ದುಬೈಯಿಂದ ಮಂಗಳೂರಿಗೆ ಬರುವ ಬಾಡಿಗೆ ವಿಮಾನಯಾನಕ್ಕಾಗಿ ಮುಗಿಬಿದ್ದ ಜನ 

Source: sonews | By Staff Correspondent | Published on 1st June 2020, 5:57 PM | Coastal News | Don't Miss |

•    350ಕ್ಕೂ ಹೆಚ್ಚು ಅರ್ಜಿಗಳು ಮತ್ತೊಂದು ಬಾಡಿಗೆ ವಿಮಾನಕ್ಕಾಗಿ ಚಿಂತನೆ

ಭಟ್ಕಳ: ಲಾಕ್‍ಡೌನ್‍ನಿಂದಾಗಿ ಕಳೆದ ಎರಡು ತಿಂಗಳಿಂದ ದುಬೈಯಲ್ಲಿ ಸಿಲುಕಿಕೊಂಡಿರುವ ಭಟ್ಕಳ ಮತ್ತು ಆಸುಪಾಸಿನ ಜನರನ್ನು ಅವರ ತಾಯ್ನಾಡಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಿದ್ದು ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸುವಂತೆ ನೂಹಾ ಟ್ರೆಡಿಂಗ್ಸ್ ನ ಮಾಲಿಕ ಅತಿಕುರ್ರಹ್ಮಾನ್ ಮುನಿರಿ ಹೇಳಿಕೆ ನೀಡಿದ ಬೆನ್ನಲ್ಲೆ ರಾಜ್ಯದ ಇತರ ಜಿಲ್ಲೆಗಳ ಸುಮಾರು 350ಕ್ಕೂ ಹೆಚ್ಚು ಮಂದಿ ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಈಮೇಲ್ ಕಳುಹಿಸಿರುವುದಾಗಿ ಅತಿಕುರ್ರಹ್ಮಾನ್ ಮುನಿರಿ ತಿಳಿಸಿದ್ದಾರೆ. 

ಈ ಕುರಿತಂತೆ ವಾರ್ತಾಭಾರತಿಯೊಂದಿಗೆ ಮಾತನಾಡಿರುವ ಅವರು ನಾವು ಭಟ್ಕಳದ ನಿವಾಸಿಗಳಿಗೆಂದು ಭಾರತೀಯ ರಾಯಾಭಾರ ಕಚೇರಿಯಿಂದ ಪೂರ್ವಾನುಮತಿ ಪಡೆದುಕೊಂಡು ಜೂನ್.11 ರಂದು ದುಬೈಯ ರಾಸ್ ಅಲ್ ಖೈಮಾ ದಿಂದ ಮಂಗಳೂರಿಗೆ ಬಾಡಿಗೆ ವಿಮಾನವನ್ನು ಕಳುಹಿಸುವ ವ್ಯವ್ಯಸ್ಥೆ ಮಾಡಿದ್ದು, ಆದರೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಭಾರತಕ್ಕೆ ಹೋಗುವವರಿದ್ದಾರೆ ಎನ್ನುವುದು ನೋಡಿದರೆ ಮುಂದಿನ ದಿನಗಳಲ್ಲಿ ಮೊತ್ತೊಂದು ಬಾಡಿಗೆ ವಿಮಾನದ ವ್ಯವಸ್ಥೆಯನ್ನು ಮಾಡಬೇಕಾದೀತು. ಆದರೆ ಇದಕ್ಕೆ ಭಾರತ ಸರ್ಕಾರದ ಸಹಾಕಾರ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. 

ಕೊರೊನಾ ತಡೆ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಟ್ಕಳಿಗರನ್ನು ದುಬೈನಿಂದ ಕರೆ ತರಲು ಉದ್ಯಮಿ ಅತೀಕ್ ಉರ್ರೆಹೆಮಾನ್ ಮುನಿರಿ ವಿಶೇಷ ವಿಮಾನ ಸೌಲಭ್ಯವನ್ನು ಒದಗಿಸಿರುವುದು ರವಿವಾರ ಪ್ರಕಟವಾಗುತ್ತಿದ್ದಂತೆಯೇ ಉತ್ತರಕನ್ನಡ, ಉಡುಪಿ ಮತ್ತಿತರ ಜಿಲ್ಲೆಗಳಿಂದ ಈ ವಿಮಾನವನ್ನು ಏರಲು ಜನರು ಮುಗಿ ಬಿದ್ದಿದ್ದಾರೆ ಎನ್ನಲಾಗಿದೆ. 
   
