ಹರಿದ್ವಾರ ಕುಂಭಮೇಳ: ಕೊರೋನ ಕಾರ್ಮೋಡ, ಎಪ್ರಿಲ್ 10ರಿಂದ 13ರವರೆಗೆ 1,086 ಸೋಂಕು ಪ್ರಕರಣ

Source: VB | By S O News | Published on 16th April 2021, 6:26 AM | National News | Don't Miss |

ಹರಿದ್ವಾರ: ದೇಶದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆ, ಸೋಮವಾರ ಕುಂಭಮೇಳದ ಎರಡನೇ ಪವಿತ್ರ ಸ್ನಾನದ ಸಂದರ್ಭ ಗಂಗಾ ನದಿಯಲ್ಲಿ ಪವಿತ್ರ ಸ್ಥಾನ ಮಾಡಲು ಲಕ್ಷಾಂತರ ಭಕ್ತರು ಹರಿದ್ವಾರದ ಹರ್ ಕಿ ಪೌರಿಯಲ್ಲಿ ಸೇರಿದ್ದರು. ಇದರ ಪರಿಣಾಮ ಕುಂಭ ಮೇಳ ಪ್ರದೇಶದಲ್ಲಿ ಎಪ್ರಿಲ್ 10 ಹಾಗೂ ಎಪ್ರಿಲ್ 13ರಂದು 4 ದಿನಗಳ ನಡುವೆ 1,086 ಮಂದಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ.

ಸೋಮವಾರ (ಎಪ್ರಿಲ್ 12) 30 ಲಕ್ಷಕ್ಕೂ ಅಧಿಕ ಭಕ್ತರು ಎರಡನೇ ಪವಿತ್ರ ಸ್ಥಾನದಲ್ಲಿ ಪಾಲ್ಗೊಂಡಿರುವುದಾಗಿ ಅಂದಾಜಿಸಲಾಗಿದ್ದು, ಹರಿದ್ವಾರ ಹಾಗೂ ಡೆಹ್ರಾಡೂನ್, ಪೌರಿ, ತೆಹ್ರಿಯ ವಿವಿಧ ಭಾಗಗಳಿಂದ ಕೊರೋನ ಸೋಂಕಿನ 387 ಪ್ರಕರಣಗಳು ವರದಿಯಾಗಿವೆ. ಕುಂಭಮೇಳ ಪ್ರದೇಶದಲ್ಲಿ ಸೋಮವಾರ ಒಟ್ಟು 66,203 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ಎಪ್ರಿಲ್ 11 ಹಾಗೂ ಎಪ್ರಿಲ್ 13ರ ನಡುವೆ ಕುಂಭಮೇಳ ಪ್ರದೇಶದಲ್ಲಿ 961 ಕೊರೋನ

ಗಂಗಾ ಮಾತೆಯ ಆಶೀರ್ವಾದದಿಂದ ಕೊರೋನ ಹರಡದು: ರಾವತ್

ಡೆಹ್ರಾಡೂನ್: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ದಿಲ್ಲಿಯ ನಿಝಾಮುದ್ದೀನ್ ಮುರ್ಕಝ್ನಲ್ಲಿ ನಡೆದ ತಬ್ಲೀಗಿ ಜಮಾಅತ್ ಸಮಾವೇಶದ ಜೊತೆ ಹೋಲಿಸಬಾರದು ಎಂದು ಉತ್ತರಾಖಂಡ ಮುಖ್ಯಮಂತ್ರಿ ತೀರ್ಥ ಸಿಂಗ್ ರಾವತ್ ಮಂಗಳವಾರ ಹೇಳಿದ್ದಾರೆ.

'ಮರ್ಕಝ್‍ನಲ್ಲಿ ನಡೆದ ಸಮಾವೇಶ ದಲ್ಲಿ ಪಾಲ್ಗೊಂಡಿದ್ದವರೆಲ್ಲರೂ ಕಟ್ಟಡವೊಂ ದರ ಒಳಗೆ ಸಮಾವೇಶಗೊಂಡಿದ್ದರು. ಆದರೆ ಕುಂಭಮೇಳ ತೆರೆದ ಪ್ರದೇಶದಲ್ಲಿ ನಡೆಯುತ್ತಿದೆ' ಎಂದವರು ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು “ಗಂಗಾ ನದಿ ಸಮೀಪ ಕುಂಭ ಮೇಳ ನಡೆಯುತ್ತಿದೆ. ಗಂಗಾ ಮಾತೆಯ ಆಶೀರ್ವಾದದಿಂದಾಗಿ ಕೊರೋನ ವೈರಸ್ ಹರಡಲಾರದು. ಇಲ್ಲಿ ಹೋಲಿಕೆಯ ಪ್ರಶ್ನೆಯೇ ಉದ್ಭವಿಸಲಾರದು” ಎಂದರು.

