ವಾರದ ಏಳು ದಿನ ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದ ಸಚಿವ ಶಿವರಾಮ ಹೆಬ್ಬಾರ

Source: sonews | By Staff Correspondent | Published on 10th August 2020, 6:16 PM | Coastal News |

ಮುಂಡಗೋಡ: ಪ್ರಕೃತಿಯ ಮುನಿಸು  ತಗ್ಗಿ ಶಾಂತವಾಗಿ  ಸಹಜ  ಸ್ಥಿತಿಗೆ ಮರಳುವವರೆಗೂ ವಾರದ ಏಳುದಿನ ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು . ಶನಿವಾರ ಭಾನುವಾರ ಕೂಡ ಕರ್ತವ್ಯಕ್ಕೆ ಹಾಜಾರಾಗುವಂತೆ ಅಧಿಕಾರಿಗಳಿಗೆ ತಕ್ಷಣ ನೋಟಿಸ ಜಾರಿ ಮಾಡಿ ಮಾಡುವಂತೆ ಕಾರ್ಮಿಕ ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಹಶೀಲ್ದಾರ ರಿಗೆ ಸೂಚಿಸಿದರು.

ಅವರು   ಪಟ್ಟಣದ ಪರೀವಿಕ್ಷಣಾ ಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಿಸಿದ ಬಳಿಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಅತಿವೃಷ್ಟಿಯಿಂದ ನಮ್ಮ ಜಿಲ್ಲೆ ತತ್ತರಿಸಿ ಹೋಗಿದ್ದು ಬಹಳಷ್ಟು ಜನ ಮನೆಮಠ  ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ, ನಿರಾಶ್ರಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ  ನೆರೆ ಸಂತ್ರಸ್ಥರ ನೆರವಿಗೆ ಧಾವಿಸಿ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬ ಸರ್ಕಾರಿ ಇಲಾಖೆಯ ಅಧಿಕಾರಿಗಳ ಜವಾಬ್ದಾರಿ. ಕೋವಿಡ್, ಲಾಕ್‍ಡೌನ್ ಸಂದರ್ಭದಲ್ಲಿ ಕಂದಾಯ ಇಲಾಖೆ, ಪೊಲೀಸ ಇಲಾಖೆ, ಸ್ಥಳಿಯ ಸಂಸ್ಥೆ ಆಶಾಕಾರ್ಯಕರ್ತೆಯರು ಕೆಲವೇ ಇಲಾಖೆಗಳು ಮಾತ್ರ ವಾರಿಯರ್ಸ್ ಆಗಿ ಕೆಲಸ ಮಾಡಿವೆ. ಆದರೆ ಗ್ರಾ.ಪಂ ಅಧಿಕಾರಿ ಸಿಬ್ಬಂದಿ ಸೇರಿ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಅತಿವೃಷ್ಟಿ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಯಾವುದೇ ನೆಪವೊಡ್ಡಿ ರಜೆ ಪಡೆಯುವಂತಿಲ್ಲತಮ್ಮ ವ್ಯಾಪ್ತಿಯ ನೆರೆ ಸಂತ್ರಸ್ತರ ಬಗ್ಗ ಮಾಹಿತಿ ಕಲೆ ಹಾಕಿ ತಹಶೀಲ್ದಾರರಿಗೆ ವರದಿ ನೀಡಬೇಕು ಎಂದರು
ನಂತರ ಸಚಿವರು ಜಲಾಶಯ ಕೆರೆ ಕಟ್ಟೆಗಳ ಸ್ಥಿತಿಗಳನ್ನು ಪರಿಶೀಲಿಸಲು ಬಾಚಣಿಕೆ ಜಲಾಶಯ, ಅಮ್ಮಾಜಿ ಕೆರೆ, ಕೊಪ್ಪ ಗ್ರಾಮದ ಕೆರೆಗಳ ಸ್ಥಿತಿಗಳ ಕುರಿತು ಅವಲೋಕಿಸಿದರು
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಎಲ್.ಟಿ.ಪಾಟೀಲ್, ರವಿಗೌಡ ಪಾಟೀಲ, ನಾಗಭೂಷಣ ಹಾವಣಗಿ ಸೇರಿದಂತೆ ಮುಂತಾದವರು ಇದ್ದರು
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...