ಮುಂಡಗೋಡ : 73 ನೇ ಸ್ವಾತಂತ್ರ್ಯೋದಿನೋತ್ಸವ ಸಂಭ್ರಮದ ಆಚರಣೆ

Source: sonews | By Staff Correspondent | Published on 15th August 2019, 11:52 PM | Coastal News |


ಮುಂಡಗೋಡ :  ಆಂಗ್ಲರ ಗುಲಾಮಗಿರಿಯ ದಾಸ್ಯದಿಂದ ಮುಕ್ತಗೊಳಿಸಿ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಮಹನಿಯರನ್ನು ನೆನಪಿಸಿ ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಹಶೀಲ್ದಾರ ಶ್ರೀಧರ ಮುಂದಲಮನಿ ಹೇಳಿದರು.

ಅವರು ತಾಲೂಕಾ ಆಡಳಿತದಿಂದ ತಾಲೂಕ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ 73ನೇ ಸ್ವಾತಂತ್ರದಿನೋತ್ಸವದ ಧ್ವಜಾರೋಹಣ ಮಾಡಿ ಮಾತನಾಡಿದರು.
ದೇಶದ ಸ್ವಾತಂತ್ರಕ್ಕಾಗಿ ಪ್ರತಿಭಟನೆಯ ಮಂಚೂಣಿಯಲ್ಲಿದ್ದವರನ್ನು ನಾವು ನೆನಪಿಸಿಕೋಳ್ಳವುದು ಅತ್ಯವಶ್ಯ ಎಂದರು ಯಾರು ಯಾರನ್ನು ಟಿಕೀಸದೆ ದ್ವೇಷಿಸದೇ ಪರಸ್ಪರ ಪ್ರೀತಿ ಸಹಕಾರದಿಂದ ಬಾಳ್ವೆ ನಡೆಸಿ ದೇಶದ ಎಲ್ಲ ಸಮಸ್ಯೆಗಳು ಪರಿಹಾರವಾಗಿ ದೇಶ ಇನ್ನಷ್ಟು ಪ್ರಗತಿ ಪತದತ್ತ ಸಾಗುವುದು ಅವಶ್ಯವಾಗಿದೆ ಎಂದರು.

ನಾವು ನಡೆದು ಬಂದ ಹಾದಿಯನ್ನು ಅವಲೋಕಿಸಿದಾಗ ನಾವಿನ್ನು ಸಾಧಿಸಬೇಕಾದದು  ಬಹಳಷ್ಟಿದೆ ಎಂದುನ್ನು ನಾವೇಲ್ಲರೂ ಒಪ್ಪಿಕೊಳ್ಳಬೇಕು, ಮಹಿಳಾ ಸಬಲೀಕರಣ ಮಕ್ಕಳ ಹಕ್ಕು ರಕ್ಷಣೆ ದಿನ ದಲಿತರ ಸಮಗ್ರ ಅಭಿವೃದ್ದಿ ಇಂತಹ ಅಭಿವೃದ್ದಿ ಪರ ಚಿಂತನೆಗಳಿ ಒತ್ತು ಕೊಡಬೇಕಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಪಾರವಾದ ಪರಿಶ್ರಮದಿಂದ ವಿಶೇಷ ಸಾಧನೆ ಮಾಡಬೇಕಾಗಿದೆ. 

ರಾಜ್ಯ, ಜಿಲ್ಲಾ,ತಾಲೂಕಾದಲ್ಲಡೆ ಕಳೆದ ಹಲವು ದಿನಗಳಿಂದ ನಿರಂತರ ಮಳೆಯಿಂದ ಜಲ ಪ್ರವಾಹಕ್ಕೆ ಸಾವಿರಾರು ಜನರು ಮನೆ ಮಠಗಳನ್ನು ಕಳೆದುಕೊಂಡಿರುತ್ತಾರೆ ಕೋಟ್ಯಾಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಹಾಗೂ ಖಾಸಗಿ ವ್ಯಕ್ತಿಗಳು ನಷ್ಟಅನುಭವಿಸಿರುತ್ತಾರೆ ಪ್ರವಾಹ ಸಂತ್ರಸ್ತರಿಗೆ ಉಟೋಪಚಾರ ಆರೋಗ್ಯ ಸೌಲಭ್ಯ ಸಾಂತ್ವಾನ ನಈಡಿ ತತಕ್ಷಣ ಪರಿಹಾರ ನೀಡುವ ಕ್ರಮವನ್ನು ತಾಲೂಕಾಢಳಿತ ಕ್ರಮಕೈಗೊಂಡಿದೆ ಎಂದರು

ಸ್ವಾತಂತ್ರ ಹೋರಾಟಗಾರ್ತಿ ಚಲೇಜಾವೊ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸವಾಡಿದ ತಾಲೂಕಿನ ಸಾತಂತ್ರ ಹೋರಾಟಗಾರರ ಕೊನೆಯಕೊಂಡಿ ಲೀಲಾಬಾಯಿ ಇಂಗಳಕಿಯವರನ್ನು ಕಾರ್ಯಕ್ರಮದಲ್ಲಿ ತಾಲೂಕಾಡಳಿತದಿಂದ ಸನ್ಮಾನಿಸಲಾಯಿತು 

ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ, ಜಯಮ್ಮ ಕೃಷ್ಣ ಹಿರಳ್ಳಿ, ತಾ.ಪಂ ಇಒ ಪ್ರವೀಣ ಕಟ್ಟಿ, ಪಿಆಯ್ ಶಿವಾನಂದ ಚಲವಾದಿ, ಎಸಿಎಫ್ ವಾಲಿ, ಆರ್.ಎಫ್.ಒ ಸುರೇಶ ಕುಳ್ಳೋಳ್ಳಿ, ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು,  ತಾ.ಪಂ ಅಧ್ಯಕ್ಷೆ ಹಾಗೂ ಸದಸ್ಯರು ಮತ್ತು ಪಟ್ಟಣಪಂಚಾಯತ್ ಸದಸ್ಯರು ವಿವಿಧ ಸಂಘಟನೆಗಳ ಮುಖ್ಯಸ್ಥರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...