ಮುಂಬೈ:ಆಗಸ್ಟ್ 20 ರಂದು ಕು| ತನ್ವಿ ಸುಂದರ್ ಕಾಂಚನ್ ಭರತನಾಟ್ಯ ರಂಗ ಪ್ರವೇಶ

Source: ganesh rai | By Arshad Koppa | Published on 14th August 2017, 7:53 AM | National News | Guest Editorial |

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಭರತನಾಟ್ಯ ಕಲಿಯುತಿರುವ ಕು| ತನ್ವಿ ಸುಂದರ್ ಕಾಂಚನ್ ಭರತನಾಟ್ಯ ರಂಗ ಪ್ರವೇಶ 2017 ಆಗಸ್ಟ್ 20 ರಂದು ಮುಂಬೈ, ಮಾತುಂಗ ಈಸ್ಟ್ ನಲ್ಲಿರುವ ಮೈಸೂರ್ ಅಸೋಸಿಯೇಶನ್ ಸಭಾಂಗಣದಲ್ಲಿ ಬೆಳಿಗ್ಗೆ 9.30 ಗಂಟೆಯಿಂದ ನಡೆಯಲಿದೆ.

ವಿದೂಷಿ ರೋಹಿಣಿ ಅನಂತ್ ಶಿಷ್ಯೆಯಾಗಿರುವ ಕು| ತನ್ವಿ ಸುಂದರ್ ಕಾಂಚನ್ ಭರತನಾಟ್ಯ ರಂಗಪ್ರವೇಶ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪ್ರಸಿದ್ದ ನೃತ್ಯ ಗುರು ಶ್ರೀ ವಿಜಯ ಶಂಕರ್, ಡಾ. ಗುರು ಮೀನಾಕ್ಷಿ ಶ್ರಿಯನ್, ಮಧ್ಬರತ ಮಂಡಳಿ, ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಮುಂಬೈ ಅಧ್ಯಕ್ಷರಾದ ಶ್ರೀ ಜಗನ್ನಾಥ ಪಿ. ಪುತ್ರನ್ ಉಪ್ಪೂರು, ಗೌರವ ಅತಿಥಿಗಳಾಗಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಟ್ರಷ್ಠಿ ಶ್ರೀ ಪುರಂದರ್ ಎನ್. ಸುವರ್ಣ ಹೊಸಬೆಟ್ಟು, ಮುಂಬೈ ಮೊಗವೀರ್ಸ್ ಸಹಕಾರಿ ಬ್ಯಾಂಕ್ ಮಾಜಿ ಚೇರ್ಮನ್ ಶ್ರೀ ಕೀರ್ತಿರಾಜ್ ಕೆ. ಸಾಲಿಯಾನ್ ಭಾಗವಹಿಸಲಿದ್ದಾರೆ.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಶ್ರೀಮತಿ ಶಶಿಕಲ ಕಾಂಚನ್ ಮತ್ತು ಶ್ರೀ ಸುಂದರ್ ಕಾಂಚನ್ ದಂಪತಿಗಳ ಪುತ್ರಿ ಕು| ತನ್ವಿ ಸುಂದರ್ ಕಾಂಚನ್ ಶಾರ್ಜದಲ್ಲಿರುವ ಅವರ್ ಹೋನ್ ಗಲ್ರ್ಸ್ ಹೈಸ್ಕೂಲ್‍ನಲ್ಲಿ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಾಳೆ. ಪಠ್ಯದಲ್ಲಿ ಉನ್ನತ ಸ್ಥಾನದಲ್ಲಿದ್ದು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯಂತ ಆಸಕ್ತಿಯೊಂದಿಗೆ ಭರತನಾಟ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. 

ತನ್ನ ಎಂಟನೆಯ ವಯಸ್ಸಿನಲ್ಲೇ ಭರತನಾಟ ಅಭ್ಯಾಸಕ್ಕೆ ಪಾದರ್ಪಣೆ ಮಾಡಿದ್ದು  ಕಲಾಕ್ಷೇತ್ರ ಫೈನ್ ಆಟ್ರ್ಸ್ ಗುರು ಸಹದೇವ್ ಮತ್ತು ಗುರು ಶೀಲಾ ಸಹದೇವ್ ರವರಿಂದ ಪ್ರಾರಂಭದ ನೃತ್ಯ ಅಭ್ಯಾಸವನ್ನು ಕಲಿತು ನಂತರ  ಕ್ಲಾಸಿಕಲ್ ರಿದಂಸ್ ನ ವಿದೂಷಿ ರೋಹಿಣಿ ಅನಂತ್ ರವರ ತಪೋಭೂಮಿಯಲ್ಲಿ ಕಳೆದ ಎಂಟು ವರ್ಷಗಳಿಂದ ತನ್ನ ಶಾಸ್ತ್ರೀಯ ನೃತ್ಯ ಅಭ್ಯಾಸ ಮುಂದುವರೆಸಿಕೊಂಡು ಬರುತಿದ್ದಾಳೆ. 

