ಪತ್ರಿಕಾ ವರದಿಗಾರನಿಗೆ ಅಧಿಕ ಪ್ರಸಂಗಿ ಎಂದು ಸಂಭೋದಿಸಿದ : ಕೇಂದ್ರಸಚಿವ ಅನಂತಕುಮಾರ

Source: sonews | By Staff Correspondent | Published on 29th August 2018, 5:17 PM | Coastal News | State News | Don't Miss |

ಮುಂಡಗೋಡ:  ಆಗಸ್ಟ 31 ರಂದು ನಡೆಯಲಿರುವ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲವು ಸಾಧಿಸುವಂತೆ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದರು.

ಅವರು ಮಂಗಳವಾರ  ಪಟ್ಟಣದ  ಕಾಮಾಕ್ಷಿ ಬಿಲ್ಡಿಂಗ್‍ನಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಾಗೂ ಮುಖಂಡರ ಕರೆದ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸರಕಾರದ ಯೋಜನೆ ಹಾಗೂ ಸಾಧನೆಗಳ ಕುರಿತು ಹೇಳಿ ಮಾತು ಮುಗಿಸುತ್ತಿದ್ದಂತೆ ವೇದಿಕೆ ಮೇಲಿದ್ದ ಬಿಜೆಪಿ ಯುವಮೋರ್ಚಾದದ ಸುಮನ ಕುಲಕರ್ಣಿ ಅನಂತಕುಮಾರ ಅವರ ಜತೆ ಮಾತನಾಡುತ್ತಾ ನಮಗೆ ಪಕ್ಷದಲ್ಲಿ ಬೆಲೆಯೆ ಇಲ್ಲದಂತಾಗಿದೆ ಮೂರ್ನಾಲ್ಕು ಜನರು ತೆಗೆದುಕೋಳ್ಳುವ ನಿರ್ಣಯವೆ ಅಂತಿಮವಾಗಿದೆ. ನಾನು ನನ್ನ ಗಂಡ ಬಿಜೆಪಿ ಪಕ್ಷಕ್ಕಾಗಿ 20ವರ್ಷಗಳಿಂದ  ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ಪಟ್ಟಣಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡಲಿಲ್ಲ. ಗಂಡ ಹೆಂಡತಿಗೆ ಟಿಕೇಟ್ ನೀಡಲಾಗುತ್ತಿದೆ ನಮಗೇಕೆ ನೀಡಲಿಲ್ಲ  ಎಂದು ಅಸಮಧಾನ ಹೊರಹಾಕುತ್ತಿದ್ದಂತೆ ಪತ್ನಿ ಸಮೇತ ಚುನಾವಣೆಗೆ ಸ್ಪರ್ಧಿಸಿರುವ ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷ ಫಣಿರಾಜ ಹದಳಗಿ ಗಂಡ ಹೆಂಡತಿ ಅಂತಾ ಯಾಕೆ ಹೇಳುತ್ತೀರಿ ಆ ವಾರ್ಡನಲ್ಲಿ ಸ್ಪರ್ಧಿಸಲು ಯಾರೂ ಇಲ್ಲದಾಗಿತ್ತು ಅದಕ್ಕಾಗಿ ಪತ್ನಿಯನ್ನು ಕಣಕ್ಕಿಳಿಸಿದ್ದೆವೆ ನೀವು ಇಲ್ಲ ಸಲ್ಲದು ಮಾತನಾಡುವುದು ಸರಿಯಲ್ಲ ಸರಿಯಾಗಿ ಮಾತನಾಡಿ ಎಂದು ಹೇಳಿದಾಗ ಇಬ್ಬರ ಮಧ್ಯ ಮಾತಿನ ಚಕಮಕಿ ಆರಂಭವಾಯಿತು. ಇಬ್ಬರ ವಾದ ವಾಗ್ವಾದ ಕೇಳುತ್ತಿದ್ದ ಸಚಿವರು ಫಣಿರಾಜ ಹದಳಗಿ ಯವರಿಗೆ ಸುಮ್ಮನಿರಲು ಹೇಳುತ್ತಿದ್ದರು ಹೊರತು ಸುಮನ ಕುಲಕರ್ಣಿಯವರಿಗೆ ಸುಮ್ಮನಿರಲು ಒಂದುಮಾತು ಆಡಲಿಲ್ಲ ಎಂಬುದು ಚರ್ಚಾಗ್ರಾಸವಾಗಿದೆ. ಈ ಸನ್ನಿವೇಶವದ ಫೋಟೊ ಹಾಗೂ ವಿಡಿಯೋ ರೇಕಾರ್ಡಿಂಗ ಮಾಡುತ್ತಿದ್ದವರ ಮೇಲೆ ಹರಿಹಾಯ್ದ ಸಚಿವರು ಅಧಿಕಪ್ರಸಂಗಿತನ ಮಾಡುವುದು ನಿಲ್ಲಿಸಿ ಅಂದದ್ದು ವಿಡಿಯೋ ರಿಕಾರ್ಡಿಂಗ್ ಆಗಿದೆ.  
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಮ್ಮುಖದಲ್ಲಿ ಕಾರ್ಯಕರ್ತರಿಬ್ಬರು ಕಚ್ಚಾಡಿದ ಪ್ರಸಂಗ ಜರುಗಿದ್ದು ಬಿಜೆಪಿಯಲ್ಲಿ ಅಸಮಧಾನದ ಹೊಗೆ ಇದೆ ಎಂದು ಎತ್ತಿ ತೋರಿಸಿದೆ 

