ಹಿಟ್ಲರ್ ನೀತಿಯತ್ತ ಭಾರತ ; ಜೆಐಎಚ್ ರಾಜ್ಯಾಧ್ಯಕ್ಷ ಡಾ. ಬೆಲ್ಗಾಮಿ ಕಳವಳ

Source: sonews | By Staff Correspondent | Published on 23rd January 2020, 11:52 PM | Coastal News | Don't Miss |


ಭಟ್ಕಳ: ಪ್ರಸ್ತುತ ಭಾರತ ಹಿಟ್ಲರ್ ನೀತಿಯತ್ತ ಸಾಗುತ್ತಿದ್ದು ಇದು ಮುಂಬರುವ ದಿನಗಳಲ್ಲಿ ದೇಶಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಘಟಕಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಲ್ಗಾಮಿ ಕಳವಳ ವ್ಯಕ್ತಪಡಿಸಿದರು. 

ಅವರು ಗುರುವಾರ ಸಂಜೆ ಇಲ್ಲಿನ ತಂಝೀಮ್ ಕಾರ್ಯಲಯದಲ್ಲಿ ನಡೆದ ಮುಖಂಡರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಫ್ಯಾಸಿಸ್ಟ್ ಶಕ್ತಿಗಳು ಈ ದೇಶವನ್ನು ಅಪಾಯದ ಅಂಚಿಗೆ ಕೊಂಡೊಯ್ಯುತ್ತಿದೆ ಎಂದ ಅವರು ಸಧ್ಯಕ್ಕೆ ದೇಶದ ಸಂವಿಧಾನ ಅಪಾಯದಲ್ಲಿ ಅದನ್ನು ರಕ್ಷಿಸಿ ಭಾರತವನ್ನು ಉಳಿಸುವ ಜವಾಬ್ದಾರಿ ಈ ದೇಶದ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದವರ ಹೆಗಲ ಮೇಲಿದೆ ಎಂದರು. ದೇಶದ ಪ್ರಸಕ್ತ ವಿದ್ಯಾಮಾನಗಳ ಕುರಿತು ಗಂಭೀರವಾಗಿ ಕಳವಳ ವ್ಯಕ್ತಪಡಿಸಿದ ಅವರು ದೇಶದ ಮುಸ್ಲಿಮರು ಒಗ್ಗಟ್ಟನ್ನು ಪ್ರದರ್ಶಿಸುವುದರ ಮೂಲಕ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಸೆಟೆದು ನಿಲ್ಲಬೇಕು ಎಂದು ಕರೆ ನೀಡಿದರು. ದೇಶದಲ್ಲಿ ಇಸ್ಲಾಮೋಫೋಬಿಯಾವನ್ನು ಹುಟ್ಟುಹಾಕುವುದರ ಮೂಲಕ ಸಮಾಜವನ್ನು ಒಡೆಯಲಾಗುತ್ತಿದೆ ಮುಸ್ಲಿಮರ ಕುರಿತಂತೆ ದೇಶದ ಸಾಮಾನ್ಯ ನಾಗಕರೀಕನಲ್ಲಿ ಭಯಮೂಡಿಸುವಂತೆ ಪ್ರಯತ್ನಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು ಇದರಲ್ಲಿ ಇಡೀ ವ್ಯವಸ್ಥೆಯೇ ಶಾಮಿಲಾಗಿದೆ ಎಂದು ಆರೋಪಿಸಿದರು.

ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ಪ್ರಸ್ತಾವಿಕವಾಗಿ ಸ್ವಾಗತಿಸಿದರು. ಜೆಐಎಚ್ ಭಟ್ಕಳ ಶಾಖೆಯ ಅಧ್ಯಕ್ಷ ಇಂಜಿನೀಯರ್ ನಝೀರ್ ಆಹ್ಮದ್ ಖಾಝಿ ಅತಿಥಿಗಳನ್ನು ಪರಿಚಯಿಸಿದರು. ತಂಝೀಮ್ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೇಝ್ ಅಧ್ಯಕ್ಷತೆ ವಹಿಸಿದ್ದರು. 

ಜಮಾಅತೆ ಇಸ್ಲಾಮಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಬಿಲಾಲ್, ಶಿವಮೊಗ್ಗ ವಿಭಾಗ ಸಂಚಾಲಕ ಮೌಲಾನ ಸಲೀಮ್ ಉಮರಿ, ತಂಝೀಮ್ ಸಂಸ್ಥೆಯ ಮುಹಮ್ಮದ್ ಯೂನೂಸ್ ರುಕ್ನುದ್ದೀನ್, ಜೈಲಾನಿ ಶಾಬಂದ್ರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

Read These Next

ಪತ್ರಿಕಾ ವರದಿಗೆ ಸ್ಪಂದನೆ, ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ  ಅಂಗವಿಕಲ ಬಡ ಕುಟುಂಬಕ್ಕೆ ನೆರವು  

ಗಂಗೊಳ್ಳಿ:  ದೊಡ್ಡಹಿತ್ಲು ಪ್ರದೇಶದ ಬಡ ಅಂಗವಿಕಲ ಕುಟುಂಬದ ಬಗ್ಗೆ ಇತ್ತೀಚಿಗೆ ಪತ್ರಿಕಾ ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು ...

ಅಂಕೋಲಾದಲ್ಲಿ 127.0 ಮಿ.ಮೀ. ಮಳೆ 

ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 127.0 ಮಿ.ಮೀ, ಭಟ್ಕಳ 80.0 ಮಿ.ಮೀ, ...

ಹಾವು ಕಚ್ಚಿ ವ್ಯಕ್ತಿಸಾವು

ಮುಂಡಗೋಡ :  ಹಾವು ಕಚ್ಚಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಮೈನಳ್ಳಿ ಪಂಚಾಯತ್ ವ್ಯಾಪ್ತಿಯ ಕಳಕಿಕಾರೆ ಗ್ರಾಮದಲ್ಲಿ ನಡೆದಿದೆ.