ಕಾರವಾರ: ಕುಮಟಾ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಕರಣ: 36 ಮಂದಿಗೆ ಕೋವಿಡ್ ದೃಢ

Source: so news | Published on 13th July 2020, 10:16 PM | Coastal News | Don't Miss |

ಕಾರವಾರ: ಜಿಲ್ಲೆಯಲ್ಲಿ ಸೋಮವಾರ 36 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಅವರಲ್ಲಿ ಕುಮಟಾದ 14, ಭಟ್ಕಳದ ಏಳು, ಹಳಿಯಾಳದ ಆರು, ಹೊನ್ನಾವರದ ನಾಲ್ವರು, ಯಲ್ಲಾಪುರ ಮತ್ತು ಕಾರವಾರದ ತಲಾ ಇಬ್ಬರು, ಶಿರಸಿಯ ಒಬ್ಬರು ಸೇರಿದ್ದಾರೆ. 
ಸೋಂಕಿತರಲ್ಲಿ 21 ಪುರುಷರು, ಏಳು ಮಹಿಳೆಯರು ಹಾಗೂ ಎಂಟು ಮಕ್ಕಳಿದ್ದಾರೆ. ಆರು ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಭಟ್ಕಳದ ಮತ್ತು ಹೊನ್ನಾವರದ ತಲಾ ಒಬ್ಬರು ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಹಳಿಯಾಳದ ಒಬ್ಬರು, ಹೊನ್ನಾವರ ಮತ್ತು ಕಾರವಾರದ ತಲಾ ಇಬ್ಬರು ಹೊರ ರಾಜ್ಯ ಪ್ರವಾಸ ಮಾಡಿ ವಾಪಸ್ ಬಂದವರಾಗಿದ್ದಾರೆ. 
ಭಟ್ಕಳದ ಇಬ್ಬರು, ಕುಮಟಾದ ಎಲ್ಲ 14, ಹೊನ್ನಾವರದ ಒಬ್ಬರು ಈಗಾಗಲೇ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಕುಮಟಾದ ಒಬ್ಬರಿಗೆ ಜ್ವರದ ಲಕ್ಷಣಗಳಿದ್ದು (ಐ.ಎಲ್.ಐ), ಅವರ ಸೋಂಕಿನ ಮೂಲವನ್ನೂ ಹುಡುಕಲಾಗುತ್ತಿದೆ. ಭಟ್ಕಳದ ಸೋಂಕಿತರೊಬ್ಬರಿಗೆ ಉಸಿರಾಟದ ತೀವ್ರ (ಎಸ್.ಎ.ಆರ್.ಐ) ಸಮಸ್ಯೆಯಿದೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ.

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

633 ಒಟ್ಟು ಸೋಂಕಿತರು

374 ಸಕ್ರಿಯ ಪ್ರಕರಣಗಳು

254 ಗುಣಮುಖರಾದವರು

5 ಮೃತರು

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...