ಅರ್ಹತೆ ಇದ್ದವರು ಅಧಿಕಾರಕ್ಕೆ ಏರಬಹುದು ಜಾತಿಯಿಂದ ಅಲ್ಲ : ಮಾತೆ ಬಸವೇಶ್ವರಿ

Source: S O News Service | By Office Staff | Published on 25th January 2020, 8:31 PM | Coastal News |

ಮುಂಡಗೋಡ : ಅರ್ಹತೆ ಇದ್ದವರು ಅಧಿಕಾರಕ್ಕೆ ಏರಬಹುದು ಜಾತಿಯಿಂದ ಅಲ್ಲ ಎಂದು ತೋರಿಸಿಕೊಟ್ಟವರೆ ಬಸವೇಶ್ವರ ರು ಎಂದು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಹೇಳಿದರು
ಅವರು ಪಟ್ಟಣದ ಟೌನ್‍ಹಾಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಧ್ಯಯ ಶಿಬಿರದಲ್ಲಿ ಮಾತನಾಡಿದರು
ಇಂದು ಸಮಾಜದಲ್ಲಿ ಜಾತಿ ಅಸ್ಪøಶ್ಯತೆಯಿಂದ ಬಳಲುತ್ತಿದೆ ಹಾಗೂ ಅಂಗ ಅಸ್ಪøಶ್ಯತೆಯಿಂದ ಬಳಲುತ್ತಿದೆ ಇಂದೆಲ್ಲಾ ನಾಳೆ ಜಾತಿ ಅಸ್ಪøಶತೆ ಹೋಗಬಹುದು
ದ್ರಾವಿಡರ ಕಾಲದಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ ಊರಿನ ಎಲ್ಲ ಕೆಲಸಗಳನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡು ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಆರ್ಯರು ಬಂದ ನಂತರ ಕೆಲಸ ಮಾಡುವ ಜನರನ್ನು ನಿರ್ದಿಷ್ಟ ಜಾತಿಯಿಂದ ಗುರುತಿಸುವ ಕೆಲಸಮಾಡಿದರು ಮೇಲು ಕೀಳುಗಳನ್ನು ಸೃಷ್ಠಿಸಿದರು ಎಂದರು
ಬುದ್ದ,ಬಸವ,ಅಂಬೇಡ್ಕರ್ ಅವರು ಈ ದೇಶದ ಮೊಟ್ಟ ಮೊದಲ ವಿಚಾರವಾದಿಗಳು ಆಗಿದ್ದಾರೆ ಅವರನ್ನು ನವಭಾರತದ ನಿರ್ಮಾಪಕರು ಎಂದೂ ಕರೆಯಲಾಗುತ್ತಿದೆ.ಡಾ.ಬಾಬಾಸಾಹೇಬ ಅಂಬೇಡ್ಕರ ಉದ್ಯೋಗ ಭತ್ಯೆ ಹಾಗೂ ಹೆರಿಗೆ ಭತ್ಯೆ ಕೊಡಬೇಕೆಂದು ಧ್ವನಿ ಎತ್ತಿದವರೆ ಡಾ. ಅಂಬೇಡ್ಕರ. ಮಹಿಳೆಯರಿಗೆ ಹಕ್ಕುಗಳನ್ನು ಕೊಡಿಸಲು ನಿರಂತರ ಹೋರಾಟ ಮಾಡಿದ ಕೀರ್ತಿ ಅಂಬೇಡ್ಕರ ಅವರಿಗೆ ಸಲ್ಲುತ್ತದೆ ಎಂದರು 

ಕಾರ್ಯಕ್ರಮ ಉದ್ಘಾಟಿಸಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾತನಾಡಿದ ಹೆಣ್ಣೂರ ಶ್ರೀನಿವಾಸ ಜಾತಿ ಜಾತಿ ಎನ್ನುವುದನ್ನು ಪ್ರತಿಯೊಬ್ಬರು ಬೀಡಬೇಕು  ಮೇಲು ಕೀಳು ಎನ್ನದೆ ಎಲ್ಲರೂ ಪ್ರೀತಿ ವಿಶ್ವಾಸದಿಂದ ಕೆಲಸಮಾಡಿಕೊಂಡು ಹೋಗಬೇಕಿದೆ. ಸಂವಿಧಾನದಡಿ ಎಲ್ಲರಿಗೂ ಸಮಾನವಾದ ಹಕ್ಕನ್ನು ಅಂಬೇಡ್ಕರ ನೀಡಿದ್ದಾರೆ. ಬ್ರಾಹ್ಮಣರ ಜಾತಿಯಲ್ಲಿ ಬಸವಣ್ಣನವರು ಹುಟ್ಟಿದ್ದರೂ ಜಾತಿಯ ಸಮಾನತೆ ಬಗ್ಗೆ ಹೋರಾಡಿದವರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಎಸ್.ಫಕ್ಕಿರಪ್ಪ ಮಾತನಾಡಿ ಸಂವಿಧಾನವು ಎಲ್ಲರಿಗೂ ತಿಳುವಳಿಕೆ ನೀಡುವ ಉದ್ದೇಶದಿಂದ ಈ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು
ಮಹಿಳಾ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಅಕ್ಕಿ,ದಲಿತ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಡಿ.ಮೂಡೆಣ್ಣವರ, ಬಸವರಾಜ ಸಂಗಮೇಶ್ವರ, ಎಮ್.ಎಚ್.ಕಲಾಲ, ಬಸವರಾಜ ಹಳ್ಳೆಮ್ಮನವರ,ಕೆಂಜೋಡಿ ಗಲಿಬಿ, ತಿರುಪತಿ ಕೊಂಡ್ಲಿ, ವಿಜಯ ನರಸಿಂಹ, ದೀಪಕ ಕುಡಾಳಕರ, ಸಿ.ಕೆ.ಮಹೇಶ, ಟಿಬೇಟಿ ಲಾಮಾಗಳಾದ ತೆಂಜಿನ್ ಹಾಗೂ ಶೆರಪ್ಪ,ಮಾಲತೇಶ ಯಲ್ಲಾಪುರ, ಮರೀಶ ನಾಗಣ್ಣವರ ಮುಂತಾದವರು ಇದ್ದರು

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...