ಹುಬ್ಬಳ್ಳಿ ನವನಗರ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸಿದ ಮುಂಡಗೋಡ ಪೊಲೀಸರು 

Source: sonews | By Staff Correspondent | Published on 16th November 2020, 10:08 PM | Coastal News | Incidents |

ಮುಂಡಗೋಡ: ಅತ್ಯಂತ ಕ್ಲಿಸ್ಟಕರವಾದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಮುಂಡಗೋಡ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಗೂ ಮುಂಡಗೋಡ ಕಾಡು ಪ್ರದೇಶದಲ್ಲಿ ಕೊಲೆ ಮಾಡಿ ಬೀಸಾಕಿ ಬಂದರೆ ಅದನ್ನು ಪತ್ತೆಹಚ್ಚಲು ಆಗುವುದಿಲ್ಲ ಎಂದುಕೊಂಡ ದುರುಳರಿಗೆ ಮುಂಡಗೋಡ ಪೊಲೀಸರು  ಎಂತಹ ಕ್ಲಿಸ್ಟಕರವಾದ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಹಾಗೂ ಪತ್ತೆ ಹಚ್ಚೆ ಹಚ್ಚುತ್ತಾರೆ ಎಂದು ತೋರಿಸಿಕೊಟ್ಟಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಹುಬ್ಬಳ್ಳಿಯ ನವನಗರದ 32 ವರ್ಷದ ವರದರಾಜ ಶ್ರೀನಿವಾಸ ನಾಯಕ ಪತ್ತೆಹಚ್ಚಲಾಯಿತು.

