ಮುದ್ದುಕೃಷ್ಣ 2020 ವಿಡಿಯೋ ಸ್ಪರ್ಧೆ

Source: sonews | By Staff Correspondent | Published on 5th August 2020, 6:40 PM | Coastal News |

ಭಟ್ಕಳ: ಇಲ್ಲಿನ ಕ್ರಿಯಾಶೀಲ ಗೆಳೆಯ ಸಂಘ, ಭಟ್ಕಳ. (ರಿ) ಇದರ ವತಿಯಿಂದ ಜಿಲ್ಲಾ ಮಟ್ಟದ ಮುದ್ದುಕೃಷ್ಣ 2020 ವಿಡಿಯೋ ಸ್ಪರ್ಧೇ ಎರ್ಪಡಿಸಲಾಗಿದೆ.  30 ಸೆಕೆಂಡಿಗಿಂತ ಕಡಿಮೆ ಅವದಿಯಲ್ಲಿ ತೆಗೆದ  6 ವರ್ಷದೊಳಗಿನ ಮಕ್ಕಳ ವಿಡಿಯೋವನ್ನು ಈ ಸ್ಪರ್ಧೆಯಲ್ಲಿ ಕಳುಹಿಸಬಹುದಾಗಿದ್ದು  ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 6 ಸಾವಿರ ತೃತೀಯ ಬಹುಮಾನ 3 ಸಾವಿರ  ಹಾಗೂ 10 ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ. 

ಪ್ರವೇಶ ಶುಲ್ಕ 100 ರೂ ಇದ್ದು ಅಗಸ್ಟ 9  ರ ಒಳಗೆ ತಮ್ಮ 6 ವರ್ಷದ ಒಳಗಿನ ಮುದ್ದುಕೃಷ್ಣನ ವೇಷದಲ್ಲಿದ್ದ ಮಕ್ಕಳ ವಿಡಿಯೋವನ್ನು ಲ್ಯಾಂಡ್ ಸ್ಕೇಫ್ ಸೈಜಿನಲ್ಲಿ  ಚಿತ್ರೀಕರಿಸಿ  ಈ ಕೆಳಗಿನ ವಿಳಾಸ  ಭಾಸ್ಕರ ಜಿ.  ನಾಯ್ಕ 861896405 ಹಾಗೂ ಶ್ರೀಕಾಂತ ನಾಯ್ಕ 7760901212 ಗೆ  ಕಳುಹಿಸಬಹುದು ಎಂದು ಸಂಘಟಕರು ಕೋರಿದ್ದಾರೆ. 
 

Read These Next