ಸಂಸದ ಅನಂತಕುಮಾರ ಹೆಗಡೆ ಅಭಿಮತ: ಮೂಲಸತ್ವದಡಿ ಗೋಕರ್ಣ ಅರಳಲಿ

Source: so news | Published on 15th September 2019, 7:15 AM | Coastal News | Don't Miss |

ಗೋಕರ್ಣ: ‘ಗೋಕರ್ಣಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕಾಶಿಯಷ್ಟೇ ಹಳೆಯದಾದ ಗೋಕರ್ಣವು ಮೂಲಸತ್ವದ ಆಧಾರದೊಂದಿಗೆ ಅರಳಿ ನಿಲ್ಲಬೇಕು’ ಎಂದು ಸಂಸದ ಅನಂತಕುಮಾರ ಹೆಗಡೆ ನುಡಿದರು.

ಶನಿವಾರ ನಾನ್ ರೆಸಿಡೆಂಟ್ ಗೋಕರ್ಣಿಯನ್ ಎಂಬ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಅನ್ನು ಅನಾವರಣಗೊಳಿಸಿ ಮಾತನಾಡಿದರು.

‘ಗೋಕರ್ಣ ವೇದ, ಸಂಸ್ಕೃತ, ಅಧ್ಯಾತ್ಮಕ್ಕೆ ಹೆಸರುವಾಸಿಯಾಗಿದೆ. ಆದರೆ ಇಲ್ಲಿಗೆ ಪ್ರವಾಸಿಗರು ಕೇವಲ ಬೀಚ್ ವೀಕ್ಷಣೆಗೆ ಬರುತ್ತಾರೆ.
ಅನಿವಾಸಿ ಗೋಕರ್ಣದವರನ್ನು ಒಟ್ಟುಗೂಡಿಸುವ ಸಂಸ್ಥೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಗೋಕರ್ಣವು ಮೂಲ ಸಂಸ್ಕೃತಿಗೆ ಧಕ್ಕೆ ಬಾರದಂತೆ ಅಭಿವೃದ್ಧಿಯಾಗಬೇಕು. ಅದಕ್ಕೆ ನಾನು ಕಟಿಬದ್ಧ ಎಂದರು.

ಹಿರಿಯ ಪತ್ರಕರ್ತ ವಿಶ್ವನಾಥ ಗೋಕರ್ಣ ಮಾತನಾಡಿ, ಗೋಕರ್ಣದ ಅನೇಕ ಜನ ದೇಶ ವಿದೇಶದಲ್ಲಿ ಪಸರಿಸಿದ್ದಾರೆ. ಇಲ್ಲಿಯ ಆಚಾರ, ವಿಚಾರ, ಹಳೆಯ ಪದ್ಧತಿ ಉಳಿಸುವ ಉದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದು ಪ್ರಾರಂಭ ಮಾತ್ರ. ಎಲ್ಲರ ಸಹಕಾರದೊಂದಿಗೆ ಸಮಗ್ರ ಗೋಕರ್ಣದ ಅಭಿವೃದ್ಧಿ ಬಗ್ಗೆ ಚಿಂತಿಸಲಾಗುವುದು’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತೆರಿಗೆ ಸಲಹೆಗಾರ ಕುಮಟಾದ ಜಿ.ಎಸ್.ಕಾಮತ್‌ ಮಾತನಾಡಿ ‘ಸಂಸ್ಥೆಯ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ’ ಎಂದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಹಾಲಕ್ಷ್ಮೀ ಬಡ್ತಿ, ಸುರೇಶ ಗಿರಿಯನ್ ಇದ್ದರು. ವೇದಘೋಷದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಗಂಗಾಧರ ಭಟ್ ನಿರೂಪಿಸಿದರು. ಅಮಿತ್ ನಾಡಕರ್ಣಿ ವಂದಿಸಿದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...