”ಭಾರತದ ಅತ್ಯಂತ ಶ್ರೀಮಂತ’ ಪಟ್ಟ ಉಳಿಸಿಕೊಂಡ ಮುಕೇಶ್ ಅಂಬಾನಿ ಪ್ರತಿಗಂಟೆಯ ಆದಾಯ 90ಕೋಟಿ.ರೂ

Source: sonews | By Staff Correspondent | Published on 29th September 2020, 10:29 PM | National News |

ಹೊಸದಿಲ್ಲಿ: ಲಾಕ್ ಡೌನ್ ಸಮಯದಲ್ಲಿ ದೇಶದ ಜನರ ಕೈ ಬರಿದಾದಗಿದ್ದಾರೆ ಶ್ರೀಮಂತರು ಮಾತ್ರ ಅತಿ ಶ್ರೀಮಂತರಾಗುತ್ತಿದ್ದು ಕಳೆದ ಮಾರ್ಚ್ ‌ನಲ್ಲಿ ಕೊರೋನ ವೈರಸ್ ಲಾಕ್‌ಡೌನ್ ಹೇರಿದಾಗಿನಿಂದ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿಯ ಪ್ರತಿ ಗಂಟೆಗೆ 90 ಕೋ.ರೂ.ಗಳ ಆದಾಯವನ್ನು ಗಳಿಸುವ ಮೂಲಕ 2020ನೇ ಸಾಲಿನ ಐಐಎಫ್‌ಎಲ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಪಟ್ಟಿಯಲ್ಲಿ ಸತತ ಒಂಬತ್ತನೇ ವರ್ಷವೂ ಭಾರತದ ಅತ್ಯಂತ ಶ್ರೀಮಂತ ಎಂಬ ತನ್ನ ಪಟ್ಟವನ್ನು ಉಳಿಸಿಕೊಂಡಿದ್ದಾರೆ.

ವಿಶ್ವದ ಐವರು ಅತ್ಯಂತ ಶ್ರೀಮಂತರಲ್ಲಿ ಏಕೈಕ ಭಾರತೀಯನಾಗಿರುವ ಅಂಬಾನಿ ಸರಣಿ ನಿಧಿ ಎತ್ತುವಳಿ ಮತ್ತು ಜಿಯೊ ಹಾಗೂ ರಿಲಯನ್ಸ್ ರಿಟೇಲ್‌ಗಳಲ್ಲಿ ಫೇಸ್‌ಬುಕ್, ಗೂಗಲ್, ಸಿಲ್ವರ್ ಲೇಕ್ ಇತ್ಯಾದಿ ಕಂಪನಿಗಳ ವ್ಯೂಹಾತ್ಮಕ ಹೂಡಿಕೆಗಳ ಮೂಲಕ 2,77,700 ಕೋ.ರೂ.ಗಳನ್ನು ಕಲೆಹಾಕಿದ್ದಾರೆ. ಇದರೊಂದಿಗೆ ಅವರ ವೈಯಕ್ತಿಕ ಸಂಪತ್ತು 6,58,400 ಕೋ.ರೂ.ಗೇರಿದೆ.

ಅಂಬಾನಿಯವರ ಒಟ್ಟು ಸಂಪತ್ತು ಪಟ್ಟಿಯಲ್ಲಿ ಅವರ ನಂತರದ ಐವರು ಶ್ರೀಮಂತರ ಒಟ್ಟು ಸಂಪತ್ತಿಗಿಂತ ಅಧಿಕವಾಗಿದೆ. ಇದರೊಂದಿಗೆ ಅವರು ಏಷ್ಯಾದ ಅತ್ಯಂತ ಶ್ರೀಮಂತ ಮತ್ತು ವಿಶ್ವದಲ್ಲಿ ನಾಲ್ಕನೆಯ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ್ರಾರೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...