ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯ ಅತಿಕ್ರಮಣದಾರರ ಅರ್ಜಿಗಳನ್ನು ಸಮಗ್ರವಾಗಿ ಪುನರ್ ಪರಿಶೀಲನೆಗೆ ಆಗ್ರಹಿಸಿ ಪ್ರತಿಭಟನೆ

Source: S O News Service | By I.G. Bhatkali | Published on 4th June 2019, 8:25 PM | Coastal News | State News |

ಮುಂಡಗೋಡ:  ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯ ಅತಿಕ್ರಮಣದಾರರ ಅರ್ಜಿಗಳನ್ನು ಸಮಗ್ರವಾಗಿ ಪುನರ್ ಪರಿಶೀಲನೆಗೆ ಆಗ್ರಹಿಸಿ ಪ್ರಮುಖ 5 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇಂದು ನಗರದ ಪ್ರಮುಖ ಬೀದಿಗಳಲ್ಲಿ ಅರಣ್ಯ ಅತಿಕ್ರಮಣದಾರರ ಬೃಹತ್ ರ್ಯಾಲಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುತ್ತಿಗೆ, ಅಧಿಕಾರಿಯ ಗೈರು ಹಾಜರಿಗೆ ಉಗ್ರ ಪ್ರತಿಭಟನೆ, ಮಾತಿನ ಚಕಮಕಿಯು ಅರಣ್ಯ ಅತಿಕ್ರಮಣದಾರರ ಇಂದಿನ ಹೋರಾಟದ ವಿಶೇಷವಾಗಿತ್ತು.

ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಬಂದಿರುವ ಅರಣ್ಯ ಅತಿಕ್ರಮಣದಾರರು ಪ್ರವಾಸಿಮಂದಿರದ ಎದುರುಗಡೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಗೋಪಾಲಕೃಷ್ಣ ಇವರಿಗೆ ಮನವಿ ಅರ್ಪಿಸಲಾಯಿತು.

ಮುಂಡಗೋಡ ತಾಲೂಕಿನಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 7104 ಅರ್ಜಿಗಳು ಬಂದಿದ್ದು ಅವುಗಳಲ್ಲಿ 3318 ಅರ್ಜಿಗಳು ತಿರಸ್ಕಾರವಾಗಿದ್ದು ಕೇವಲ 305 ವೈಯಕ್ತಿಕ, ಸಮೂಹ ಮತ್ತು ಬುಡಕಟ್ಟು ವರ್ಗಕ್ಕೆ ಸೇರಿದವರಿಗೆ ಅರಣ್ಯ ಭೂಮಿ ಸಾಗುವಳಿ ಹಕ್ಕು ನೀಡಿದ್ದು ಇರುತ್ತದೆ. ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದ ವೈಫಲ್ಯದ ಹಿನ್ನೆಲೆಯಲ್ಲಿ ಅರಣ್ಯ ಸಾಗುವಳಿದಾರರು ಹಕ್ಕನ್ನು ಪಡೆದುಕೊಳ್ಳುವಲ್ಲಿ ವೈಫಲ್ಯತೆ ಹೊಂದುತ್ತಿರುವುದು ವಿಷಾದಕರ. ಮುಂಡಗೋಡ ತಾಲೂಕಿನಲ್ಲಿ ಅರಣ್ಯ ಹಕ್ಕು ಪಡೆದುಕೊಂಡಿರುವವರಲ್ಲಿ 226 ಬುಡಕಟ್ಟು ಜನಾಂಗ, ಪಾರಂಪರಿಕ ಅರಣ್ಯವಾಸಿಗಳ 21 ಕುಟುಂಬ ಹಾಗೂ ಸಮುದಾಯ ಉದ್ದೇಶಕ್ಕೆ 58 ನೀಡಲಾಗಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ತಾಲೂಕಿನಾದ್ಯಂತ ಬಂದಿರುವಂಥ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಬುಡಕಟ್ಟು ಜನಾಂಗ 727, ಸಮುದಾಯ ಉದ್ದೇಶಕ್ಕೆ 167 ಹಾಗೂ ಇತರೇ ಪಾರಂಪರಿಕ ಅರಣ್ಯವಾಸಿಗಳು 6,210 ಕುಟುಂಬಗಳು ಮಂಜೂರಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಿದ್ದು ಬಂದಂಥಹ ಅರ್ಜಿಗಳಲ್ಲಿ ಶೇ. 4.29 ರಷ್ಟು ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ. ಅರಣ್ಯಭೂಮಿ ಮೇಲೆ ಅವಲಂಬಿತವಾಗಿರುವ ಕುಟುಂಬಗಳಿಗೆ ಅರಣ್ಯಭೂಮಿಯಲ್ಲಿ ವಾಸ್ತವ್ಯ ಮತ್ತು ಸಾಗುವಳಿ ಮಾಡುವುದು ಅನಿವಾರ್ಯವಾಗಿದೆ. ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು 11 ವರ್ಷಗಳಾದರೂ ಮಂಜೂರಿ ಪ್ರಕ್ರಿಯೆ ಮಂದಗತಿಯಲ್ಲಿ ಜರುಗುತ್ತಿರುವುದು ವಿಷಾದಕರ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಸಭೆಯನ್ನುದ್ದೇಶಿಸಿ  ಭೂತೇಶ, ಹನುಮಂತಪ್ಪ ಕಾಡಿಗಿ, ಮಂಜುನಾಥ ಅಣ್ವೇಕರ, ರಾಮಾ ಜೋಗಿ ಚಳಗೇರಿ ಮಾತನಾಡಿದರು.

