ಅನಾರೋಗ್ಯ ಪೀಡಿತ ವ್ಯಕ್ತಿ ನೇಣಿಗೆ ಶರಣು

Source: sonews | By Staff Correspondent | Published on 27th January 2018, 11:30 PM | Coastal News | |

ಮುಂಡಗೋಡ : ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೋಬ್ಬರು  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಾಗನೂರ ಹತ್ತಿರದ ಚಿಟಗೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು  ದೊಂಡು ಕಾಳು ಜಂಗಲೆ(50)  ಎಂದು ಗುರುತಿಸಲಾಗಿದ್ದು,  ಬಹಳ ದಿನಗಳಿಂದ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತಿದ್ದರು ಎನ್ನಲಾಗಿದೆ. ಎಷ್ಟೆ ಚಿಕಿತ್ಸೆ ಮಾಡಿದ್ದರೂ ಸಹ ಹೊಟ್ಟೆನೋವು ಗುಣವಾಗದ ಕಾರಣ ಮನನೊಂದು  ಮನೆಯಲ್ಲಿ ಯಾರೂ ಇಲ್ಲದಿದ್ದಾಗ  ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

 ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ
 

Read These Next