ಮಿಸ್ಟರ್ ಉತ್ತರಕನ್ನಡ -2023: ನೋಡುಗರ ಗಮನ ಸೆಳೆದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ

Source: so news | By MV Bhatkal | Published on 28th March 2023, 9:03 PM | Coastal News | Don't Miss |

ಭಟ್ಕಳ:ತಾಲ್ಲೂಕಿನ ಸಾಗರ ರಸ್ತೆಯ ಆನಂದ ಆಶ್ರಮ ಶಾಲೆ ಮೈದಾನ ದಲ್ಲಿ ಭಟ್ಕಳ ಬ್ರದರ್ಸ್ ಹಾಗೂ ಉತ್ತರ ಕನ್ನಡ ಜಿಲ್ಲಾ ದೇಹ ದಾರ್ಢ್ಯ ಸಂಘದ ಸಹಯೋಗದೊಂದಿಗೆ ನಡೆದ  ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ಜಿಲ್ಲೆಯ ಬೇರೆ ಬೇರೆ ತಾಲ್ಲೂಕಿನ 60 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಏಳು  ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 
"ಮಿಸ್ಟರ್ ಉತ್ತರ ಕನ್ನಡ - 2023" ಯಾಗಿ ಹೋರ ಹಮ್ಮಿದ ಶಂಕರ್ ಹಳ್ಳೆರ್ ಹೊನ್ನಾವರ, ರನ್ನರ್ ಅಪ್ ಆಗಿ ಹಳಿಯಾಳದ ಪ್ರಾನ್ಸಿಸ್ ನಾಯ್ಕ, ಬೆಸ್ಟ್ ಪೊಸರ್ ಆಗಿ ಫ್ರೆಂಡ್ಸ್ ಜಿಮ್  ಭಟ್ಕಳ ಸದಸ್ಯರಾದ ನಿತಿನ್ ಚಂದ್ರ ನಾಯ್ಕ ಆಯ್ಕೆಯಾಗಿದ್ದಾರೆ.
55 ಕೆಜಿ ವಿಭಾಗದಲ್ಲಿ ಹೊನ್ನಾವರದ ಲೋಹಿತ ಗೌವಡ ಪ್ರಥಮ, 60 ಕೆಜಿ ವಿಭಾಗದಲ್ಲಿ ಹೊನ್ನಾವರದ ಮಾರುತಿ ಎಂ.ಎಚ್.ಗೌಡ ಪ್ರಥಮ, 65 ಕೆಜಿ ವಿಭಾಗದಲ್ಲಿ ಶಿರಸಿಯ ಮಂಜುನಾಥ ಎನ್ ಬೋರಕರ್ ಪ್ರಥಮ, 70ಕೆಜಿ ವಿಭಾಗದಲ್ಲಿ ಹಳಿಯಾಳದ ಪ್ರಾನ್ಸಿಸ್ ನಾಯ್ಕ,ಪ್ರಥಮ,75ಕೆಜಿ ಕುಮಟಾದ ಮೋಶಿನ್ ಶೇಖ್,ಪ್ರಥಮ
80ಕೆಜಿ ವಿಭಾಗದಲ್ಲಿ ಹೊನ್ನಾವರದ ಶಂಕರ್ ಹೊನ್ನಾವರ ಪ್ರಥಮ,80 ಕೆ. ಜಿ ಗಿಂತ ಮೇಲ್ಪಟ್ಟ ವಿಭಾಗದಲ್ಲಿ ಕುಮಾರ ನಾಯ್ಕ ಪ್ರಥಮ ಸ್ಥಾನ ಗಳಿಸಿದ್ದಾರೆ.
ಯುವಕರು ತಮ್ಮ ಕಟ್ಟು ಮಸ್ತಾದ ದೇಹ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಸ್ಪರ್ಧೆಯ ತೀರ್ಪುಗಾರರಾಗಿ ಉತ್ತರ ಕನ್ನಡ ಜಿಲ್ಲಾ ದೇಹ ದಾರ್ಢ್ಯ ಸಂಘದ ಅಧ್ಯಕ್ಷರಾದ ಎಸ್ ಡಿ ನಾಯ್ಕ್, ರಾಜ್ಯ ದೇಹ ದಾರ್ಢ್ಯಯ ಸಂಘದ ಪ್ರಧಾನ ಕಾರ್ಯದರ್ಶಿಯಾದ ಜಿಡಿ ಭಟ್  ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮವನ್ನು ಖ್ಯಾತ ವಕೀಲರಾದ ವಿಕ್ಟರ್ ಗೋಮ್ಸ್ ಉದ್ಘಾಟಿಸಿದರು,ತಾಲೂಕ ದೇಹ ದಾರ್ಢ್ಯ ಸಂಘದ ಗೌರವಾಧ್ಯಕ್ಷರಾದ ಅಕ್ಷಯ್ ನಾರಾಯಣ್ ಉಪಾಧ್ಯಕ್ಷರಾದ ನಜೀರ್ ಖಾಸಿಂ ಜಿ ಪ್ರಧಾನ ಕಾರ್ಯದರ್ಶಿಯಾದ ವೆಂಕಟೇಶ್ ನಾಯ್ಕ್ ಪ್ರಕಾಶ್ ನಾಯ್ಕ್ ಉದ್ಯಮಿಗಳಾದ ನೇನ್ ಸಿಂಗ್ ಉಪಸ್ಥಿತರಿದ್ದರು.
ಭಟ್ಕಳ ಬ್ರದರ್ಸ್ ತಂಡದ ಸದಸ್ಯರಾದ ಹರಿಪ್ರಸಾದ್ ನಾಯ್ಕ್ ವಿವೇಕ್ ನಾಯ್ಕ್ ಪ್ರಶಾಂತ್ ನಾಯ್ಕ್ ಮೋಹನ್ ನಾಯ್ಕ್ ಗಣೇಶ್ ನಾಯ್ಕ್ ನಿತಿನ್ ನಾಯ್ಕ್ ಶ್ರೀನಿವಾಸ್ ನಾಯ್ಕ್ ಶರತ್ ಪೂಜಾರಿ ಯೋಗೇಶ್ ನಾಯ್ಕ್ ರಾಘವೇಂದ್ರ ಗೊಂಡ ಹಾಜರಿದ್ದರು.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...