ಮುಂಡಗೋಡ : ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಹಬ್ಬ ಆಚರಣೆ

Source: sonews | By Staff Correspondent | Published on 1st August 2020, 5:36 PM | Coastal News |

ಮುಂಡಗೋಡ: ತಾಲೂಕಾದ್ಯಂತ ತ್ಯಾಗ ಮತ್ತು ಬಲಿದಾನ ಸಂದೇಶ ಸಾರುವ ಬಕ್ರೀದ್ (ಈದ್-ಉಲ್-ಝುಹಾ)ಹಬ್ಬವನ್ನು ಮುಸ್ಲೀಂ ಬಾಂದವರು ಶ್ರದ್ಧಾ, ಭಕ್ತಿ, ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.

ಮುಸ್ಲೀಂ ಬಾಂಧವರು ಶನಿವಾರ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮಸಿದಿಗಳಲ್ಲಿಯೇ ನಮಾಜ ಮಾಡಿದರು.  ಪಟ್ಟಣದ ನೂರಾನಿ ಮಸ್ಜೀದ, ಮದಿನಾ ಮಸ್ಜೀದ, ರಜಾಕೀಯಾ ಮಸ್ಜೀದ, ಬಿಲಾಲ್ ಮಸ್ಜೀದ ಹಾಗೂ ಮಕ್ಬೂಲಿಯಾ ಮಸೀದ ಗಳಲ್ಲಿ ಬೆಳಗ್ಗೆ 7 ಗಂಟೆಗೆ  ಬಕ್ರೀದ್ ಹಬ್ಬದ್ ವಿಶೇಷ ಪ್ರಾರ್ಥನೆಸಲ್ಲಿಸಿದರು.

ಮಳೆಯ ಬಿಡುವು ಇದ್ದರೂ ಈದ್‍ಗಾ ಕ್ಕೆ ಹೋಗದೆ ಮಸಿದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು ಮಸೀದಿಗಳನ್ನು ಸೆನಿಟೈಸರ್ ಮಾಡಲಾಗಿತ್ತು, ಪ್ರಾರ್ಥನೆ ಸಲ್ಲಿಸುವವರು ಮಾಸ್ಕ ಧರಿಸಿ ಮಸೀದಿಗಳಿಗೆ ಬಂದಿದ್ದರು, ನಮಾಜಮಾಡಲು ತಮ್ಮ ತಮ್ಮ ಜಮಖಾನೆಗಳನ್ನು (ಜಾನಮಾಜ) ತಂದಿದ್ದರು. ಪ್ರಾರ್ಥನೆ ಸಮಾಜಿಕ ಅಂತರದಲ್ಲಿ  ನೆರವೇರಿಸಲಾಯಿತು.

ನಮಾಜ ಮುಗಿದ ನಂತರ ಆಲಿಂಗಿಸಿಕೊಂಡು ಹಬ್ಬದ ಸಂತೋಷವನ್ನು ವಿನಿಮಯ ಮಾಡಿಕೊಳ್ಳದೆ ದೂರದಿಂದಲೇ ಹಬ್ಬದ ಸಂತೋಷ ವನ್ನು ವಿನಿಮಯ ಮಾಡಿಕೊಂಡರು ಮುಸ್ಲೀಂ ಬಾಂಧವರು ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸರಕಾರ ಹೊರಡಿಸಿದ ನಿಯಮಾವಳಿ ಪ್ರಕಾರವೆ ಮಾಡಿದರು.

Read These Next

ಸೌದಿ ಅರೇಬಿಯಾದ ತಾಯಿಫ್‌ನಲ್ಲಿ ಕಾರು ಅಪಘಾತ ಉಡುಪಿ ಜಿಲ್ಲೆಯ ಯುವಕನ ಸಾವು ಮತ್ತೊಬ್ಬ  ಗಂಭೀರ

ಭಟ್ಕಳ:  ಸೌದಿ ಅರೇಬಿಯಾದ ತಾಯಿಫ್‌ ಎಂಬಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ  ಉಡುಪಿ ಜಿಲ್ಲೆಯ ಗಂಗೋಳಿ ನಿವಾಸಿಗಳಾದ ಮುಹಮ್ಮದ್ ...