ತ್ರಿವಳಿ ತಲಾಖ್ ನೆಪದಲ್ಲಿ ಭಾರತೀಯ ಮುಸ್ಲಿಮರನ್ನು ಅಪರಾಧಿಗಳನ್ನಾಗಿಸಲಾಗುತ್ತಿದೆ- ಫಾತಿಮಾ ಮುಝಪ್ಪರ್ ಆರೋಪ

Source: sonews | By Staff Correspondent | Published on 7th January 2019, 11:16 PM | Coastal News | State News | Don't Miss |

ಭಟ್ಕಳ: ತ್ರೀವಳಿ ತಲಾಖ್ ಸಮಸ್ಯೆಯನ್ನು ಸೃಷ್ಟಿಸುವುದರ ಹಿಂದೆ  ಭಾರತೀಯ ಮುಸ್ಲಿಮರನ್ನು ಅಪರಾಧಿಗಳನ್ನಾಗಿ ಮಾಡುವ ಹುನ್ನಾರ ಅಡಗಿದ್ದು  ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸಕ್ರೀಯವಾಗಿದೆ. ದೇಶದ ಸಮಸ್ಯೆಗಳನ್ನು ಅಡಗಿಸಿ ಜನರ ದೃಷ್ಟಿಯನ್ನು ಬೇರೆಡೆಗೆ ಮೋದಿಯವರು ಸೆಳೆಯುತ್ತಿದ್ದಾರೆ ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೊರ್ಡನ ಚೆನ್ನೈನ ಸದಸ್ಯೆ ಎ.ಎಸ್.ಫಾತಿಮಾ ಮುಝಾಫರ್ ಹೇಳಿದರು. 

ಅವರು ಇಲ್ಲಿನ  ಅಂಜುಮಾನ್ ಶಿಕ್ಷಣ ಸಂಸ್ಥೆಯ ಜುಕಾಕೋ ಸ್ಮಾರಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. 

ಮುಸ್ಲಿಂ ಮಹಿಳೆಯರ ಪರವಾಗಿ ಮದುವೆಯ ಹಕ್ಕನ್ನು ರಕ್ಷಿಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದ್ದು, ಕೇಂದ್ರ ಸರಕಾರಕ್ಕೆ ನಿಜವಾಗಿಯೂ ಮುಸ್ಲಿಮ್ ಮಹಿಳೆಯ ಕುರಿತು ಕಾಳಜಿ ಇದ್ದರೆ ಅವರಿಗೆ ಮೀಸಲಾತಿ ಕೊಡಲಿ, ಚುನಾವಣೆಯಲ್ಲಿ, ಸರಕಾರಿ ನೌಕರಿಯಲ್ಲಿ, ವಿದ್ಯಾಭ್ಯಾಸ ಸೇರಿದಂತೆ ವಿವಿಧ ರೀತಿಯ ಮೀಸಲಾತಿಯನ್ನು ನೀಡುವ ಮೂಲಕ ಅವರು ಕಷ್ಟಕ್ಕೆ ಸ್ಪಂಧಿಸಬಹುದು. ಅದನ್ನು ಬಿಟ್ಟು ಮುಸ್ಲಿಂ ಮಹಿಳೆಯರ ಮುದುವೆಯ ಹಕ್ಕು ರಕ್ಷಣೆಯ ನೆಪ ಹೇಳಿ ಶೋಷಣೆ ಮಾಡುತ್ತಿದ್ದಾರೆ. ನಮ್ಮ ಶರೀಯತ್‍ನಲ್ಲಿ ಎಲ್ಲವೂ ಹೇಳಿದೆ.  ಮುಸ್ಲಿಂ ಶರೀಯತ್ ಪ್ರಕಾರ ಮುದುವೆ ಒಂದು ಒಪ್ಪಂದ ಮಾತ್ರ. ಇಲ್ಲಿ ಗಂಡು ಹೆಣ್ಣು ಇಬ್ಬರೂ ಸಮಾನರು. ಅವರಿಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಇರಲು ಸಾಧ್ಯವಾಗದಿದ್ದರೆ ಒಬ್ಬರಿಗೊಬ್ಬರು ಅತ್ಯಂತ ಉತ್ತಮವಾದ ರೀತಿಯಲ್ಲಿ ಬೇರ್ಪಡಲು ಅವಕಾಶ ಮಾಡಿಕೊಟ್ಟಿದೆ.  ನಮ್ಮಲ್ಲಿ ಗ್ರಹ ಹಿಂಸೆ, ವಿಚ್ಚೇದನ, ಕೋರ್ಟ ಮೆಟ್ಟಲೇರುವ ಪ್ರಕರಣಗಳು ಕೇವಲ ಕೆಲವು ಮಾತ್ರ ಎನ್ನುವುದು 2006 ರಿಂದ 2011ರತನಕದ ಅಂಕಿ ಅಂಶಗಳನ್ನು ನೊಡಿದರೆ ತಿಳಿಯುತ್ತದೆ ಎಂದರು. 

