ಭಟ್ಕಳ; ಸಂಭ್ರಮದ ಮಿಲಾದ್ ಮೆರವಣೆಗೆ; ನೂರಾರು ಮಂದಿ ಪ್ರವಾದಿ ಪ್ರೇಮಿಗಳು ಭಾಗಿ

Source: sonews | By Staff Correspondent | Published on 10th November 2019, 11:52 PM | Coastal News | Don't Miss |

ಭಟ್ಕಳ: ಹಝರತ್ ಮುಹಮ್ಮದ್ ಪೈಗಂಬರರ ಜನ್ಮಾದಿನಾಚಣೆಯ ಅಂಗವಾಗಿ ಬಝ್ಮೆ ಫೈಝೆ ರಸೂಲ್, ಇದಾರೆ ಫೈಝೆ ರಸೂಲ್ ಹಾಗೂ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ನೇತೃತ್ವದಲ್ಲಿ ಭಾನುವಾರ ಬೃಹತ್ ಮಿಲಾದ್ ಮೆರವಣೆಗೆ ನರವೇರಿತು. 

ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರವಾದಿ ಪ್ರೇಮಿಗಳು  ಪ್ರವಾದಿ ಮುಹಮ್ಮದ್ ಪೈಗಂಬರರ ಸ್ತುತಿಗೀತೆಗಳನ್ನು ಹಾಡುತ್ತ ಮೆರವಣೆಗೆಯನ್ನು ಯಶಸ್ವಿಗೊಳಿಸಿದರು.

ಸಂಜೆ ೪:೩೦ಕ್ಕೆ ಈದ್ಗಾ ಮೈದಾನದಿಂದ ಆರಂಭಗೊAಡ ಮಿಲಾದ್ ಮೆರವಣೆಗೆ ಶಮ್ಸುದ್ದೀನ್ ವೃತ್ತದ ಮೂಲಕ ಮುಖ್ಯ ರಸ್ತೆ, ಸುಲ್ತಾನ್ ಸ್ಟಿçÃಟ್ ಚೌಕ್ ಬಝಾರ್, ಮುಹಮ್ಮದ್ ಅಲಿ ರೋಡ್, ಮಾರಿಕಟ್ಟೆ ಮಾರ್ಗವಾಗಿ   ಸಾರ್ವಜನಿಕ ಮೈದಾನದಲ್ಲಿ ಸಮಾಪ್ತಿಗೊಂಡಿತು. 

ಬಝ್ಮೆ ಫೈಝೆ ರಸೂಲ್ ಸಂಘಟನೆಯ ಮುಖಂಡರಾದ ಅಬ್ದುಲ್ ಅಲೀಮ್ ಗವಾಯಿ, ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಮುಖಂಡರಾದ ಮುನೀರ್ ಶೇಖ್, ಫೈಝಾನ್ ರಝಾ, ಅಬುಹುರೈರಾ ಅಕ್ರಮಿ, ಜಿಫ್ರಿ ಅಕ್ರಮಿ, ಮೌಲಾನ ಅಷದ್ ಸಿದ್ದೀಖಾ, ರಿಝ್ವಾನ್ ಸಿದ್ದೀಖಾ ಸೇರಿದಂತೆ ಹಲವು ಗಣ್ಯರು ಮೆರವಣೆಗೆ ನೇತೃತ್ವ ವಹಿಸಿದ್ದರು. 

ಮೆರವಣೆಗೆಯಲ್ಲಿ ವಿದ್ಯಾರ್ಥಿಗಳ ಧಫ್ ಕುಣಿತ, ಹಾಗೂ ಆಕರ್ಷಕ ಟ್ಯಾಬ್ಲೊಗಳು ಜನರ ಗಮನ ಸೆಳೆದವು.

ಅಡಿಷನಲ್ ಎಸ್.ಪಿ ಗೋಪಾಲ್ ಬೈಕೋಡ್, ಭಟ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ನಿಖಿಲ್ ಬಿ, ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. 
 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...