ಕೊಲೆಯಾದ ವ್ಯಕ್ತಿ ವರದರಾಜ ನಾಯಕ್

ಕೊಲೆ ಮಾಡಿದವರನ್ನು ಹುಬ್ಬಳ್ಳಿಯ ಉಣಕಲ್‍ನ ಅಭೀಷೇಕ ಶೇಟ್(ಪ್ರಮುಖ ಆರೋಪಿ), ಅಭೀಷೇಕನ ಸ್ನೇಹಿತರಾದ ಉಣಕಲ್ ನ ತಾಜನಗರದ ಸುರೇಶ ನೂರಪ್ಪ ಲಮಾಣಿ, ಹಾಗೂ ರಾಮಕುಮಾರ ಕೃಷ್ಣಾ ತಾಟಿಸಮ್ಲಾ ಹಾಗೂ ಕಾರಿನ ಕೀ ಮಾಡುವಲ್ಲಿ ಸಹಾಯ ಮಾಡಿದ ಮುಂಡಗೋಡ ಕಾತೂರ ಗ್ರಾಮದ ಬಸವರಾಜ ಅಜ್ಜಂನವರ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಪ್ರಕರಣದ ವಿವರ : 2020 ಏಪ್ರೀಲ್ ತಿಂಗಳಲ್ಲಿ ಮುಂಡಗೋಡ ತಾಲೂಕಿನ ನಾಗನೂರ ಕಾಡು ಪ್ರದೇಶದಲ್ಲಿ ಬೀಟ್ ಗಾರ್ಡ್ ಸಂಚಾರ ಮಾಡುತ್ತಿದ್ದಾಗ ದುರ್ವಾಸನೆ ಬಂದ ಕಡೆಗೆ ಹೋಗಿ ನೋಡಿದಾಗ ಕಾಡುಪ್ರಾಣಿಗಳು ಅರಬರೆ ತಿಂದ ಮಾನವನ ದೇಹದ ಭಾಗಗಳು ಅಲ್ಲಲ್ಲಿ ಬಿದ್ದಿದ್ದನ್ನು ಕಂಡು ಯಾರೋ ವ್ಯಕ್ತಿಯನ್ನು ಕೊಲೆ ಮಾಡಿ ತಂದು ಹಾಕಿರ ಬಹುದು ಎಂದು ಸಂಶಯಗೊಂಡು ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಲೆಯಾದ ವ್ಯಕ್ತಿ ವರದರಾಜ ನಾಯಕ ನ ತಾಯಿಯ ತಂಗಿ ಮಗ ಪ್ರಕರಣದ ಪ್ರಮುಖ ಆರೋಪಿ ಅಭೀಷೇಕ ಶೇಟ್. ವರದರಾಜ ಆಸ್ತಿಯನ್ನು ಹೊಂದಿದ್ದನು ಅವನನ್ನು ಇಲ್ಲವಾಗಿಸಿದರೆ ಆಸ್ತಿಯಲ್ಲಾ ತನ್ನದಾಗುತ್ತದೆ ಎಂದು ದುರಾಲೋಚನೆಯಿಂದ ಅವನನ್ನು ಕೊಲೆ ಮಾಡಲು ತನ್ನ ಸ್ನೇಹಿತರಾದ ಸುರೇಶ ನೂರಪ್ಪ ಲಮಾಣಿ, ಹಾಗೂ ರಾಮಕುಮಾರ ಕೃಷ್ಣಾ ತಾಟಿಸಮ್ಲಾ ರ ಜತೆಗೂಡಿ  ಸಂಚು ರೂಪಿಸುತ್ತಾನೆ. ಶಿರಸಿ ಕಡೆಗೆ ಪ್ರವಾಸಕ್ಕೆ ಹೋಗಣವೆಂದು ಮೃತ ವರದರಾಜ ನಾಯಕ ಗೆ ಒಪ್ಪಿಸುತ್ತಾನೆ. 2020 ಏಪ್ರೀಲ್ ತಿಂಗಳಲ್ಲಿ ಕಾರಿನಲ್ಲಿ ಪ್ರವಾಸಕ್ಕೆ ಹೊರಡುತ್ತಾರೆ ಮಾರ್ಗ ಮಧ್ಯ ವರದರಾಜ ನಿಗೆ ಮದ್ಯಪಾನ ಮಾಡಿಸುತ್ತಾರೆ ನಂತರ ಶಿರಸಿ ಮಾರ್ಗವಾಗಿ ಕಾರು ಓಡುತ್ತಿತ್ತು ಮಧ್ಯದ ಮುಂಡಗೋಡ ಗೆ ಬಂದಾಗ ಇದೇ ಸೂಕ್ತವಾದ ಸ್ಥಳ ಎಂದುಕೊಂಡು ಕಾತೂರ-ಉಮ್ಮಚ್ಚಗಿ ರಸ್ತೆಯ ನಾಗನೂರ ಕಾಡು ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ ಮೃತ ವರದರಾಜ ನೋಡನೆ ಜಗಳ ಪ್ರಾರಂಭಿಸುತ್ತಾರೆ. ನಡಕ್ಕೆ ಕಟ್ಟುವ ಬೆಲ್ಟ್ ನಿಂದ ಕುತ್ತಿಗಿಗೆ ಹಾಕಿ ಹಿಂದಿನಿಂದ ಜಗ್ಗುತ್ತಾರೆ ಆತನ ಪ್ರಾಣ ಪಕ್ಷೀ ಹಾರಿಹೋಗುತ್ತದೆ. ಈ ಸೇಣಸಾಟದಲ್ಲಿ ಚಾಲಕನ ಸ್ಥಳದಲ್ಲಿ ಕುಳಿತ್ತಿದ್ದ ಮೃತನ ಕಾಲು ಬಡಿದಿದ್ದ ಪರಿಣಾಮ ಕಾರಿನ ಚಾವಿ ಮುರಿದು ಹೋಗಿರುತ್ತದೆ ಅದಕ್ಕೆ ಮುಂಡಗೋಡ ಕಾತೂರ ಗ್ರಾಮದ ಬಸವರಾಜ ಅಜ್ಜಂನವರ ಸಹಕರಿಸುತ್ತಾನೆ. ಅಲ್ಲಿಂದ ಕಾಡಿನ ಪ್ರಾಣಿಗಳಿಗೆ ನೀರು ಕುಡಿಯಲು ನಿರ್ಮಿಸಿದ ಹೊಂಡದಲ್ಲಿ ಗುದ್ದಲಿಯಿಂದ ತಗ್ಗು ತೆಗೆದು  ಶವವನ್ನು ಮುಚ್ಚಿರುತ್ತಾರೆ. ಕೊಲೆಮಾಡಿದವರು ಮೃತ ವರದರಾಜ ತನ್ನ ಸಂಬಂದಿಕರ ಮನೆಯಲ್ಲಿರುತ್ತಾನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು ಕಾಣೆಯಾದ ಬಗ್ಗೆ ಯಾವ ಠಾಣೆಯಲ್ಲಿಯೂ ಪ್ರಕರಣದ ದಾಖಲಾಗದಂತೆ ನೋಡಿಕೊಂಡರು ಸಾಕ್ಷಿ ಸೀಗಬಾರದು ಎಂದು ಮೃತನು ಉಪಯೋಗಿಸುತ್ತಿದ್ದ ಮೋಬೈಲ್ ನ್ನು ಗೋವಾದ ಸಮುದ್ರದಲ್ಲಿ ಎಸೆದಿದ್ದರು.