ಈಗಾಗಲೇ 350ಕ್ಕೂ ಜನರು ಇ-ಮೇಲ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮೊಬೈಲ್ ವಾಟ್ಸ್‍ಪ್ ಮೂಲಕವೂ ಅವಕಾಶ ಕಲ್ಪಿಸುವಂತೆ ಇನ್ನಷ್ಟು ಜನರು ಬೇಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ ಪಕ್ಕದ ಕುಂದಾಪುರ, ಉಡುಪಿ ಮಾತ್ರವಲ್ಲದೇ ರಾಯಚೂರು, ಚಿತ್ರದುರ್ಗ, ಹಾಸನ, ಮೈಸೂರು ಜಿಲ್ಲೆಗಳ ಜನರೂ ಇದೇ ವಿಮಾನ ಏರಲು ಪ್ರಯತ್ನ ನಡೆಸಿದ್ದಾರೆ. ಆದರೆ ಈ ವಿಮಾನದಲ್ಲಿ ಕೇವಲ 175 ಆಸನಗಳಿದ್ದು, ರಾಜ್ಯಕ್ಕೆ ಬರುವವರ ಸಂಖ್ಯೆ ದೊಡ್ಡದಿರುವುದರಿಂದ ಖಾಸಗಿಯಾಗಿ ಇನ್ನಷ್ಟು ವಿಮಾನ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಚರ್ಚೆ ನಡೆಯುತ್ತಿದೆ ಎಂದು ಮುನಿರಿ ತಿಳಿಸಿದ್ದಾರೆ. ಜನರು ತುಂಬಾ ಕಷ್ಟದಲ್ಲಿದ್ದಾರೆ. ತಮ್ಮ ಕಷ್ಟ ನೋವುಗಳನ್ನು ತಿಳಿಸಿ ಅನೇಕಾ ಮಂದಿ ಕರೆ ಮಾಡಿ ತಮ್ಮ ದುಖಃವನ್ನು ತೋಡಿಕೊಂಡಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಅರಿತು ನಮಗೆ ಬಹಳ ನೋವಾಗುತ್ತಿದೆ. ಜೂನ್ 11 ರಂದು ನಮ್ಮ ಮೊದಲ ಬಾಡಿಗೆ ವಿಮಾನ ಮಂಗಳೂರಿಗೆ ಹಾರಲಿದ್ದು ತದನಂತರ ಸರ್ಕಾರದ ನಿರ್ಣಯಗಳೇನಾಗಿರುತ್ತದೆ ಎಂಬುವುದನ್ನು ನೋಡಿಕೊಂಡೇ ತಾವು ಮುಂದಿನ ಹೆಜ್ಜೆ ಇಡುವುದಾಗಿ ಅವರು ಹೇಳಿಕೊಂಡಿದ್ದಾರೆ.  
  