ಪ್ರತಿಭಟನಾ ರ್ಯಾಲಿಗೆ ಜಿಲ್ಲಾಧ್ಯಂತ ವಿವಿಧ ತಾಲೂಕುಗಳಿಂದ ಆಗಮಿಸಿದ ಹೋರಾಟಗಾರರಾದ ದೇವರಾಜ ಗೊಂಡ, ಕುಮಟಾದ ಮಂಜುನಾಥ ಮರಾಠಿ, ಯಲ್ಲಾಪುರದ ಭೀಮ್ಸಿ ವಾಲ್ಮೀಕಿ, ಉಚಗೇರಿ ಹಸಿರುಸೇನೆ ಪ್ರಾಂತ ರೈತ ಸಂಘದ ಅಧ್ಯಕ್ಷ ಮಂಜುನಾಥ ಶಾಸ್ತ್ರಿ, ಸಿದ್ದಾಪುರದ ಸೀತಾರಾಮ ಗೌಡ, ಪ್ರಭಾಕರ ನಾಯ್ಕ, ಹೊನ್ನಾವರದ ಸಂಚಾಲಕ ಮೋಹನ ಗೌಡ, ಸೀತಾರಾಮ ನಾಯ್ಕ, ಅಂಕೋಲಾದ ರಾಜೇಶ ನಾಯ್ಕ, ಜೋಯಿಡಾದ ದಯಾನಂದ ಮಿರಾಶಿ ಮುಂತಾದ ಪ್ರಮುಖರು ಭಾಗವಹಿಸಿರುವುದು ವಿಶೇಷವಾಗಿತ್ತು ಮುಂಡಗೋಡ ತಾಲೂಕಾಧ್ಯಕ್ಷ ಶಿವಾನಂದ ಜೋಗಿ, ಜಿಲ್ಲಾ ಸಂಚಾಲಕರಾದ ರಾಣೋಜಿ ಚಿಗಳ್ಳಿ, ಪ್ರಶಾಂತ ಜೈನ್, ಲಕ್ಷ್ಮಣ ವಾಲ್ಮೀಕಿ, ಗೌಸು ಖಾನ್, ಮಲ್ಲಿಕಾರ್ಜುನ, ಅಬ್ದುಲ್ ಚಪಾತಿ ಮುಂತಾದವರು ಉಪಸ್ಥಿತರಿದ್ದರು.
  
