ಮುಂಡಗೋಡ ರೋಟರಿ ಸಂಸ್ಥೆಯ ಪದಗ್ರಹಣ ಸಮಾರಂಭ

Source: sonews | By Staff Correspondent | Published on 15th July 2019, 10:48 PM | Coastal News |

ವಿಶ್ವದ 207 ದೇಶಗಳಲ್ಲಿ ರೋಟರಿ ಸೇವೆ ಇದೆ.  ರೋ. ಪಿ.ಡಿ.ಜಿ. ಮಹೇಶ ರಾಯ್ಕರ.

ಮುಂಡಗೋಡ :ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಪ್ರಶಾಂತ ಬಾಡಕರ, ಕಾರ್ಯದರ್ಶಿಯಾಗಿ ರೋ. ಬೈಜು.ವಿ.ಕೆ ಹಾಗೂ ಖಜಾಂಚಿಯಾಗಿ ರೋ. ಮಹೇಶ ಉಮಚಗಿ ಅಧಿಕಾರ ಸ್ವೀಕಾರ ಮಾಡಿದರು.

ಪಟ್ಟಣದ ಟ್ರೀನಿಟಿ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ರೋ. ಮಹೇಶ ರಾಯ್ಕರ 2019-20ನೇ ಸಾಲಿನ ಪದಾಧಿಕಾರಿಗಳಿಗೆ ಸೇವಾ ದೀಕ್ಷೆ ಯನ್ನು ನೀಡಿದರು.

ನೂತನ ಅಧ್ಯಕ್ಷ ಪದಗ್ರಹಣ ಮಾಡಿ ಮಾತನಾಡಿದ ರೋ. ಪ್ರಶಾಂತ ಬಾಡಕರ,  ತಮ್ಮ ಅಧಿಕಾರವಧಿಯಲ್ಲಿ ತಾಲೂಕಿನಲ್ಲಿ ನಿರುದ್ಯೋಗ ಅಳಿಸಲು ಪ್ರಯತ್ನ ಮಾಡಲಾಗುವುದು ಈ ದೀಶೆಯಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು ಮುಂಡಗೋಡ ತಾಲೂಕಿನಲ್ಲಿ  ಒಂದು ಶಾಶ್ವತ ಯೋಜನೆನ್ನು ಗ್ಲೋಬಲ್ ಗ್ರಾಂಡ್ ಮುಖಾಂತರ ಮಾಡಿ ಸಮಾಜಕ್ಕೆ ಕೊಡುಗೆ ನೀಡಲು ಪ್ರಯತ್ನಿಸಲಾಗುವುದು ಎಂದರು.

ನೂತನ ಪದಾಧಿಕಾರಿಗಳಿಗೆ ಸೇವಾ ದೀಕ್ಷೆ ಯನ್ನು ನೀಡಿ ಮಾತನಾಡಿದ ರೋ. ಮಹೇಶ ರಾಯ್ಕರ  ಇಂದು ವಿಶ್ವದ 207 ದೇಶಗಳಲ್ಲಿ ರೋಟರಿ ಸಂಸ್ಥೆಯು ಸಮುದಾಯಕ್ಕಾಗಿ ಸೇವೆ ಸಲ್ಲಿಸುತ್ತಿದೆ  ಅದರಲ್ಲಿ ಮುಂಡಗೋಡ ರೋಟರಿ ಸಂಸ್ಥೆಯು ಒಂದು.  ಜಗತ್ತಿನಿಂದ ಪೋಲಿಯೋ ನಿರ್ಮೂಲನೆ 1986 ರಿಂದ ಪಣತೊಟ್ಟ ರೋಟರಿ ಸಂಸ್ಥೆಯ ª ಅವಿರತ ಪ್ರಯತ್ನದಿಂದ ಜಗತ್ತಿನಲ್ಲಿ ಕೇವಲ ಮೂರು ದೇಶಗಳಲ್ಲಿ ಉಳಿದಿದೆ ಅದನ್ನೂ ಸಹಿತ ನಿರ್ಮೂಲೆ ಮಾಡಿ ಪೋಲಿಯೋ ಮುಕ್ತ ವಿಶ್ವ ಎಂದು ಘೋಷಿಸಲಿದ್ದೇವೆ ಎಂದರು. 