ಸಿನಿಯರ್ "ನೃತ್ಯ ಭೂಷಣ್" ಡಿಪ್ಲೋಮ ಪರೀಕ್ಷೆ ಮುಗಿಸಿರುವ ತನ್ವಿ ಸುಂದರ್ ಕಾಂಚನ್ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಭಾರತೀಯ ಮತ್ತು ಕರ್ನಾಟಕ ಪರ ಸಂಘಟನೆಗಳ ಪ್ರತಿಷ್ಠಿತ ವೇದಿಕೆಗಳಲ್ಲಿ  ಕರ್ನಾಟಕ ರಾಜ್ಯೋತ್ಸವ, ಭಾರತೀಯ ದೂತವಾಸ ಕಛೇರಿಯ ರಂಗ ಮಂದಿರಗಳಲ್ಲಿ ರಾಷ್ಟ್ರೀಯ ಹಬ್ಬಗಳು, ಇನ್ನಿತರ ಪ್ರಮುಖ ಸಮಾರಂಭಗಳಲ್ಲಿ ತನ್ನ ಅದ್ಭುತ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ಪ್ರೇಕ್ಷಕರ ಮನ ಸೆಳೆದಿದ್ದಾಳೆ. 

ಭಾರತೀಯ ಶ್ರೀಮಂತ ಕಲೆ ನಾಟ್ಯಶಾಸ್ತ್ರದಲ್ಲಿ ಶಾಸ್ತ್ರೀಯವಾಗಿ ಅಭ್ಯಾಸವನ್ನು ಮಾಡಿ ಇದೀಗ ನೃತ್ಯ ವಿಧೂಷಿ ರೋಹಿಣಿ ಅನಂತ್ ರವರ ಶಿಷ್ಯೆಯಾಗಿ ಆಶೀರ್ವಾದದೊಂದಿಗೆ ಭರತನಾಟ್ಯ ರಂಗ ಪ್ರವೇಶ (ಅರಂಗೆಟ್ರಂ) ಮೂಲಕ ಶಾಸ್ತ್ರೀಯ ಭರತನಾಟ್ಯ ಕಲಾವಿದೆಯಾಗಿ ಭಾರತೀಯ ಕಲಾಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಸೇತುವೆಯಾಗಲಿದ್ದಾಳೆ. 