ಪ್ರಕರಣ ಭೇದಿಸಿದ್ದು ಹೇಗೆ:  ಜಿಲ್ಲಾ ಎಸ್.ಪಿ ಯವರು ಅಪರಿಚಿತ ಶವಗಳ ಪತ್ತೆ ಹಾಗೂ ಕೊಲೆ ಪ್ರಕರಣದ ಭೇದಿಸುವ ನಿಟ್ಟಿನಲ್ಲಿ ಕಾರ್ಯಪಡೆ ರಚಿಸಿ ಕಾರ್ಯನಿರತರಾಗುವಂತೆ ತಿಳಿಸಿದ ಮೆರೆಗೆ ಮುಂಡಗೋಡ ಪೊಲೀಸ ಇನ್ಸಪೇಕ್ಟರ ಪ್ರಭುಗೌಡ ಡಿ.ಕೆ ಎಸ್‍ಪಿಯವರ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ ಕಾಡಿನ ಪ್ರಾಣಿಗಳು ತಿಂದು ಹೋದದಂತ ಹಾಗೂ  ಯಾರೂ ಗುರುತಿಸಲೂ ಸಾಧ್ಯವಿಲ್ಲದಂತ ಶವವನ್ನು ಪ್ರಭುಗೌಡರ ಸತತ ಪ್ರಯತ್ನ ಹಾಗೂ ತಮ್ಮ ಕಾರ್ಯಪಡೆಯ ಸಿಬ್ಬಂದಿ ಸಹಕಾರದಿಂದ ಕೊಲೆ ಆರೋಪಿಗಳನ್ನು ಬಂದಿಸುವಲ್ಲಿ ಹಾಗೂ ಪ್ರಕರಣಕ್ಕೆ ಉಪಯೋಗಿಸಿದ ಕಾರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣವನ್ನು ಭೇದಿಸಲು ಜಿಲ್ಲಾ ಎಸ್.ಪಿ. ಶಿವಪ್ರಕಾಶ ದೇವರಾಜು, ಹೆಚ್ಚುವರಿ ಎಸ್.ಪಿ ಎಸ್.ಬದ್ರಿನಾಥ, ಶಿರಸಿ ಡಿಎಸ್‍ಪಿ ಜಿ.ಟಿ.ನಾಯಕ್ ಮಾರ್ಗದರ್ಶನದಲ್ಲಿ ಪೊಲೀಸ ಇನ್ಸಪೇಕ್ಟರ ಪ್ರಭುಗೌಡ.ಡಿ.ಕೆ, ಪಿಎಸ್‍ಆಯ್ ಬಸವರಾಜ ಮಬನೂರ, ಪಿಎಸ್‍ಆಯ್ ಮೋಹಿನಿ ಶೇಟ್ಟಿ, ಎ.ಎಸ್.ಆಯ್ ಅಶೋಕ ರಾಠೋಡ, ಸಿಬ್ಬಂದಿಗಳಾದ ಶರತ್ ದೆವಳ್ಳಿ, ಭಗವಾನ ಗಾಂವಕರ,ವಿನೋದಕುಮಾರ ಜೆ.ಬಿ, ರಾಘವೇಂದ್ರ ನಾಯಕ್, ಅರುಣ ಬಾಗೇವಾಡಿ,ಕುಮಾರ ಬಣಕಾರ,ವಿವೇಕ ಪಠಗಾರ, ತಿರುಪತಿ ಚೌಡಣ್ಣವರ ಹಾಗೂ ರಾಘವೇಂದ್ರ ಪಠಗಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...