ಭಟ್ಕಳದಲ್ಲಿ ವನಮಹೋತ್ಸವಕ್ಕೆ ಶಾಸಕ ಸುನೀಲ್ ಚಾಲನೆ

Source: SO NEWS | By MV Bhatkal | Published on 5th July 2022, 11:53 PM | Coastal News | Don't Miss |

ಭಟ್ಕಳ: ಕರ್ನಾಟಕ ಅರಣ್ಯ ಇಲಾಖೆ, ಭಟ್ಕಳ ಇವರ ಆಶ್ರಯದಲ್ಲಿ ಇಲ್ಲಿನ ಸಾಗರ ರೋಡ್ ಸಾಲುಮರದ ತಿಮ್ಮಕ್ಕ ಟೀ ಪಾರ್ಕ್ ಹಾಗೂ ಜಾಲಿ ಪ್ರೌಢಶಾಲೆಯಲ್ಲಿ ನಡೆದ ವನ ಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ಸುನೀಲ ನಾಯ್ಕ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು. 

ನಂತರ ಮಾತನಾಡಿದ ಅವರು, ಭೂಮಿ ಎನ್ನುವುದು ನಮ್ಮ ತಾಯಿ ಇದ್ದಂತೆ, ಗಿಡ, ಮರಗಳ ರಕ್ಷಣೆ ನಮ್ಮ ಹೊಣೆಯಾಗಿದೆ. ಸ್ವಚ್ಛತೆ ಶಿಕ್ಷಣದಷ್ಟೇ ಮಹತ್ವವಾಗಿದ್ದು. ಎಲ್ಲರೂ ಸ್ವಚ್ಛತೆಯ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು, ಗಿಡ ನೆಟ್ಟು ಮರವಾದ ನಂತರ ಅದರ ಲಾಭ ನಮಗೇ ಸಿಗುತ್ತದೆ ಎಂದು ತಿಳಿಸಿದರು. 
ಭಟ್ಕಳ ಸಹಾಯಕ ಆಯುಕ್ತ ಮಮತಾದೇವಿ, ಡಿಎಫ್‌ಓ ರವಿಶಂಕರ, ತಹಸೀಲ್ದಾರ ಡಾ.ಸುಮಂತ್, ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಎಸಿಎಫ್ ಬೋರಯ್ಯ, ಆರ್‌ಎಫ್‌ಓ ಶರತ್ ಶೆಟ್ಟಿ, ಜಾಲಿ ಪಟ್ಟಣ ಪಂಚಾಯತ ಸದಸ್ಯೆ ಶೈನಾ ಶೇಖ್, ಮುಖ್ಯಾಧಿಕಾರಿ ರಾಮಚಂದ್ರ ವರ್ಣೆಕರ ಮೊದಲಾದವರು ಉಪಸ್ಥಿತರಿದ್ದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...