ಶಾಸಕ ಸೋಮಶೇಖರರೆಡ್ಡಿ ಮತ್ತು ಅಧಿಕಾರಿಗಳು ಸಾಥ್. ಬಳ್ಳಾರಿ ನಗರ ಪ್ರದಕ್ಷಿಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

ಬಳ್ಳಾರಿ : ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಜತೆಗೂಡಿ ಗುರುವಾರ ಬಳ್ಳಾರಿ ನಗರ ಪ್ರದಕ್ಷಿಣೆ ಮಾಡಿದರು.
ನಗರದ ಹೊಸ ಬಸ್ ನಿಲ್ದಾಣ, ಗಡಗಿ ಚನ್ನಪ್ಪವೃತ್ತ, ಬೆಂಗಳೂರು ರಸ್ತೆ, ತೇರುಬೀದಿ, ಸಣ್ಣ ಮಾರುಕಟ್ಟೆ, ಮೀನಾಕ್ಷಿ ಸರ್ಕಲ್, ಮೋತಿ ಸರ್ಕಲ್, ಎಪಿಎಂಸಿ ರಾಡಾರ್,ಬೆಂಕಿ ಮಾರಮ್ಮ ಗುಡಿ ಸರ್ಕಲ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.
ಪುಟ್ಪಾತ್ ಸಮಸ್ಯೆ, ರಸ್ತೆ ಒತ್ತುವರಿ, ವ್ಯಾಪಾರಿಗಳ ಅಹವಾಲು ಸೇರಿದಂತೆ ಇನ್ನೀತರ ಸಮಸ್ಯೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಪಾಲನ್ನ, ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಪಾಲಿಕೆ ಮುಖ್ಯ ಎಂಜನಿಯರ್ ಖಾಜಾ ಮೊಹಿನುದ್ದೀನ್ ಸೇರಿದಂತೆ ಇನ್ನಿತರರು ಇದ್ದರು.