ಈ ಸಂದರ್ಭದಲ್ಲಿ ಒತ್ತಾಯಿಸಿದ ಪ್ರಮುಖ 5 ಬೇಡಿಕೆಗಳು :
ಅರ್ಜಿಗಳ ಪುನರ್ ಪರಿಶೀಲಿಸುವ ಸಂದರ್ಭದಲ್ಲಿ ಅರಣ್ಯವಾಸಿ ಅರ್ಜಿದಾರನಿಗೆ ವೈಯಕ್ತಿಕವಾಗಿ ಲಿಖಿತ ಮೂಲಕ ನೋಟೀಸು ನೀಡಿ ಅಹವಾಲು ಸಲ್ಲಿಸಲು ಅವಕಾಶ ನೀಡಬೇಕು. 2),ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯವು ನೀಡಿದ ಮಾರ್ಗಸೂಚಿಯಂತೆ ಗ್ರಾಮ ಸಭೆ ಅಥವಾ ಅರಣ್ಯ ಹಕ್ಕು ಸಮಿತಿಗಳು ಅರ್ಜಿಗಳನ್ನು ಪುನರ್ ಪರಿಶೀಲಿಸುವ ಸಮಯದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು ಹಕ್ಕಿಗೆ ಸಂಬಂಧ ಪರಿಗಣಿಸಬಹುದಾದ ಸಾಕ್ಷ್ಯಗಳ ಬಗ್ಗೆ ಮಾರ್ಗದರ್ಶನ ನೀಡುವಂತೆ ಸೂಕ್ತ ಕ್ರಮ ಜರುಗಿಸುವುದು. 3.) ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿಗಳು ತಿರಸ್ಕರಿಸಲ್ಪಟ್ಟು 1 ರಿಂದ 1 1/2 ವರ್ಷವಾದರೂ ಅರಣ್ಯವಾಸಿ ಅತಿಕ್ರಮಣದಾರರಿಗೆ ತಿರಸ್ಕøತ ಆದೇಶದ ಪ್ರತಿ ತಲುಪಿಸದೇ ಇರುವುದನ್ನು ಖಂಡಿಸುತ್ತಾ ಅತಿ ಶೀಘ್ರದಲ್ಲಿ ತಿರಸ್ಕøತಗೊಂಡ ಆದೇಶದ ಪ್ರತಿ ಅತಿಕ್ರಮಣದಾರರಿಗೆ ತಲುಪಿಸುವುದು. 4). ನೆನೆಗುದಿಗೆ ಬಿದ್ದಂತಹ ನಗರ ಅತಿಕ್ರಮಣದಾರರ ಅರ್ಜಿಗಳನ್ನು ಸಹಿತ ಪುನರ್ ಪರಿಶೀಲನೆ ಪ್ರಕ್ರಿಯೆಯಲ್ಲಿ ಅತೀ ಶೀಘ್ರದಲ್ಲಿ ಅಳವಡಿಸಿಕೊಳ್ಳುವುದು.  5) ರಾಜ್ಯ ಸರ್ಕಾರ ಪುನರ್ ಪರಿಶೀಲನೆಗೆ ನಿಗದಿಗೊಳಿಸಿದ ಜೂನ್ 30 ಕಾಲಮಾನದ ಸೀಮಿತ ಅವಧಿಯಲ್ಲಿ ಅರ್ಜಿ ವಿಲೇವಾರಿಗೆ ಅರಣ್ಯ ಅತಿಕ್ರಮಣದಾರರಿಗೆ ಅನ್ಯಾಯವಾಗದ ರೀತಿಯಲ್ಲಿ ಪ್ರಕ್ರಿಯೆ ಜರುಗಿಸುವುದು.