ಕೇಂದ್ರ ಸರಕಾರ ನಮ್ಮ ಮುಸ್ಲಿಂ ಪರ್ಸನಲ್ ಲಾ ಬೋರ್ಡ ಮೇಲೆ ಮೂಗು ತೂರಿಸುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದ ಅವರು ನಮ್ಮ ಶರೀಯತ್‍ನಲ್ಲಿ ಯಾರೂ ಸಹ ಮೂಗು ತೂರಿಸುದನ್ನು ನಾವು ಸಹಿಸುವುದಿಲ್ಲ.  ಇದರ ವಿರುದ್ಧ ನಮ್ಮ ಸಂಘಟನೆಯ 7.5 ಕೋಟಿ ಮಹಿಳೆಯರ ಸಹಿ ಸಂಗ್ರಹಕ್ಕೆ ಮುಂದಾಗಿದ್ದು ಕ್ರಮ ಜಾರಿಯಲ್ಲಿದೆ. ಸುಪ್ರಿಮ್ ಕೋರ್ಟ ಆದೇಶವು ನಮಗೂ ಕೂಡಾ ಅನ್ವಯವಾಗುತ್ತದೆ. ನಾವು ಕೂಡಾ ಭಾರತದಲ್ಲಿದ್ದೇವೆ ಇಲ್ಲಿನ ಪ್ರಜೆಗಳಾಗಿದ್ದೇವೆ. 12/8/2017ರ ನಂತರ ಟ್ರಿಪ್ಪಲ್ ತಲಾಖ್ ಜ್ಯಾರಿಯಲ್ಲಿಲ್ಲ ಹೀಗಿರುವಾಗ ಕೇಂದ್ರ ಸರಕಾರ ತರಲು ಹೊರಟಿರುವ ಬಿಲ್ ಅಗತ್ಯ ಇತ್ತೇ ಎನ್ನುವ ಅವರು ಸುಪ್ರಿಮ್ ಕೋರ್ಟಿಗೆ ಹೋದ ಮಹಿಳೆಯರ ಹಿಂದೆ ಯಾರ್ಯಾರಿದ್ದಾರೆ ಎನ್ನುವುದು ನೋಡಿದರೆ ಇದರ ಗೂಡಾರ್ಥ ಅರಿವಾಗುತ್ತದೆ ಎಂದು ಬಿ.ಜೆ.ಪಿ.ಯ ಮೇಲೆ ಹರಿಹಾಯ್ದರು. ಇದು ಕೇವಲ ಭಾರತದಲ್ಲಿ ಮುಸ್ಲಿಂರನ್ನು ಸಂಕಷ್ಟಕ್ಕೆ ಸಿಲುಕಿಸುವುದಾಗಿದೆ.  ದೇಶದಲ್ಲಿ ಗೋ ರಕ್ಷಕರ ಹೆಸರಿನಲ್ಲಿ ಅನೇಕ ಗಲಭೆಗಳಾಗಿವೆ, ಕೊಲೆಗಳಾಗಿವೆ ಆದರೆ ಆ ಕುರಿತು ಯಾರೂ ಕೂಡಾ ಮಾತನಾಡುವವರಿಲ್ಲ ಎಂದರು. 

