ಕೋರೋನಾ ಸಂದರ್ಭದಲ್ಲಿ‌ ರಾಜಕೀಯ ಲಾಭಕ್ಕಾಗಿ ಸಚಿವರ ಪ್ರಯತ್ನ : ಹರೀಶಕುಮಾರ್.

Source: SO News | By Laxmi Tanaya | Published on 11th June 2021, 8:13 PM | Coastal News | Don't Miss |

ಮಂಗಳೂರು : ತಸ್ತಿಕ ದೇವಸ್ಥಾನ ಹಣ ಬಿಡುಗಡೆ ಬಗ್ಗೆ ಮುಜರಾಯಿ ಇಲಾಖೆ ಸಚಿವರು ಸದ್ಯ ಮಾತನಾಡಿದ್ದಾರೆ. ಕೊರೊನಾ ಕಾಲದಲ್ಲಿ ರಾಜಕೀಯ ಲಾಭಕ್ಕಾಗಿ ಜನರಲ್ಲಿ ಗೊಂದಲ ಮೂಡಿಸುವುದು ಜನರ ಮನಸ್ಸನ್ನ ಪರಿವರ್ತನೆ ಮಾಡಲು ಮುಂದಾಗಿದ್ದಾರೆ  ಎಂದು ದಕ್ಷಿಣ ಕನ್ನಡ  ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ತಸ್ತಿಕ ಎಂಬುವುದು ಪುರತತ್ವ ಕಾಲದಿಂದಲೂ ಈ ಕಾನೂನುವಿದೆ‌. ತಸ್ತಿಕ ಯಾವುದೇ ದೇವಾಲಯದಿಂದ ಬಿಡುಗಡೆ ಯಾಗುವ ಹಣವಲ್ಲ. ಇದು ಸರಕಾರದಿಂದ ಬಿಡುಗಡೆಯಾಗುವ ಹಣ. ಆದ್ರೆ ಸತ್ಯವನ್ನ ಮರೆ ಮಾಚಲು ಬಿಜೆಪಿ ನಾಯಕರು ಮುಂದಾಗಿದ್ದಾರೆಂದು ಆರೋಪಿಸಿದ ಅವರು, ಮಸೀದಿ ಚರ್ಚ್ ಗಳಿಗೆ ಅಭಿವೃದ್ಧಿಗೆ ಬಿಡುಗಡೆಯಾಗುವ ಹಣ ದೇವಸ್ಥಾನದ ಹಣ ಎಂಬುದು ಜನರಲ್ಲಿ ಗೊಂದಲ ಮೂಡಿಸಿ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸರಕಾರ ಕೂಡಲೇ ಇದರ ಬಗ್ಗೆ ಸ್ಪಷ್ಟನೆ ನೀಡಲಿ. ಭಾವನಾತ್ಮಕವಾಗಿ ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸುವುದು ಬೇಡಾ ಎಂದು  ಹರೀಶ್ ಕುಮಾರ್ ಹೇಳಿದ್ದಾರೆ.

 

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...