ಕೊರೋನ ವೈರಸ್ ತಡೆಗೆ ಮುಂಡಗೋಡ ಪಟ್ಟಣ ಜನತೆ ಸ್ಟ್ರೀಕ್ಟ ನಿರ್ಧಾರ

Source: sonews | By Staff Correspondent | Published on 28th March 2020, 3:05 PM | Coastal News |

ಮುಂಡಗೋಡ ; ಕೊರೋನಾ ವೈರಸ್ ತಡೆಗೆ ಮುಂಡಗೋಡ ಜನತೆ ತುಂಬಾ ಜಾಗ್ರತೆ ವಹಿಸುತ್ತಿದ್ದಾರೆ ಎಂಬುದಕ್ಕೆ ಯಾವತ್ತೂ ಜನ ನಿಭೀಡದಿಂದ ತುಂಬಿರುತ್ತಿದ್ದ ಬಸ್ಟ್ಯಾಂಡ್ , ಹುಬ್ಬಳ್ಳಿ ಶಿರಸಿ ರಸ್ತೆ, ಬನ್ನಿಕಟ್ಟೆ ಯಲ್ಲಾಪುರ ರಸ್ತೆ , ಬಂಕಾಪುರ ರಸ್ತೆ ಬಿಕೋ ಬಿಕೋ ಎನ್ನುತ್ತಿರುವುದು ಸಾಕ್ಷಿಯಾಯಿತು.  ಪಟ್ಟಣದ ಮುಸ್ಲಿಂ ಬಾಂದವರು ಶುಕ್ರವಾರ ಮನೆಗಳಲ್ಲೇ ನಮಾಜ ಮಾಡಿಕೊಂಡಿದ್ದಾರೆ. ಶುಕ್ರವಾರದಿನ ನಮಾಜ ಹೊತ್ತಿಗೆ ನೂರಾನಿ ಮಸೀದಿ ಹತ್ತಿರ ಮುಸ್ಲೀಂ ಬಾಂದವರಿಂದ ತುಂಬಿ ತುಳುಕುತ್ತಿದ್ದ ಯಲ್ಲಾಪುರ ರಸ್ತೆ ಸ್ಥಬ್ಧವಾಗಿತ್ತು.

ಅತ್ಯವಶ್ಯಕ ವಸ್ತುಗಳನ್ನು ಖರೀಧಿಸಿವರು ಸಮಾಜಿಕ ಅಂತರದಲ್ಲಿ ಖರೀದಿಸುವುದು ಕಂಡು ಬಂದಿತು. ತಾಲೂಕಾ ದಂಡಾಧಿಕಾರಿ ಶ್ರೀಧರ ಮುಂದಲಮನಿ, ಪಿಆಯ್ ಶಿವಾನಂದ ಚಲವಾದಿ, ತಾಲೂಕ ಆರೋಗ್ಯ ಆಡಳಿತಾಧಿಕಾರಿ ಎಚ್.ಎಫ್.ಇಂಗಳೆ, ಪ.ಪಂ ಮುಖ್ಯಾಧಿಕಾರಿ ಸಂಗನಬಸ್ಯಯ್ಯ  ಆಯಾ ಪ್ರದೇಶಗಳಿಗೆ ರೌಂಡ್ಸ್ ಹೊಡೆಯುತ್ತಿರುವುದು ಕಂಡಬಂದಿತು. ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವಂದು ಗ್ರಾಮಗಳಲ್ಲಿ ಹೊರಗಿನವರು ಒಳಗೆ ಪ್ರವೇಶದಂತೆ ಗ್ರಾಮಸ್ಥರು ಮರದ ದಿನ್ನೆಗಳನ್ನು ಇಟ್ಟು ರಸ್ತೆಗಳನ್ನು ಬಂದ ಮಾಡಿದ್ದಾರೆ ಆದರೆ ಇನ್ನೂ ಹಲವರು ಗ್ರಾಮಗಳಲ್ಲಿ ಕೊರೋನಾ ವೈರಸ್ ತಡೆಗೆ ಜಾಗ್ರತೆಗೊಳ್ಳದೆ ಸಾರ್ವಜನಿಕರ ಸ್ಥಳಗಳಲ್ಲಿ ಸಂಚರಿಸುತ್ತಿರುವುದು ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಆಯಾ ಪ್ರದೇಶದ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ವಹಿಸುವುದು ಅವಶ್ಯವಾಗಿದೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...