ಮುಂಡಗೋಡು ಮೂವರು ಅತ್ಯಾಚಾರ ಆರೋಪಿತರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ.

Source: SO News | By Laxmi Tanaya | Published on 21st October 2020, 10:26 PM | Coastal News |

ಮುಂಡಗೋಡ : ಮಜ್ಜಿಗೇರಿ ಗ್ರಾಮದಲ್ಲಿ ದಿನಾಂಕ 07-08-2014 ರಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಮೂವರು ಆರೋಪಿಗಳಿಗೆ ಕಾರವಾರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ FTSC-I (CFC)   ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದೆ.

 ಆರೋಪಿಗಳ ಮೇಲೆ  ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ  ಪಿಎಸ್ಐ  ಹೆಚ್.ಕೆ.ಪಠಾಣ  ಮಾನ್ಯ ನ್ಯಾಯಾಲಯಕ್ಕೆ ಆರೋಪಿತರ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

        ಕಾರವಾರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ FTSC-I (CFC)   ನ್ಯಾಯಾಧೀಶರಾದ  ಶಿವಾಜಿ ಅನಂತ ನಾಲ್ವಾಡೆ  ರವರು ಈ ಪ್ರಕರಣದ ವಿಚಾರಣೆ ಕೈಗೊಂಡು ಆರೋಪಿತರಾದ ನಾಗರಾಜ ಭರಮಣ್ಣ ಭೋವಿವಡ್ಡರ, ಈತನಿಗೆ 10 ವರ್ಷ ಜೈಲು, ಶಿಕ್ಷೆ , ರಮೇಶ ಯಲ್ಲಪ್ಪ ಭೋವಿ  ಮತ್ತು ಮಂಜುನಾಥ ಹನುಮಂತಪ್ಪ ಹಾವೇರಿ ಇವರಿಗೆ ತಲಾ 07 ವರ್ಷ  ಜೈಲು ಶಿಕ್ಷೆ ಹಾಗೂ 30,000/- ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

 ಆರೋಪಿತರೆಲ್ಲರೂ ಮಜ್ಜಿಗೇರಿ ಗ್ರಾಮದವರಾಗಿರುತ್ತಾರೆ. ಸರಕಾರದ ಪರವಾಗಿ ವಿಶೇಷ ಅಭಿಯೋಜಕರಾದ  ಸುಭಾಷ ಪಿ. ಖೈರಾನ್ ರವರು ವಾದವನ್ನು ಮಂಡಿಸಿದ್ದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...