ಶಾಸಕರ ನಿರ್ಲಕ್ಷ್ಯ:
ಪ್ರತಿಭಟನಾ ರ್ಯಾಲಿಯು ಸಭೆಯನ್ನಾಗಿ ಪರಿವರ್ತನೆ ಗೊಂಡಂತಹ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಹೋರಾಟಗಾರರ ವೇದಿಕೆ ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ ಮಾತನಾಡುತ್ತಾ ಅರಣ್ಯ ಹಕ್ಕು ದೊರಕಿಸಿ ಕೊಡುವಲ್ಲಿ ಸಾಂಘಿಕ ಮತ್ತು ಕಾನೂನಾತ್ಮಕವಾದ ಹೋರಾಟವನ್ನು ಮುಂದುವರೆಸಲಾಗುವುದಲ್ಲದೇ ಮಂಜೂರಿ ಪ್ರಕ್ರಿಯೆಯಲ್ಲಿ ಶಾಸಕರುಗಳು ನಿರ್ಲಕ್ಷ್ಯತನ ತೋರುತ್ತಿರುವುದು ವಿಷಾದಕರ. ಅರಣ್ಯ ಭೂಮಿಮಂಜೂರಿಗೆ ಅರಣ್ಯವಾಸಿಗಳ ಪರವಾದ ಇಚ್ಛಾಶಕ್ತಿ ತೋರಿಸಬೇಕಿತ್ತು. ಅದರಲ್ಲಿಯೂ ಸ್ಥಳಿಯ ಶಾಸಕರು ಮಂತ್ರಿಗಿರಿ ಪಡೆಯಲು ಓಡಾಟವೇ ಹೆಚ್ಚಾಗಿದೆ ಹೊರತು ಮಂಜೂರಿ ಹಕ್ಕು ಕೊಡಿಸುವಲ್ಲಿ ನಿರಾಸಕ್ತಿ ಎದ್ದು ತೋರುತ್ತಿದೆ. ಇದು ಖಂಡನಾರ್ಹ ಎಂದು ಹೇಳಿದರು.

ಒಂದು ತಾಸಿಗೂ ಮಿಕ್ಕಿ ಕಚೇರಿಗೆ ಮುತ್ತಿಗೆ:
ಲಿಖಿತವಾಗಿ ಮುಂಚಿತವಾಗಿ ಪ್ರತಿಭಟನೆ ಕುರಿತು ತಿಳಿಸಿದ್ದಾಗ್ಯೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿರಸಿಗೆ ಹೋಗಿದ್ದು ಅಧಿಕಾರಿಗಳು ಬರಬೇಕೆಂದು ಆಗ್ರಹಿಸಿ ಒಂದು ತಾಸಿಗೂ ಮಿಕ್ಕಿ ಪ್ರತಿಭಟನಾಕಾರರು ಸಮಾಜ ಕಲ್ಯಾಣ ಅಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಲ್ಲದೇ ಅಧಿಕಾರಿ ಕಚೇರಿಗೆ ಬರುವವರೆಗೂ ಏರುಧ್ವನಿಯಲ್ಲಿ ಧಿಕ್ಕಾರ ಕೂಗಿದರು.

ನಿಮ್ಮ ಸರ್ಕಾರ ಇದ್ದ ದಾಖಲೆ ಕೊಡಿ:
ಮೂರು ತಲೆಮಾರಿನ ದಾಖಲೆ ಅಂದರೆ 75 ವರ್ಷದ ದಾಖಲೆ ಬೇಕಂತ ಕೇಳುತ್ತೀರಿ. 75 ವರ್ಷದ ಹಿಂದೆ ಸರ್ಕಾರ ಇದ್ದ ಬಗ್ಗೆ ಮೊದಲು ದಾಖಲೆ ಕೊಡಿ ನಂತರ ನಮ್ಮ ದಾಖಲೆ ಕೇಳಿರಿ ಎಂದು ಆದಿª
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...