ಸರ್ಕಾರಿ ಆಸ್ಪತ್ರೆ ಡಯಾಲಿಸಿಸ್ ಘಟಕಕ್ಕೆ ೫೦ ಸಾವಿರ ರೂಪಾಯಿ ಚೆಕ್ ವಿತರಿಸಿದ ಶಾಸಕ ಸುನೀಲ್ ನಾಯ್ಕ

Source: S.O. News Service | By MV Bhatkal | Published on 7th June 2021, 8:38 PM | Coastal News |

ಭಟ್ಕಳ:ತಾಲೂಕಿನ ಸರ್ಕಾರಿ ಆಸ್ಪತ್ರೆಯ ಡಯಾಲಿಸ್‌ಸ್ ಘಟಕ ನಿಲ್ಲುವ ಹಂತಕ್ಕೆ ಬಂದಿದ್ದು, ಇದರಿಂದ ರೋಗಿಗಳಿಗೆ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಎಲ್ಲಾ ಸಹಕಾರ ನೀಡಲು ತಾನು ಸಿದ್ದ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಅವರು ಸೋಮವಾರ ಬಟ್ಕಳ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ೫೦ಸಾವಿರ ರೂಗಳ ಚೆಕ್ ಅನ್ನು ಆಡಲಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರಿಗೆ ಹಸ್ತಾಂತರಿಸಿದರು. ತಾಲೂಕಿನ ಬಡ ರೋಗಿಗಳು ಡಯಾಲಿಸಸ್ ಕೇಂದ್ರ ಉಪಯೋಗ ಪಡೆಯುತ್ತಿದ್ದಾರೆ. ಒಂದು ವೇಳೆ ಬಿಆರ್‌ಎಸ್ ಸಂಸ್ಥೆ ಘಟಕದ ಕಾರ್ಯ ನಿಲ್ಲಿಸಿದರೆ ಇಲ್ಲಿನ ರೋಗಿಗಳಿಗೆ ತೊಂದರೆಯಾಗಲಿದೆ ಎನ್ನುವ ಅಂಶವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತನ್ನ ಕ್ಷೇತ್ರದ ಭಟ್ಕಳ ಮತ್ತು ಹೊನ್ನಾವರದ ರೋಗಿಗಳಿಗೆ ಯಾವುದೆ ತೊಂದರೆ ಆಗಬಾರದು ಎಮದು ತಾನೆ ವೈಯಕ್ತಿಕ ಸಹಾಯ ಮಾಡುತ್ತೇನೆ. ಬಿಆರ್‌ಎಸ್ ಸಂಸ್ಥೆ ಮತ್ತು ಸರ್ಕಾರದ ನಡುವಿನ ತೀರ್ಮಾನ ಆಗುವವವರೆಗೂ ವೈಯಕ್ತಿಕ ಸಹಾಯ ಮುಂದುವರೆಯಲಿದೆ ಎಂದು ಹೇಳಿದರು.
  ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ ಕೆಲವು ತಿಂಗಳ ಹಿಂದಿನಿAದಲೂ ಬಿಆರ್‌ಎಸ್ ಡಯಾಲಿಸ್‌ಸ್ ಘಟಕಕ್ಕೆ ಸರ್ಕಾರಿ ಆಸ್ಪತ್ರೆ ವತಿಯಿಂದಲೆ ಪರಿಕರ ಒದಗಿಸಿ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೋಳ್ಳಲಾಗಿದೆ.. ಸರ್ಕಾರದ ಹಂತದಲ್ಲಿ ಒಂದು ನಿರ್ಧಾರ ಆಗುವವರೆಗೂ ಶಾಸಕರು ಸಹಾಯಕ್ಕೆ ಮುಂದಾಗಿರುವದು ಸಂತಸದ ಸಂಗತಿ ಎಂದರು. ಡಾ.ಲಕ್ಷಿö್ಮÃಶ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಮಾಜಿ ಅಧ್ಯಕ್ಷ ರಾಜೇಶ ನಾಯ್ಕ, ಮಾಜಿ ಯೋಧ ಶ್ರೀಕಾಂತ ನಾಯ್ಕ, ದಿನೇಶ ನಾಯ್ಕ, ವಿವೇಕ ನಾಯ್ಕ, ಪಾಂಡು ನಾಯ್ಕ ಇತರರು ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...