ಅನಧಿಕೃತ ಕಲ್ಲುಕೊರೆ : ಐದು ಆರೋಪಿಗಳು ಪೊಲೀಸರ ವಶಕ್ಕೆ

Source: S O News service | By Staff Correspondent | Published on 22nd February 2017, 8:06 PM | Coastal News | Incidents | Don't Miss |

ಮುಂಡಗೋಡ  : ಅನಧಿಕೃತವಾಗಿ ಕಲ್ಲಕೊರೆ ವ್ಯವಹಾರದಲ್ಲಿ ನಿರತರಾಗಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ನಾಗನೂರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಹನಮಾಪುರದ ಹನ್ಮಣ ದುರ್ಗಪ್ಪ ಗೌಡಗೇರಿ, ದೇವಂದ್ರ ಹನ್ಮಣ್ಣ ಗೌಡಗೇರಿ, ಗಣೇಶಪ್ಪ ಚಂದ್ರಪ್ಪ ಕಮ್ಮಾರ ರಾಮಾಪುರದ ಬಸವರಾಜ ರಾಮಣ್ಣ ವಡ್ಡರ. ಶಿಗ್ಗಾಂವ ತಾಲೂಕ ರಾಜುನಗರದ ಚಮನಸಾಬ ಹುಸೇನಸಾಬ ರಾಮಾಪುರ (ಟ್ರ್ಯಾಕ್ಟರ ಚಾಲಕ) ಬಂದಿತ ಆರೋಪಿಗಳು ದುರ್ಗಪ್ಪ ಹನ್ಮಣ್ಣ ಗೌಡಗೇರಿ ಓಡಿ ಹೋಗಿರುವ ಆರೋಪಿಯಾಗಿದ್ದಾನೆ
ಆರೋಪಿಗಳು ಸಂಬಂದ ಪಟ್ಟ ಇಲಾಖೆಯಿಂದ ಅಧಿಕೃತ ಪರವಾನಿಗೆ ಪಡೆಯದೇ ತಾಲೂಕಿನ ನಾಗನೂರ ಗ್ರಾಮದ ನಾಗಮ್ಮ ಸೋಮಣ್ಣ ವಡ್ಡರ ಎಂಬುವರ ಜಮೀನನಲ್ಲಿ ಅನಧಿಕೃತವಾಗಿ ಕಲ್ಲುಕೊರೆಯನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದ್ದು. ಸರಕಾರಕ್ಕೆ ಯಾವುದೇ ರಾಜಧನ ಅಥವಾ ಕರ ಭರಣ ಮಾಡದೇ ಮೋಸ ಮಾಡಿ ಕೃತ್ಯ ನಡೆಸುತ್ತಿದ್ದ ಎಂಬ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸ ಇನ್ಸಪೇಕ್ಟರ ಕಿರಣಕುಮಾರ ನಾಯಕ ಹಾಗೂ ಪಿ‌ಎಸ್‌ಆಯ್ ಲಕ್ಕಪ್ಪ ನಾಯಕ ನೇತೃತ್ವದಲ್ಲಿ ದಾಳಿನಡೆಸಿದ ಪೊಲೀಸರು ೬ ಜನ ಆರೋಪಿಗಳಲ್ಲಿ ೫ ಆರೋಪಿಗಳನ್ನು ಬಂದಿಸಿದ್ದಾರೆ
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ೪ ಲಕ್ಷ ರುಪಾಯಿಕ್ಕಿಂತ ಅಧಿಕ ಮೌಲ್ಯದ ಟ್ರ್ಯಾಕ್ಟರ ಸಹಿತ ಕಾಂಪ್ರೆಸ್, ಸ್ಪ್ಲೆಂಡರ ಮೊಟಾರ, ಕಬ್ಬಿಣದ ಹಾರೆಗಳು ವಶಪಡಿಸಿಕೊಂಡು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...