಅವರನ್ನ ಹಣಕಾಸು ವಿಚಾರದಲ್ಲಿ ತಂಟೆ, ತಕರಾರು ಮಾಡಿಕೊಂಡು ವೈಮನಸ್ಸು ಬೆಳೆಸಿಕೊಂಡು  ಮುಖಕ್ಕೆ ಗುದ್ದಿ, ಯಾವುದೋ ವಸ್ತುವಿನಿಂದ ಕುತ್ತಿಗೆಗೆ ಬಿಗಿದು, ಎಳೆದು ಹಾಕಿ ಕೊಲೆ ಮಾಡಿದ್ದರು

 ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಪಿರ್ಯಾದಿ ಸಿದ್ದಾರೂಢ  ಶಿವಪ್ಪ ಆರೆನ್ನವರ ದೂರು ದಾಖಲಿಸಿದ್ದರು. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದರು.  ಆರೋಪಿ ಪತ್ತೆಗಾಗಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಎಂ.ಬಿ ಸಂಕದ ಅವರ ಮೇಲುಸ್ತುವಾರಿಯಲ್ಲಿ ತನಿಖಾಧಿಕಾರಿಗಳಾದ ಗರಗ ಸಿಪಿಐ ಎಸ್.ಸಿ.ಪಾಟೀಲ ಮತ್ತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಎಸ್.ವಿ.ಸತಾರೆ ಮತ್ತು ಪೊಲೀಸ್ ಸಬ್-ಇನ್ಸಪೆಕ್ಟರ್ ಸುಮಾ.ಎಂ.ಗೋರಾಬಾಳ  ಹಾಗೂ ಸಿಬ್ಬಂದಿಗಳು  ತನಿಖೆ ನಡೆಸಿ  ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Read These Next

ಭಟ್ಕಳ: ಬಿಜೆಪಿಯಿಂದ ಎನ್‌ಇಪಿ ಮೂಲಕ ನಾಗ್ಪುರ್ ಗುಪ್ತ ಕಾರ್ಯಸೂಚಿ: ಬಿ.ಕೆ.ಹರಿಪ್ರಸಾದ್

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯವನ್ನೂ ಅದರಲ್ಲೂ ಕರಾವಳಿಯನ್ನು ಕೇಸರೀಕರಣ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದು, ...

ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ; ಗ್ರಾಮೀಣ ವಿದ್ಯಾರ್ಥಿಗಳದೇ ಮೇಲುಗೈ; 145 ವಿದ್ಯಾರ್ಥಿಗಳಿಗೆ 625 ಅಂಕ

ಮಾರ್ಚ್ ತಿಂಗಳಿನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಬರೆದ ಒಟ್ಟು 8,53,436 ವಿದ್ಯಾರ್ಥಿಗಳ ಪೈಕಿ 7,30,881 ...

ಶಾಲಾ ಪಠ್ಯ ಪುಸ್ತಕಗಳು ಆರೆಸಸ್ ಮಯ; ಕೇಜ್ರಿವಾಲ್, ಭಗವಂತ್ ಮಾನ್ ಸಹಿತ ಹಲವು ಮುಖಂಡರಿಂದ ಆಕ್ರೋಶ

ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ರಂತಹ ರಾಷ್ಟ್ರ ಪ್ರೇಮಿಗಳ ಅಧ್ಯಾಯಗಳನ್ನು ಕಿತ್ತು ಹಾಕಿ, ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವೂ ...

ಪೊನ್ನಂಪೇಟೆಯಲ್ಲಿ ಸಂಘಪರಿವಾರದಿಂದ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ; ಸರಕಾರ ಜೀವಂತವಿದೆಯೇ? ಸಿದ್ದರಾಮಯ್ಯ ಆಕ್ರೋಶ

ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಾಲೆಯ ಆವರಣದಲ್ಲಿ ಬಜರಂಗದಳ ನಡೆಸಿದ ಬಂದೂಕು ತರಬೇತಿಯಂತಹ ಕಾನೂನು ವಿರೋಧಿ ಚಟುವಟಿಕೆಗಳಿಗೆ ಅವಕಾಶ ...