ಮುಗದ: ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

Source: SO News | By Laxmi Tanaya | Published on 13th September 2021, 10:25 PM | State News | Don't Miss |

ಧಾರವಾಡ :  55 ನೆಯ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಸಪ್ತಾಹದ ಅಂಗವಾಗಿ ದೋಮವಾರ ಮುಗದ ಗ್ರಾಮ ಪಂಚಾಯತಿಯಲ್ಲಿ ಕಾರ್ಯಕ್ರಮ ಆಚರಿಸಲಾಯಿತು. 

 ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಗ್ರಾ
ಮ ಪಂಚಾಯತ ಅಧ್ಯಕ್ಷೆ ರೇಣುಕಾ ಶೀಗಿಹಳ್ಳಿ  ಮಾತನಾಡಿ, ಮಹಿಳೆಯರು ಸಾಕ್ಷರರಾದರೆ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ತಿಳಿಸಿದರು.

 ಉಪಾಧ್ಯಕ್ಷ ಮಂಜುನಾಥ ಶೆರೆವಾಡ ಮಾತನಾಡಿ, ಅನಕ್ಷರಸ್ಥರಿಗೆ ಅಕ್ಷರಸ್ಥರು ಕಲಿಸುವ ಕಾರ್ಯ ಪವಿತ್ರವಾದದು,್ದ ಅಕ್ಷರ ಅವ್ವ ಎಂದೇ ಖ್ಯಾತಿ ಹೊಂದಿದ ಸಾವಿತ್ರಿ ಬಾಯಿ ಪುಲೆ ದೇಶದಲ್ಲಿ ಪ್ರಥಮ ಮಹಿಳಾ ಶಾಲೆ ಪ್ರಾರಂಭಿಸಿ ಅವಮಾನ ಸಹಿಸಿಕೊಂಡು ಮಹಿಳೆಯರಿಗೆ ಕಲಿಸಿ ಜಾಗೃತಿ ಮೂಡಿಸಿದಳು, ಮುಗದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನಕ್ಷರಸ್ಥರ ಸಮೀಕ್ಷೆ ಮಾಡಿಸಿ, ಎಲ್ಲರಿಗೂ ಅಕ್ಷರ ಕಲಿಸಿ ಸಂಪೂರ್ಣ ಸಾಕ್ಷರ ಗ್ರಾಮನ್ನಾಗಿ ಮಾಡುತ್ತೇವೆ ಎಂದರು.

                ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಮಾತನಾಡಿ, 2011 ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ  ಶೇ 80 ರಷ್ಟು ಸಾಕ್ಷರತೆ ಇದೆ. 2021 ರ ಜನಗಣತಿ ವೇಳೆಗೆ ಶೇ. 95 ಕ್ಕೆ ಹೆಚ್ಚಿಸುವ ವಿಶ್ವಾಸ ವ್ಯಕ್ತಪಡಿಸಿದರು.

 ಗ್ರಾಮ ಪಂಚಾಯತ ಸದಸ್ಯರಾದ ನಾಗರಾಜ ಗುಡೆಣ್ಣವರ, ರವೀಂದ್ರ ಕೆಂಗಾನವರ ಮಾತನಾಡಿದರು. ಈ ಸಂದರ್ಭದಲ್ಲಿ ಬಾಳಿಗೆ ಬೆಳಕು ಪುಸ್ತಕ, ಪೆನ್ಸಿಲ್,ರಬ್ಬರ್, ನೋಟಬುಕ್, ಶಾರ್ಪನರ್, ಪೆನ್ ಉಚಿತವಾಗಿ ವಿತರಿಸಲಾಯಿತು.

ಗ್ರಾಮ ಪಂಚಾಯತ ಸದಸ್ಯರಾದ ಗೀತಾ ಮೇದಾರ, ರಮೇಶ ಹಣಮೂರ, ರುಕ್ಮವ್ವ ಭೋವಿ, ಬಂಡೆವ್ವ ಹರಿಜನ, ರವಿ ಕಸಮಳಗಿ, ಗಿರಿಜವ್ವ ಮನಹಳ್ಳಿ, ರಮೇಶ ನಾಗವ್ವನವರ, ರುಸ್ತುಂಬಿ ಮುಜಾವರ, ಮಲ್ಲವ್ವ ಪಾಯಪ್ಪನವರ ಉಪಸ್ಥಿತಿರಿದ್ದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿರುಪಾಕ್ಷಯ್ಯ ಕುಲಕರ್ಣಿ  ಭಾರತಿ ಕಾಳಗೌಡರ, ಮಂಜುಳಾ ನಾ ಪೀಕೆ, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಾದ ಮೀನಾಕ್ಷಿ ದೇವಗಿರಿ, ರತ್ನಾ ಹುಂಡೇಕರ, ಶಾಲಾ ಶಿಕ್ಷಕರರಾದ ಕೃಷ್ಣಾ ಭೋಂಗಾಳೆ, ಎನ್.ಬಿ.ಗಿರೆಪ್ಪನ್ನವರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...