ಸುಪ್ರಿಮ್ ಕೋರ್ಟಿನ ತೀರ್ಪನ್ನು ಓದಿದವರಿಗೆ ತಿಳಿಯುತ್ತದೆ, ಎಲ್ಲಿಯೂ ಕೂಡಾ ಸರಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ತೀರ್ಪಿನಲ್ಲಿ ಹೇಳಿಲ್ಲ.  ಕಳೆದ ಹಲವಾರು ವರ್ಷಗಳಿಂದ ಸರಕಾರದ ಮುಂದೆ ತ್ರಿವಳಿ ತಲಾಖ್ ಕುರಿತು ಯಾವುದೇ ಪ್ರಕರಣ ಬಂದಿಲ್ಲ ಎನ್ನುವಾಗ ಈಗ ಮಾತ್ರ ಯಾಕೆ ಬಂತು ಎನ್ನುವುದು ಕೂಡಾ ಇಲ್ಲಿ ಪ್ರಶ್ನೆಯಾಗಿದೆ ಎಂದರು. ಭಾರತದಲ್ಲಿ ಮಹಿಳೆಯರಿಗೆ ಅಸುರಕ್ಷತೆಯು ಕಾಡುತ್ತಿದೆ. ಇಲ್ಲಿ 3 ವರ್ಷದ  ಹಸುಳೆ ಅತ್ಯಾಚಾಕ್ಕೀಡಾಗುತ್ತಿದೆ. ಭಾರತ್ ಮಾತಾಕೀ ಜೈ ಎನ್ನುತ್ತೇವೆ ಅದರೆ ಇಲ್ಲಿ ಮಾತಾಜಿಯೇ ಆತಂಕದಲ್ಲಿದ್ದಾಳೆ ಎಂದು ಕಾನೂನು ಸುವ್ಯವಸ್ಥೆಯ ಕುರಿತು ಕಟುಕಿದ ಅವರು ಭಾರತ ಸರಕಾರ ರಾಷ್ಟ್ರಪತಿಯವರ ಬಾಯಿಂದ ಸುಳ್ಳು ಹೇಳಿಸಿದೆ. ಅದನ್ನು ನಮ್ಮ ಮುಸ್ಲಿಂ ಪರ್ಸನಲ್ ಲಾ ಬೋರ್ಡ ಕೂಡಾ ಖಂಡಿಸಿದೆ. ನಾವು ನೇರವಾಗಿ ಪ್ರಧಾನಿಗೆ ಹಾಗೂ ರಾಷ್ಟ್ರಪತಿಯವರಿಗೆ ಈ ಕುರಿತು ಪತ್ರ ಬರೆದಿದ್ದೇವೆ ಎಂದರು. 

