ಪ್ರಧಾನಿಯ ರಾಜಸ್ಥಾನ ರಾಲಿಗೆ ಮುನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಂಡ್; 'ಗೋ ಬ್ಯಾಕ್‌ ಮೋದಿ'

Source: Vb | By I.G. Bhatkali | Published on 1st June 2023, 11:02 AM | National News |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಬುಧವಾರದ ರಾಜಸ್ಥಾನ ರಾಲಿಗೆ ಮುನ್ನ 'ಗೋ ಬ್ಯಾಕ್‌ ಮೋದಿ' ಹ್ಯಾಷ್ ಟ್ಯಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತ್ತು,ಬುಧವಾರ ಅಪರಾಹ್ನ 1:30ರವರೆಗೆ 'ಮೋದಿ ಗೋ ಬ್ಯಾಕ್ ಹ್ಯಾಷ್ ಟ್ಯಾಗ್‌ನೊಂದಿಗೆ 93,900ಕ್ಕೂ ಅಧಿಕ ಟೀಟ್‌ಗಳು ಹೊರಹೊಮ್ಮಿದ್ದವು.

ಟ್ವಿಟರ್‌ನಲ್ಲಿ ಈ ಹ್ಯಾಷ್ ಟ್ಯಾಗ್‌ ನ್ನು ಬಳಸಿದವರಲ್ಲಿ ರಾಜಸ್ಥಾನದಲ್ಲಿಯ ಜಾಟ್ ಸಮುದಾಯದ ಸದಸ್ಯರು, ಕಾಂಗ್ರೆಸ್ ಪಕ್ಷದ ಸದಸ್ಯರು ಮತ್ತು ದಿಲ್ಲಿಯಲ್ಲಿ ಪ್ರತಿಭಟನಾನಿರತ ಮಹಿಳಾ ಕುಸ್ತಿಪಟುಗಳ ಮೇಲೆ ದಾಳಿಗಾಗಿ ಬಿಜೆಪಿಯನ್ನು ಟೀಕಿಸುತ್ತಿರುವವರು ಸೇರಿದ್ದಾರೆ.

ಹಲವಾರು ಟ್ವಿಟರ್ ಬಳಕೆದಾರರು ಶೇರ್ ಮಾಡಿಕೊಂಡಿರುವ “ಗೋ ಬ್ಯಾಕ್ ಮೋದಿ' ಎಂದು ಬಿಳಿಯ ಬಣ್ಣದಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿರುವ ರಸ್ತೆಯ ಚಿತ್ರವು ಪ್ರಧಾನಿ ರಾಜ ಸ್ಥಾನವನ್ನು ತಲುಪಿದಾಗ ಎಂತಹ ಸ್ವಾಗತವನ್ನು ಪಡೆಯಬಹುದು ಎನ್ನುವುದನ್ನು ಸೂಚಿಸಿತ್ತು.

*ಅತಿಥಿಗಳನ್ನು ದೇವರಂತೆ ಕಾಣುವುದು ಮತ್ತು ಅವರನ್ನು ನಮ್ಮ ನೆಲಕ್ಕೆ ಸ್ವಾಗತಿಸುವುದು ರಾಜಸ್ಥಾನದ ಸಂಪ್ರದಾಯವಾಗಿದೆ. ಮೋದೀಜಿ, ನೀವು ಪ್ರಧಾನಿ ಹುದ್ದೆಯ ಘನತೆಯನ್ನು ಎತ್ತಿ ಹಿಡಿದಿದ್ದರೆ ನಾವೂ ಅದೇ ರೀತಿ ನಿಮ್ಮನ್ನು ಗೌರವಿಸುತ್ತಿದ್ದೆವು. ಆದರೆ ನೀವು ಆ ಹುದ್ದೆ ಮತ್ತು ದೇಶ ಎರಡಕ್ಕೂ ಅವಮಾನವನ್ನು ಮಾಡಿದ್ದೀರಿ. ಈ ದೇಶದ ಪುತ್ರಿಯರು ಕಣ್ಣೀರಿಡುತ್ತಿದ್ದಾರೆ, ಆದರೆ ನೀವು ಏನೂ ಆಗದವರಂತಿದ್ದೀರಿ 'ಎಂದು ಜಾಟ್ ಯೂನಿಟಿ ಹ್ಯಾಂಡಲ್ ಹೊಂದಿರುವ ಬಳಕೆದಾರರೋರ್ವರು ಟ್ವಿಟಿಸಿದ್ದರೆ, 'ಮೋದಿ ನೋ ಎಂಟ್ರಿ' ಎಂಬ ಬ್ಯಾನರ್‌ನ ಚಿತ್ರವನ್ನು ಶೇರ್ ಮಾಡಿಕೊಂಡಿರುವ ಇನ್ನೋರ್ವ ಬಳಕೆದಾರರು ಇದು ರಾಜಸ್ಥಾನ. ಗುಜರಾತ್ ಎಂದು ನೀವು ಭಾವಿಸಿದ್ದೀರಾ?' ಎಂದು ಟ್ವಿಟಿಸಿದ್ದಾರೆ.

ಅಣ್ಣೀ‌ ಜಿಲ್ಲೆಯಲ್ಲಿ ರಾಲಿಯೊಂದನ್ನುದ್ದೇಶಿಸಿ ಮಾತನಾಡಲು ಮೋದಿ ಬುಧವಾರ ರಾಜ್ಯಕ್ಕೆ ಭೇಟಿ ನೀಡಿದ್ದು, ಇದು ಕೇಂದ್ರದಲ್ಲಿ ಬಿಜೆಪಿಯು ಒಂಭತ್ತು ವರ್ಷಗಳ ಅಧಿಕಾರವನ್ನು ಪೂರೈಸಿರುವ ಸಂದರ್ಭದಲ್ಲಿ ಜನರನ್ನು ತಲುಪಲು ಆಯೋಜಿಸಿದ ಮೊದಲ ಕ್ಯಾಲಿಯಾಗಿತ್ತು. ರಾಜಸ್ಥಾನದಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...