ಮುಂಡಗೋಡ: ದಾಸ್ತಾನಿಟ್ಟ ಗೋಧಿಯಲ್ಲಿ ಹುಳುಗಳು-ಬಹಿರಂಗ ಪಡಿಸಿದ ಬಿಜೆಪಿ ಮುಖಂಡರು

Source: nazir | By Arshad Koppa | Published on 24th October 2017, 8:49 AM | Coastal News | Special Report |

ಮುಂಡಗೋಡ : ಸುಮಾರು ಒಂದು ವರ್ಷದಿಂದ ಗೋಧಿಯನ್ನು ವಿತರಣೆ ಮಾಡದೇ ಮಾರ್ಕೇಟಿಂಗ್ ಸೊಸೈಟಿಯ ಗೋದಾಮಿನಲ್ಲಿ 8-10 ತಿಂಗಳಿಂದ ಶೇಖರಣೆ ಮಾಡಿದ್ದರಿಂದ ಬಡವರ ಪಡಿತರ ವಿತರಣೆಗೆ ಬಂದ ಗೋಧಿಯಲ್ಲಿ ಹುಳು-ಹುಪ್ಪಡಿ ತುಂಬಿ ಉಪಯೋಗಕ್ಕೆ ಬಾರದಂತ ಸ್ಥಿತಿ ತಲುಪಿದನ್ನು ಬಿಜೆಪಿ ಮುಖಂಡರಾದ ನರಸಿಂಹ ಕೊಣೇಮನೆ, ಗುಡ್ಡಪ್ಪ ಕಾತೂರ, ಯಲ್ಲಪ್ಪ ನಾಯಕ, ಉಮೇಶ ಬಿಜಾಪುರ, ರಾಮು ನಾಯ್ಕ, ಅಶೋಕ ಚಲವಾದಿ, ಚೆನ್ನಪ್ಪ ಹಿರೇಮಠ ಸೋಮವಾರ ಮಾಕೇಟಿಂಗ ಸೊಸೈಟಿಯ ಗೋದಾಮಿ ಭೇಟಿನೀಡಿ ಬಹಿರಂಗ ಪಡಿಸಿದರು.


ಪಟ್ಟಣದ ಮಾರ್ಕೆಟಿಂಗ ಸೋಸೈಟಿ ಗೋದಾಮಿನಲ್ಲಿ ಸುಮಾರು 56.90 ಕ್ವಿಲ್ ಗೋಧಿಯನ್ನುದಾಸ್ತಾನಿಟು 1 ವರ್ಷ ಕಳೆದರೂ ವಿತರಣ ಮಾಡಲಿಲ್ಲ. ಅದು ಹಾಳಾಗಿ ಹುಳ-ಹುಪ್ಪಡಿ ಯಿಂದ ತುಂಬಿಹೋಗಿದೆ ಫುಡ್ ಕಾರ್ಪೋರೇಷ್‍ನನ್ ಆಫ್ ಇಂಡಿಯಾ ದಿಂದ ರಾಜ್ಯಕ್ಕೆ ಗೋಧಿ ಸರಬರಾಜಾಗುತ್ತದೆ. ರಾಜ್ಯದಲ್ಲಿ ಪಡಿತರ ಅಂಗಡಿಗಳಿಗೆ ವಿತರಿಸುವ ಗುತ್ತಿಗೆಯನ್ನು ಎಫ್.ಸಿಐ ಕಂಪನಿಗೆ ನೀಡಲಾಗಿದೆ. ಆದರೆ ರಾಜ್ಯ ಸರಕಾರ ಗೋಧಿ ವಿತರಣೆ ಮಾಡುವುದನ್ನು ತಡೆಹಿಡಿದು ಗೊಡೌನಗಳಲ್ಲಿ ದಾಸ್ತಾನಿಟ್ಟಿದೆ. ಇದರಿಂದ ಗೋಧಿ ಹಾಳಾಗುತ್ತಿದೆ
ಸರಕಾರದ ಈ ಆದೇಶದಿಂದ ಬಡವರಿಗೆ ಬಂದ ಗೋಧಿಯನ್ನು ದಾಸ್ತಾನಿಟ್ಟು ಕೊಳೆಸುತ್ತಿರುವುದು ಯಾರೆಂಬುದನ್ನು ಸಾರ್ವಜನಿಕರು ಊಹಿಸಿದ್ದಾರೆ.


ಪಡಿತರ ಅಂಗಡಿಗಳಿಗೆ ವಿತರಿಸುವ ಅಕ್ಕಿ ಮತ್ತು ಹುಳು ಹುಪ್ಪಡಿ ತುಂಬಿರುವ ಗೋಧಿಯನ್ನು ಒಂದೇ ಕಡೆ ದಾಸ್ತಾನಿಟ್ಟಿದ್ದಾರೆ. ಗೋಧಿಯ ಹುಳ ಅಕ್ಕಿಗೆ ಸೇರುತ್ತದೆ. ಬಡವರಿಗೆ ವಿತರಣೆ ಮಾಡುವ ಪಡಿತರದ ಬಗ್ಗೆ ಸೂಕ್ತ ಕ್ರಮ ಕೈಗೊಂಡು  ಗೋಧಿಯನ್ನು ವಿಲೆವಾರಿ ಮಾಡಬೇಕು 
  ಹೇಳಿಕೆ 1 : “ಬಡವರಿಗೆ ಬಂದಂತಹ ಗೋಧಿಯನ್ನು ಪಡಿತರದಾರರಿಗೆ ಹಂಚದೇ ಗೋಧಿಯನ್ನು ಹುಳು ಹುಪ್ಪಡಿ ಯಿಂದ ತುಂಬಿರುವಂತೆ ಮಾಡಿದ್ದಾರೆ ಇದು ಉಪಯೋಗಕ್ಕೆ ಬಾರದಂತಹ ಸ್ಥಿತಿ ತಲುಪಿದ್ದು  ಈ ಲುಕ್ಸಾನಕ್ಕೆ  ರಾಜ್ಯ ಸರಕಾರ ನೇರಹೊಣೆ”
‘ನರಸಿಂಹ ಕೊಣೇಮನೆ ಬಿಜೆಪಿ ಮುಖಂಡರು ಯಲ್ಲಾಪುರ’
ಹೇಳಿಕೆ 2 “ದಾಸ್ತಾನು ಇಟ್ಟಿರುವ ಕುರಿತು ಪ್ರತಿ ತಿಂಗಳು ಇಲಾಖೆಗೆ ಮಾಹಿತಿ ನೀಡಿದ್ದೇವೆ. ಗೋಧಿಯಲ್ಲಿ ಹುಳುವಾದ ಕುರಿತು ಇಲಾಖೆಗೆ ತಿಳಿಸಿದ್ದೇನೆ.”
 ‘ವಿ.ಪಿ ಶೆಟ್ಟಪ್ಪನವರ ಫುಡ್ ಶಿರಸ್ತೆದಾರ’

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...