ಈ ಸಭೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ, ಮುಖಂಡರಾದ ಪ್ರಮೋದ ಹೆಗಡೆ, ಎಲ್.ಟಿ.ಪಾಟೀಲ, ಉಮೇಶ ಭಾಗ್ವತ್, ಬಸವರಾಜ ಓಶಿಮಠ, ಬಿಜೆಪಿ ತಾಲೂಕಾಧ್ಯಕ್ಷ ಗುಡ್ಡಪ್ಪ ಕಾತೂರ, ಉಮೇಶ ಬಿಜಾಪುರ, ವೈ.ಪಿ.ಪಾಟೀಲ, ಡಿ.ಎಫ್.ಮಡ್ಲಿ. ಮಹೇಶ ಹೊಸಕೊಪ್ಪ  ಮುಂತಾದವರಿದ್ದರು.

ಟಿಕೆಟ್ ನೀಡಿಲ್ಲ ಎಂಬ ಅಸಮಧಾನದಿಂದ ಕೆಂದ್ರ ಸಚಿವರ ಮುಂದೆ ನಡೆದಿದ್ದ ಮಾತಿನ ಚಕಮಕಿಯನ್ನು ಪತ್ರಿಕಾ ವರದಿಗಾರರು ಮೂಬೈಲ್‍ನಲ್ಲಿ ಚಿತ್ರಿಕರಿಸುತ್ತೀರುವುದನ್ನು ಕಂಡ ಕೇಂದ್ರ ಸಚಿವ “ ಏ ಅದು ಬಂದ್ ಮಾಡು ಅಧಿಕ ಪ್ರಸಂಗಿತನ ಮಾಡಬೇಡಾ” ಅಂತಾ ಹೇಳಿದರು. ಎದುರಿಗೆ ಇಬ್ಬರ ಮಧ್ಯ ಮಾತಿನ ಚಕಮಕಿ ತಾರಕ್ಕೇರುತ್ತಿದ್ದರು ಅವರನ್ನು ಸಮಾಧಾನ ಪಡಿಸದೆ ಸುಮ್ಮನೆ ನಿಂತಿದ ಕೇಂದ್ರ ಸಚಿವ ಮಾಧ್ಯಮದವರಿಗೆ ಅಧಿಕ ಪ್ರಸಂಗಿತನ  ಮಾಡಬೇಡಾ ಅಂತಾ ಹೇಳುವುದು ಎಷ್ಟು ಸರಿ. 


 

Read These Next

ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