ಜಿಲ್ಲೆಯಲ್ಲಿ ಕ್ವಾರೆಂಟೈನ್ ಸವಾಲು:
ಮುಂದಿನ ಒಂದು ತಿಂಗಳು ಉತ್ತರಕನ್ನಡ ಜಿಲ್ಲೆಗೆ ನಿರ್ಣಾಯಕವಾಗಿದ್ದು, ಹೊರಗಿನಿಂದ ಬರುವವರನ್ನು ಸರಿಯಾದ ಸ್ಥಳಗಳಲ್ಲಿ ಕ್ವಾರೆಂಟೈನ್‍ಗೆ ಒಳಪಡಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಭಟ್ಕಳಿಗರು ತಮಗೆ ಭಟ್ಕಳದಲ್ಲಿಯೇ ಕ್ವಾರೆಂಟೈನ್‍ಗೆ ಒಪ್ಪಿಸುವಂತೆ ಈಗಾಗಲೇವಿನಂತಿಸಿಕೊಂಡಿದ್ದಾರೆ. ಅಕ್ಕಪಕ್ಕದ ತಾಲೂಕುಗಳ ಜನರಿಗೆ ಕ್ವಾರೆಂಟೈನ್‍ಗೆ ಅವಕಾಶ ಕಲ್ಪಿಸುವುದಕ್ಕೆ ಅಲ್ಲಲ್ಲಿ ವಿರೋಧ, ಪ್ರತಿಭಟನೆ ವ್ಯಕ್ತವಾದ ಕಾರಣ ಜಿಲ್ಲೆಗೆ ಪ್ರವೇಶಿಸುವವರನ್ನು ಅವರವರ ತಾಲೂಕು ವ್ಯಾಪ್ತಿಯಲ್ಲಿಯೇ ಕ್ವಾರೆಂಟೈನ್‍ನಲ್ಲಿರಿಸಲು ಯೋಜನೆ ಸಿದ್ಧವಾಗುತ್ತಿದೆ. ಬಹಳಷ್ಟು ಜನರು ಸರಕಾರಿ ಕ್ವಾರೆಂಟೈನ್ ಬೇಡ ಎನ್ನುತ್ತಿದ್ದಾರೆ, ತಮ್ಮ ಸ್ವಂತ ಖರ್ಚಿನಲ್ಲಿ ಹೊಟೆಲ್ ಕ್ವಾರೆಂಟೈನ್ ಕಳೆಯಲು ಇಚ್ಚೆ ವ್ಯಕ್ತಪಡಿಸುತ್ತಿದ್ದಾರೆ. ಪರಿಣಾಮವಾಗಿ ಲಾಕ್‍ಡೌನ್ ಕಾರಣದಿಂದ ಕೆಲಸ ಕಳೆದುಕೊಂಡಿರುವ ಜಿಲ್ಲೆಯ ವಸತಿಗೃಹಗಳನ್ನು ಇದೀಗ ಕ್ವಾರೆಂಟೈನ್ ಕೆಲಸಕ್ಕಾಗಿ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರವಾಸಿ ತಾಣವಾದ ಉತ್ತರಕನ್ನಡದಲ್ಲಿ ನೂರಾರು ಸಂಖ್ಯೆಯಲ್ಲಿ ವಸತಿಗೃಹಗಳಿದ್ದು, ಜಿಲ್ಲಾಡಳಿತ ವಸತಿಗೃಹಗಳ ಮಾಲಕರನ್ನು ಮನವೊಲಿಸಿ ಕ್ವಾರೆಂಟೈನ್‍ಗೆ ಬಳಸಿಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಇರುವ ಉತ್ತಮ ಮಾರ್ಗ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಜಿಲ್ಲೆಗೆ ಬರುವ ಎಲ್ಲರನ್ನೂ ಸರಕಾರಿ ಕ್ವಾರೆಂಟೈನ್‍ಗೆ ಒಳಪಡಿಸುವಷ್ಟು ವ್ಯವಸ್ಥೆ ನಮ್ಮಲ್ಲಿ ಇದೆ. ಆದರೆ ತಮಗೆ ಹೊಟೆಲ್ ಕ್ವಾರೆಂಟೈನ್ ಬೇಕು ಎಂದರೆ ಅವರೇ ಸ್ವಂತ ಹಣ ನೀಡಿ 7 ದಿನಗಳನ್ನು ಕಳೆಯಬೇಕು. ಇಲ್ಲಿ ಬಂದ ನಂತರ ತಗಾದೆ ತೆಗೆಯುವುದಕ್ಕೆ ಯಾರಿಗೂ ಆಸ್ಪದ ಇಲ್ಲ. ಜಿಲ್ಲೆಗೆ ಬರುವ ಮೊದಲು ಅವರೇ ಆಲೋಚಿಸಲಿ ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ತಿಳಿಸಿದ್ದಾರೆ.


 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...