ಕು. ತನ್ವಿ ಕಲಾಗುರು ಕೊಲ್ಲಿನಾಡಿನ ಸಾಂಸ್ಕೃತಿಕ ರಾಯಬಾರಿ ವಿದೂಷಿ ರೋಹಿಣಿ ಅನಂತ್
ವಿದೂಷಿ ರೋಹಿಣಿ ಅನಂತ್ ದುಬಾಯಿಯ ಪರಿಸರದಲ್ಲಿ ಆಸಕ್ತ ಮಕ್ಕಳನ್ನು ಒಟ್ಟುಮಾಡಿ "ಕ್ಲಾಸಿಕಲ್ ರಿದಂಸ್" ತಂಡವನ್ನು ರಚಿಸಿ ಹಲವಾರು ಪ್ರತಿಭೆಗಳಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಟ್ಟರು. ಇದೇ ಅವಧಿಯಲ್ಲಿ ತಮ್ಮ ಕಲಾಪ್ರತಿಭೆಗೆ ಗುರುಗಳಾದ ಶ್ರೀಮತಿ ರಾಜಲಕ್ಷ್ಮಿ, "ಪಂಡನಲ್ಲೂರು ಶೈಲಿ" ಪ್ರಸಿದ್ದಿ, ಗುರು ಶ್ರೀಮತಿ ರೇವತಿ ನರಸಿಂಹನ್, ಗುರು ಶ್ರೀಮತಿ ಲಲಿತಾ ಶ್ರೀನಿವಾಸನ್ - ಮೈಸೂರು ಶೈಲಿ, ಗುರು ಶ್ರೀಮತಿ ಪದ್ಮಿನಿ ರವಿ ವಜುವುರ್ ಶೈಲಿಗಳ ಮೆರಗು ಸೇರಿಸಿ ತನ್ನಲ್ಲಿರುವ ನೃತ್ಯ ಕಲೆಗೆ ಹೆಚ್ಚಿನ ಮಹತ್ವದೊಂದಿಗೆ ಹಲವಾರು ನೃತ್ಯ ಪ್ರಾಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ರೋಹಿಣಿ ಅನಂತ್ ರವರ ಕನಸಿನ ಕಲ್ಪನೆಯ ನೃತ್ಯ ಶಾಲೆ "ಸ್ವರಾಲಯ ಸ್ಕೂಲ್ ಅಫ್ ಫರ್ಪಾರ್ಮಿಂಗ್ ಆಟ್ರ್ಸ್" 1996 ರಲ್ಲಿ ಪ್ರಾರಂಭಗೊಂಡು ನೂರಾಐವತ್ತಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ನೃತ್ಯ ತರಭೇತಿ ನೀಡಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು "ವಿಧ್ವತ್" ಪರೀಕ್ಷೆಯನ್ನು ಮುಗಿಸಿದ್ದಾರೆ. ಭಾರತದಾದ್ಯಂತ ಹಲವಾರು ನೃತ್ಯ ಪ್ರದರ್ಶಗಳನ್ನು ನೀಡಿರುವ ಕೀರ್ತಿ ಇವರದ್ದಾಗಿದೆ.
ರೋಹಿಣಿ ಅನಂತ್ ರವರು ನೃತ್ಯ ಪರಿವೀಕ್ಷಕರಾಗಿ ಕರ್ನಾಟಕ ಪರೀಕ್ಷಾ ಮಂಡಳಿ ಬೆಂಗಳೂರು ನಡೆಸುವ ನೃತ್ಯ ಪರೀಕ್ಷೆಯಲ್ಲಿ, ಹಲವಾರು ನೃತ್ಯ ಕಾರ್ಯಗಾರಗಳಲ್ಲಿ ನೃತ್ಯದ ಬಗ್ಗೆ ಮಾಹಿತಿ, ತರಭೇತಿ, ವ್ಯಾಯಾಮ ನಟುವಾಂಗದ ಮೂಲಕ ನೃತ್ಯ ರಂಗಕ್ಕೆ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ.
ವಿದೂಷಿ ರೋಹಿಣಿ ಅನಂತ್ ರವರ ಸಾಧನೆಗೆ ಸಂದ ಗೌರವ ಪುರಸ್ಕಾರಗಳು
ವಿದೂಷಿ ರೋಹಿಣಿ ಅನಂತ್ ರವರ ಕಲಾ ಸಾಧನೆಗೆ ಹಾಗೂ ಗಲ್ಫ್ ನಾಡಿನಲ್ಲಿ ಸಲ್ಲಿಸಿರುವ ಸಾಂಸ್ಕೃತಿಕ ಸಾಧನೆಗೆ ಸಂದ ಪ್ರಶಸ್ತಿ ಗೌರವಗಳು :
* ಕರ್ನಾಟಕ ರಾಜ್ಯ ಸರ್ಕಾರದ - ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
* ದುಬಾಯಿಯಲ್ಲಿ - ಎಕ್ಸಲೆನ್ಸ್ ಅವಾರ್ಡ್ ಫಾರ್ ಡ್ಯಾನ್ಸ್
* ಕೇರಳ ರಾಜ್ಯ ಪ್ರಶಸ್ತಿ
* 2013 ರಲ್ಲಿ ಆರ್ಯಭಟ ಪ್ರಶಸ್ತಿ
* ವಿದೇಶದಲ್ಲಿ ಭಾರತೀಯ ಕಲೆಯ ಅನಾವರಣ ಸಾಧನೆಗೆ "ಚಾಣಕ್ಯ ಪ್ರಶಸ್ತಿ"
* ಕಥಕ್ ಮಹೋತ್ಸವದಲ್ಲಿ "ನೃತ್ಯ ರತ್ನ ಪ್ರಶಸ್ತಿ"
ಗುರು ವಿದೂಷಿ ರೋಹಿಣಿ ಅನಂತ್ ರವರ ಶಿಷ್ಯೆ ಕಲಾದೇವಿಯ ಉಪಾಸನೆಯಲ್ಲಿ ಮುನ್ನಡೆಯ ಹೆಜ್ಜೆಗಳನ್ನಿಡುವ ನಮ್ಮೆಲ್ಲರ ನೆಚ್ಚಿನ ಕಿರಿಯ ಕಲಾವಿದೆ ಕು| ತನ್ವಿ ಸುಂದರ್ ಕಾಂಚನ್ ಕಲಾದೇವಿಯ ಅನುಗ್ರಹ ಪಡೆದು, ಭರತನಾಟ್ಯ ರಂಗ ಪ್ರವೇಶಕ್ಕೆ ತಯಾರಾಗುವ ಶುಭ ಸಂದರ್ಭಕ್ಕೆ ಸಮಸ್ಥ ಅನಿವಾಸಿ ಕನ್ನಡಿಗರು ಮತ್ತು ಕಲಾಭಿಮಾನಿಗಳ ಪರವಾಗಿ ಶುಭ ಹಾರೈಕೆಗಳು.

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ 
 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...