ಆನಂತರ ಕುಂಭಮೇಳವನ್ನು ಸಮರ್ಥಿ ಸಿಕೊಂಡು ಇನ್ನೊಂದು ಹೇಳಿಕೆ ನೀಡಿದ ರಾವತ್, ಭಕ್ತಾದಿಗಳು ವಿವಿಧ ಸ್ನಾನಘಟ್ಟಗಳಲ್ಲಿ ಹಂಚಿಹೋಗುತ್ತಾರೆ ಹಾಗೂ ಅವರು ವಿಭಿನ್ನ ಸಮಯಗಳಲ್ಲಿ ತೀರ್ಥಸ್ಥಾನ ಮಾಡುತ್ತಾರೆ. ಹೀಗಾಗಿ ಕೊರೋನ ವೈರಸ್ ಹರಡಲಾರದು ಎಂದರು. ಆದರೆ ತನ್ನ ಈ ವಾದವನ್ನು ಸಮರ್ಥಿಸುವಂತಹ ಯಾವುದೇ ವಿವರಣೆಯನ್ನು ಅವರು ನೀಡಲಿಲ್ಲ.

ಕುಂಭಮೇಳದಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಅಥವಾ ಕುಂಭಮೇಳದಂತಹ ಬೃಹತ್ ಕಾರ್ಯಕ್ರಮದಲ್ಲಿ ನಿರ್ಬಂಧಗಳನ್ನು ಹೇರುವುದು ತುಂಬಾ ಕಷ್ಟಕರವೆಂದು ಅಧಿಕಾರಿಗಳು ಹೇಳಿದ್ದಾರೆಂಬ ವರದಿಗಳಿಗೆ ಪ್ರತಿಕ್ರಿಯಿಸಲು ರಾವತ್ ನಿರಾಕರಿಸಿದರು.

ಕುಂಭಮೇಳ ನಿಲ್ಲದು, ಉತ್ತರಾಖಂಡ ಸರಕಾರ

ಹೊಸದಿಲ್ಲಿ: ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು ಎಪ್ರಿಲ್ 30ರವರೆಗೂ ಮುಂದುವರಿಯಲಿದ್ದು, ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಎರಡು ವಾರ ಮುಂಚಿತವಾಗಿಯೇ ಮುಕ್ತಾಯಗೊಳಿಸುವ ಬಗ್ಗೆ ಯಾವುದೇ ಚರ್ಚೆ ನಡೆಯು ತ್ತಿಲ್ಲವೆಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

'ಕುಂಭಮೇಳವು ಸಾಮಾನ್ಯವಾಗಿ ಜನವರಿಯಲ್ಲಿ ಆರಂಭವಾಗುತ್ತದೆ. ಕೋವಿಡ್ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರವು ಈ ಬಾರಿ ಅದನ್ನು ಎಪ್ರಿಲ್‌ನಲ್ಲಿ ಆರಂಭಿಸಲು ನಿರ್ಧರಿಸಿತ್ತು. ಕೇಂದ್ರ ಸರಕಾರದ ಕಾರ್ಯವಿಧಾನ ಮಾನದಂಡ (ಎಸ್‌ಒಪಿ)ವು ಕೋವಿಡ್ ಸನ್ನಿವೇಶದ ಹಿನ್ನೆಲೆಯಲ್ಲಿ ಕುಂಭಮೇಳದ ಅವಧಿಯನ್ನು ಕಡಿಮೆಗೊಳಿಸಬಹುದೆಂದು ತಿಳಿಸಿದೆ. ಆದರೆ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ' ಎಂದು ಹರಿದ್ವಾರದ ಜಿಲ್ಲಾ ಮ್ಯಾಜಿಸ್ಟ್ರೇಟ್, ಕುಂಭಮೇಳ ಅಧಿಕಾರಿ ದೀಪಕ್ ರಾವತ್ ಬುಧವಾರ ತಿಳಿಸಿದ್ದಾರೆ.

ಕೋವಿಡ್ ಸೋಂಕಿನ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಂಭಮೇಳ ಸಮಾರಂಭವನ್ನು ಅವಧಿಗೆ ಮುಂಚಿತವಾಗಿ ಮುಕ್ತಾಯಗೊಳಿಸುವ ಬಗ್ಗೆ ಉತ್ತರಖಂಡ ಸರಕಾರ ಹಾಗೂ ಧಾರ್ಮಿಕ ನಾಯಕರ ಜೊತೆ ಮಾತುಕತೆ ನಡೆಯುತ್ತಿರುವುದಾಗಿ ವರದಿಗಳು ಈ ಮೊದಲು ವರದಿಯಾಗಿತ್ತು.

ಆದರೆ, ಅಧಿಕಾರಿಗಳು ಬುಧವಾರ ಸಂಜೆ ಹೇಳಿಕೆಯೊಂದನ್ನು ನೀಡಿ, ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಮತ್ತು ಕುಂಭಮೇಳವು ಅಬಾಧಿತವಾಗಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಮಂಗಳವಾರ ಉತ್ತರಾಖಂಡದಲ್ಲಿ 1925 ಸೋಂಕಿನ ಪ್ರಕರಣಗಳು ವರದಿಯಾಗಿದ್ದು ಇದು ದಿನದ ಗರಿಷ್ಠ ಹೆಚ್ಚಳವಾಗಿದೆ. ಕಳೆದ ಎರಡು ದಿನಗಳಲ್ಲಿ ಹರಿದ್ವಾರದಲ್ಲಿ 1 ಸಾವಿರ ಸೋಂಕಿನ ಪ್ರಕರಣಗಳು ವರದಿಯಾಗಿವೆ.


ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ಹರಿದ್ವಾರದ ಮುಖ್ಯ ವೈದ್ಯಾಧಿಕಾರಿ ಡಾ. ಎಸ್. ಕೆ. ಝಾ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಮಂಗಳವಾರ ಕೊರೋನ ಸೋಂಕಿನ 1,925 ಪ್ರಕರಣಗಳು ವರದಿಯಾಗಿವೆ. 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಉತ್ತರಾಖಂಡದ ಆರೋಗ್ಯ ಇಲಾಖೆಯ ಬುಲೆಟಿನ್ ಹೇಳಿದೆ. ಡೆಹ್ರಾಡೂನ್ ಜಿಲ್ಲೆಯಲ್ಲಿ 775, ಹರಿದ್ವಾರದಲ್ಲಿ 594, ನೈನಿತಾಲ್‌ನಲ್ಲಿ 217 ಹಾಗೂ ಉಧಮ್ ಸಿಂಗ್ ನಗರದಲ್ಲಿ 172 ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಒಂದೇ ದಿನ ಅತ್ಯಧಿಕ 1.8 ಲಕ್ಷ ಕೊರೋನ ಸೋಂಕು ಪ್ರಕರಣ ದಾಖಲು: ದೇಶದಲ್ಲಿ ಕಳೆದ ವರ್ಷ ಕೊರೋನ ಸಾಂಕ್ರಾಮಿಕ ರೋಗ ಹರಡಲು ಆರಂಭಿಸಿದ ಬಳಿಕ ಮೊದಲ ಬಾರಿಗೆ ಬುಧವಾರ ಒಂದೇ ದಿನ ಅತ್ಯಧಿಕ 1,84,372 ಹೊಸ ಪ್ರಕರಣಗಳು ವರದಿಯಾಗಿವೆ.

ಈ ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ 1,38,73,825ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಬೆಳಗ್ಗೆ ಬಿಡುಗಡೆ ಮಾಡಿದೆ ದತ್ತಾಂಶ ತಿಳಿಸಿದೆ.

ಈ ನಡುವೆ ಕಳೆದ 24 ಗಂಟೆಗಳಲ್ಲಿ ಕೊರೋನಸೋಂಕಿನಿಂದ 1,027 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,72,085ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಸಕ್ರಿಯ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 13,65,704 ದಾಖಲಾಗಿದೆ. ಇದುವರೆಗೆ 1,23,36,036 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ಮಂಗಳವಾರ ಅತ್ಯಧಿಕ 1,61,736 ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿತ್ತು. ಇದು ಈವರೆಗೆ ಕೊರೋನ ಸೋಂಕಿನ ಪ್ರಕರಣಗಳ ದಾಖಲೆಯನ್ನು ಮುರಿದಿತ್ತು.

ಉ.ಪ. ಸಿಎಂ ಆದಿತ್ಯನಾಥ್‌ಗೆ ಕೊರೋನ ಸೋಂಕು ದೃಢ

ಲಕ್ನೊ: ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಅವರು ಐಸೋಲೇಷನ್‌ಗೆ ಒಳಗಾಗಿದ್ದಾರೆ. ಈ ಬಗ್ಗೆ ಬುಧವಾರ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಆದಿತ್ಯನಾಥ್, “ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ನಾನು ಕೊರೋನ ಪರೀಕ್ಷೆಗೆ ಒಳಗಾದೆ. ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಆದುದರಿಂದ ನಾನು ಸ್ವಯಂ ಐಸೋಲೇಷನ್‌ಗೆ ಒಳಗಾಗಿದ್ದೇನೆ ಹಾಗೂ ವೈದ್ಯರ ಸಲಹೆಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಿದ್ದೇನೆ. ನಾನು ಎಲ್ಲ ಕೆಲಸಗಳನ್ನು ಆನ್‌ಲೈನ್‌ನಲ್ಲಿ ಮಾಡುತ್ತಿದ್ದೇನೆ”. ಮುಖ್ಯಮಂತ್ರಿ ಕಚೇರಿಯ ಕೆಲವು ಅಧಿಕಾರಿಗಳಿಗೆ ಕೊರೋನ ಪಾಸಿಟಿವ್ ದೃಢಪಟ್ಟ ಬಳಿಕ ಆದಿತ್ಯನಾಥ್ ಮಂಗಳವಾರ ಟ್ವಿಟ್‌ನಲ್ಲಿ ಸ್ವಯಂ ಐಸೋಲೇಷನ್‌ಗೆ ಒಳಗಾಗಿರುವುದಾಗಿ ತಿಳಿಸಿದ್ದರು.
 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...