ತ್ರಿವಳಿ ತಲಾಖ್ ಹಲವರು ಮುಸ್ಲಿಂ ರಾಷ್ಟ್ರಗಳಲ್ಲಿಯೇ ಇಲ್ಲ ಎನ್ನುವ ಸುದ್ದಿಗಾರರ ಪ್ರಶ್ನೆಗುತ್ತರಿಸಿದ ಅವರು ಅಲ್ಲಿ ಶರೀಯತ್ ಕೋರ್ಟಗಳಿದ್ದಾವೆ. ಸಮಸ್ಯೆಗಳನ್ನ ಶರೀಯತ್ ಕೋರ್ಟು ತೀರ್ಮಾನಿಸುತ್ತದೆ.  ಅಲ್ಲದೇ ಮಸ್ಲಿಂ ರಾಷ್ಟ್ರಗಳಲ್ಲಿ ಯಾವುದೇ ಸಿವಿಲ್ ಅಪರಾಧಕ್ಕೆ ಕ್ರಿಮಿನಲ್ ಶಿಕ್ಷೆ ಇಲ್ಲ, ಆದರೆ ಭಾರತದಲ್ಲಿ ಸಿವಿಲ್ ಅಪರಾಧಕ್ಕೆ ಕ್ರಿಮಿನಲ್ ಶಿಕ್ಷೆಯನ್ನು ಅನುಭವಿಸುವಂತಾಗಿರುವುದು ದೊಡ್ಡ ದುರಂತ ಎಂದರು. ತ್ರಿವಳಿ ತಲಾಖೆ ನೀಡಿದ ತಕ್ಷಣ ಸುಪ್ರಿಂ ಕೋರ್ಟ ತೀರ್ಪಿನಂತೆ ಅವರು ಬೇರ್ಪಡುವುದಿಲ್ಲ. ಗಂಡ ಹೆಂಡಿತಿಯರಾಗಿಯೇ ಇರುತ್ತಾರೆ.  ಆದರೆ ಕೇಂದ್ರ ಸರಕಾರದ ಬಿಲ್ ಪ್ರಕಾರ ಆತನಿಗೆ 3 ವರ್ಷದ ಶಿಕ್ಷೆಯಾಗುತ್ತದೆ. ತಲಾಖ್ ಜ್ಯಾರಿಗೇ ಬಂದಿಲ್ಲವಾದಾಗ ಅವರ ಮಕ್ಕಳ ಪಾಲನೆಯ ಪ್ರಶ್ನೆಯೆಲ್ಲಿ ಬರುತ್ತದೆ ಎಂದ ಅವರು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಎಲ್ಲಿಯೂ ಕೂಡಾ ಈ ರೀತಿಯ ಶಿಕ್ಷೆ ಇಲ್ಲ ಎಂದರು. 

ಮುಸ್ಲಿಮ್ ಮಹಿಳೆಯರಲ್ಲಿ ಷರಿಯತ್ ಕುರಿತಂತೆ ಅರಿವು ಮೂಡಿಸಲು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಏನು ಕ್ರಮ ವಹಿಸಿದೆ ಎಂದು ಕೇಳಿದ ಪ್ರಶ್ನೆಗೆ, ಷರಿಯತ್ ಅರಿವಿಗಾಗಿ ದೇಶದ ಹಲವು ಕಡೆಗಳಲ್ಲಿ ಮಹಿಳೆಯರ ಸಮಾವೇಶಗಳನ್ನು ನಡೆಸಲಾಗಿದೆ. ಮೊಹಲ್ಲಾ ಕಮಿಟಿಗಳನ್ನು ಮಾಡುವುದರ ಮೂಲಕ ಮಹಿಳೆಯರಲ್ಲಿ ತ್ರವಳಿ ತಲಾಖ್ ಕುರಿತ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಅಲ್ಲದೆ ಮೊಹಲ್ಲಾ ಕಮಿಟಿಗಳಲ್ಲಿ ಈ ಕುರಿತು ಸಭೆಗಳನ್ನು ಆಯೋಜಿಸಲಾಗುತ್ತಿದೆ. ಒಂದು ಚಿಕ್ಕ ಹಳ್ಳಿಯನ್ನು ಬಿಡದೆ ಈ ಕಾರ್ಯ ನಿರತಂತರವಾಗಿ ನಡೆಯುತ್ತಿದೆ ಎಂದು ಅವರು  ವಿವರಿಸಿದರು. 

ಈ ಸಂದರ್ಭದಲ್ಲಿ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ ಭಟ್ಕಳದ ಮಹಿಳಾ ಸಂಚಾಲಕಿ ನಬಿರಾ ಮೊಹತೆಶಮ್ ಹಾಗೂ ಝರೀನಾ ಕೋಲಾ ಉಪಸ್ಥಿತರಿದ್ದರು. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...