ಕ್ಲಬ್ಬಿನ ಅಸಿಸ್ಟಂಟ್ ಗವರ್ನರ ಶಿರಸಿಯ ರೋ. ಡಾ|| ದಿನೇಶ ಹೆಗಡೆ ಈ ವರ್ಷದ ರೋಟರಿ ಲಾಂಛನ ಬಿಡುಗಡೆ ಮಾಡಿ ಮಾತನಾಡಿ ಒಳ್ಳೆಯ ಕೆಲಸಕ್ಕಾಗಿ ನೆರವು ನೀಡಲು ದಾನಿಗಳು ಇದ್ದಾರೆ.  ಅದರ ಸದುಪಯೋಗವನ್ನು ನಾವು ಮಾಡಿಕೊಳ್ಳಬೇಕು.  ಈ ದಿಸೆಯಲ್ಲಿ ಅನುಭವವಿರುವ ಶಿರಸಿ ರೋಟರಿ ಕ್ಲಬ್ ಸಮುದಾಯಕ್ಕಾಗಿ ಕಳೆದ 3 ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ಮೊತ್ತದಲ್ಲಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.  ಇದರಲ್ಲಿ ರೋಟರಿ ಗ್ರಾಂಟ್ ಜೊತೆಗೆ ಸಾರ್ವಜನಿಕರ ಸಹಾಯ ಹಸ್ತವೂ ಇದೆ.  ಇದೇ ಮಾದರಿಯನ್ನು ಮುಂಡಗೋಡ ರೋಟರಿ ಕ್ಲಬ್ ಪ್ರಸಕ್ತ ವರ್ಷದಲ್ಲಿ ಅಳವಡಿಸಿಕೊಂಡು ಸುಮದಾಯಕ್ಕೆ ಒಳ್ಳೆಯ ಕೊಡುಗೆ ನೀಡಲಿ, ಅದಕ್ಕೆ ನಾನು ಮಾರ್ಗದರ್ಶನ ಮಾಡುತ್ತೇನೆ ಎಂದು ಹೇಳಿದರು.
ಪ್ರಾರಂಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಡಾ|| ಪಿ. ಪಿ. ಛಬ್ಬಿ  ಎಲ್ಲರನ್ನು ಸ್ವಾಗತಿಸಿದರು. ನಂತರ 2018-19ನೇ ಸಾಲಿನ ಕಾರ್ಯದರ್ಶಿ ಎಸ್. ಡಿ. ಮೂಡಣ್ಣನವರ ವರದಿ ವಾಚನ ಮಾಡಿದರು.  ವೇದಿಕೆ ಮೇಲೆ ಕಳೆದ ವರ್ಷದ ಖಜಾಂಚಿ ರೋ. ಚೇತನ ಕಲಾಲ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ  ಭರತನಾಟ್ಯ ಕಲಾವಿದರಿಂದ ನಾಟ್ಯ ಪ್ರದರ್ಶನ ನಡೆಯಿತು.  ಹಾಗೂ  ಉಪ  ಅರಣ್ಯಾಧಿಕಾರಿ ಯಲ್ಲಾನಾಯ್ಕ  ಇವರಿಂದ ವಿಷ ಹಾಗೂ ವಿಷ ರಹಿತ ಹಾವುಗಳ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು. ಕೊನೆಯಲ್ಲಿ ನೂತನ ಕಾರ್ಯದರ್ಶಿ ರೋ. ಬೈಜು. ವಿ. ಜೆ. ವಂದಿಸಿದರು. ಕಾರ್ಯಕ್ರಮದ ನಿರೂಪಣೆ ಎಸ್. ಕೆ. ಬೋರಕರ ಮತ್ತು ವಸಂತ ಕೊಣಸಾಲಿ ಮಾಡಿದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...