ಮೋದಿಯ ಪೌರತ್ವ ಕಾಯ್ದೆ ಎಲ್ಲರಿಗೂ ಅಪಾಯಕಾರಿ: ದ ಗಾರ್ಡಿಯನ್

Source: sonews | By Staff Correspondent | Published on 18th December 2019, 11:33 PM | National News | Don't Miss |

ಹೊಸದಿಲ್ಲಿ: ಭಾರತದ ನೂತನ ಪೌರತ್ವ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು,ಪ್ರತಿಭಟನಾಕಾರರು ಪೊಲೀಸರ ಕ್ರೂರ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ನಿಸ್ಸಂಶಯವಾಗಿ ಇದು ಆರು ವರ್ಷಗಳ ಹಿಂದೆ ಅಧಿಕಾರಕ್ಕೇರಿದಾಗಿನಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿರೋಧದ ಬೃಹತ್ ಪ್ರದರ್ಶನವಾಗಿದೆ ಮತ್ತು ಈ ವಿರೋಧ ಒಳ್ಳೆಯ ಕಾರಣಕ್ಕಾಗಿದೆ ಎಂದು ಬ್ರಿಟನ್‌ನ ‘ದ ಗಾರ್ಡಿಯನ್’ ತನ್ನ ಸಂಪಾದಕೀಯ ಲೇಖನದಲ್ಲಿ ಹೇಳಿದೆ.

ದೇಶವು ಅಪಾಯಕಾರಿ ಪಥದಲ್ಲಿ ಸಾಗುತ್ತಿದೆ ಎನ್ನುವ ಅರಿವು ಪ್ರತಿಭಟನಾಕಾರರನ್ನು ಬೀದಿಗೆ ತಂದಿದೆ ಎಂದಿರುವ ಅದು,ನೂತನ ಶಾಸನವು ಮೋದಿಯವರ ಹಿಂದು ರಾಷ್ಟ್ರವಾದವು ದೇಶದ ಬಹುತ್ವ ಮತ್ತು ಜಾತ್ಯತೀತತೆಯ ಬುನಾದಿಗೆ ಬೆದರಿಕೆಯನ್ನೊಡ್ಡಿದೆ ಎನ್ನುವುದಕ್ಕೆ ಪುರಾವೆಯಾಗಿದೆ. ಬಹುತ್ವ ಮತ್ತು ಜಾತ್ಯತೀತತೆಯನ್ನು ಕಾಯ್ದುಕೊಳ್ಳುವ ಏಳು ದಶಕಗಳ ಪ್ರಯತ್ನದ ಆಶಯದ ಮೇಲೆ ಭೀತಿಯ ಕರಿನೆರಳು ಕವಿದಿದೆ ಎಂದು ಹೇಳಿದೆ.

 ಈ ಕಾನೂನು ಹಕ್ಕುಗಳನ್ನು ಕಿತ್ತುಕೊಳ್ಳುವುದಿಲ್ಲ,ಬದಲಿಗೆ ಅವುಗಳನ್ನು ವಿಸ್ತರಿಸುತ್ತದೆ ಎಂಬ ಬಿಜೆಪಿ ಸರಕಾರದ ಹೇಳಿಕೆ ತೋರಿಕೆಯದ್ದಾಗಿದೆ. ಅದು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಂದ ಬರುವ ಹಿಂದುಗಳು, ಸಿಕ್ಖರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ತ್ವರಿತವಾಗಿ ಭಾರತೀಯ ಪೌರತ್ವವನ್ನು ಒದಗಿಸುತ್ತದೆ. ಆದರೆ ಕಾನೂನು ಒಳಗೊಳ್ಳುವಿಕೆಯ ಕ್ರಮವೆಂದು ಯಾರೂ ಪರಿಗಣಿಸುತ್ತಿಲ್ಲ. ಅದು ಅಂತರ್ಗತವಾಗಿ ಒಂದು ಸಮುದಾಯವನ್ನು ಹೊರಗಿಡುವ ಶಾಸನವಾಗಿದ್ದು,ಕಿರುಕುಳಕ್ಕೆ ಹೆದರಿ ಭಾರತಕ್ಕೆ ಪರಾರಿಯಾಗುವ ಮುಸ್ಲಿಮರ ವಿರುದ್ಧ ತಾರತಮ್ಯವನ್ನೆಸಗುತ್ತಿದೆ ಮತ್ತು ಮುಸ್ಲಿಮ್ ಪ್ರಜೆಗಳು ‘ನಿಜವಾದ ’ಭಾರತೀಯರಲ್ಲ ಎನ್ನುವುದನ್ನು ಸೂಚಿಸುತ್ತಿದೆ. ಅದು ವಿದೇಶಿಯರು ಮತ್ತು ಭಾರತೀಯ ಪ್ರಜೆಗಳಿಗೆ ಸಂವಿಧಾನದಲ್ಲಿ ಒದಗಿಸಿರುವ ರಕ್ಷಣೆಗಳನ್ನು ಕಡೆಗಣಿಸುತ್ತಿದೆ ಎಂದು ದ ಗಾರ್ಡಿಯನ್ ಹೇಳಿದೆ.

ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರಾಗಿರಲಿ ಅಥವಾ ಪಾಕಿಸ್ತಾನದ ಅಹ್ಮದಿಯಾಗಳು ಮತ್ತು ಇತರ ಮುಸ್ಲಿಮರಾಗಿರಲಿ,ಮುಸ್ಲಿಮರಿಗೆ ಭಾರತದ ನೆರವಿನ ಅಗತ್ಯವಿಲ್ಲ ಎನ್ನುವುದು ಕಾನೂನಿನ ಹಿಂದಿನ ತರ್ಕವಾಗಿದೆ. ಅವರು ಮೋದಿಯವರ ದೇಶಕ್ಕೆ ಬಂದರೆ ಅಕ್ರಮ ವಲಸಿಗರಾಗಿ ಬಿಡುತ್ತಾರೆ. ಹೆಚ್ಚಿನವರಲ್ಲಿ ಸೂಕ್ತ ದಾಖಲೆಗಳಿಲ್ಲದ ದೇಶದಲ್ಲಿ ಹಲವಾರು ಭಾರತೀಯ ಪ್ರಜೆಗಳೂ ಇದೇ ಸ್ಥಿತಿಗೆ ತಳ್ಳಲ್ಪಡುವ ಅಪಾಯದಲ್ಲಿದ್ದಾರೆ ಎಂದು ಸಂಪಾದಕೀಯವು ಹೇಳಿದೆ.

ಅಸ್ಸಾಮಿನಲ್ಲಿ ಎನ್‌ಆರ್‌ಸಿ ಸಂಕಷ್ಟ,ಜಮ್ಮು-ಕಾಶ್ಮೀರದಲ್ಲಿ ನಿರ್ಬಂಧಗಳ ಹೇರಿಕೆ, ಹಿಂದೂ ರಾಷ್ಟ್ರವಾದಿಗಳಿಂದ ಥಳಿಸಿ ಹತ್ಯೆಗಳು,ಸುಮಾರು 2,000 ಮುಸ್ಲಿಮರ ಹತ್ಯೆಯಾದ 2002ರ ಗುಜರಾತ್ ಕೋಮು ದಂಗೆ ಇತ್ಯಾದಿಗಳನ್ನೂ ದ ಗಾರ್ಡಿಯನ್ ಪ್ರಸ್ತಾಪಿಸಿದೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...