ಕೋವಿಡ್ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಕ್ರಮ. ಆರು ಮಂದಿಗೆ ದಂಡ.

Source: SO News | By Laxmi Tanaya | Published on 30th September 2020, 3:52 PM | Coastal News | Don't Miss |

ಮಂಗಳೂರು : ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿದಿದ್ದು,  6 ಮಂದಿಗೆ ದಂಡ ವಿಧಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಹಿರಿಯ, ಕಿರಿಯ ನಿರೀಕ್ಷಕರು ಕಾರ್ಯಾಚರಣೆ ನಡೆಸಿದರು.

ಸಾವಿರ ರೂ. ದಂಡ ಸಂಗ್ರಹ
ಸುರತ್ಕಲ್‌ ಪರಿಸರದಲ್ಲಿ ಪಾಲಿಕೆಯ ಆರೋಗ್ಯ ವಿಭಾಗ ಹಾಗೂ ವಲಯ ಆಯುಕ್ತ ಸದಾಶಿವ ಅವರ ನೇತೃತ್ವದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಹಾಕಲಾಯಿತು. ಈ ಪ್ರದೇಶದಲ್ಲಿ ಒಟ್ಟು 1,000 ರೂ.ಗಳನ್ನು ಸಂಗ್ರಹಿಸಲಾಗಿದೆ. ಮಾಸ್ಕ್ ಧರಿಸದ ಸುರತ್ಕಲ್‌ ವ್ಯಾಪ್ತಿಯ ಸಾರ್ವಜನಿಕರಿಗೆ, ಅಂಗಡಿ ಮಾಲಕರಿಗೆ ಮಾಸ್ಕ್ ನೀಡಿ ದಂಡ ವಿಧಿಸಲಾಯಿತು. ಬಡವರಿಗೆ ದಂಡ ವಿಧಿಸದೆ ಕೊರೊನಾ ಬಗ್ಗೆ ಅರಿವು ಮೂಡಿಸಿ ಉಚಿತ ಮಾಸ್ಕ್ ನೀಡಲಾಯಿತು. 

ಈ ಕಾರ್ಯಾಚರಣೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಶುಶಾಂತ್‌ ಮತ್ತು ಪರಿಸರ ಅಭಿಯಂತರ ದಯಾನಂದ ಪೂಜಾರಿ, ಹೆಲ್ತ್‌ ಸೂಪರ್‌ವೈಸರ್‌ ಪ್ರವೀಣ್‌, ಯೋಗೀಶ್‌, ಸುಭಾಶ್‌ ಭಾಗವಹಿಸಿದ್ದರು.

ಮೂಡುಬಿದಿರೆ: ಮಾಸ್ಕ್ ಧರಿಸದ 7 ಮಂದಿಗೆ ದಂಡ

ಮೂಡುಬಿದಿರೆ: ಸೋಮವಾರ ಮಾಸ್ಕ್ ಧರಿಸದ 7 ಮಂದಿಗೆ ತಲಾ 200 ರೂ.ಗಳಂತೆ ದಂಡ ವಿಧಿಸಲಾಗಿದೆ ಎಂದು ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದ್ದಾರೆ. ಕಚೇರಿ ಕೆಲಸದ ಒತ್ತಡವಿದ್ದುದರಿಂದ ಹೆಚ್ಚು ಓಡಾಟ ನಡೆಸಲು ಸಾಧ್ಯವಾಗಿಲ್ಲ. ಮಂಗಳವಾರದಿಂದ ಮತ್ತೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

ಉಳ್ಳಾಲ: 10,800 ರೂ. ದಂಡ ಸಂಗ್ರಹ

ಉಳ್ಳಾಲ: ಮಂಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಮತ್ತು ಕೋಟೆಕಾರು ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಕೋವಿಡ್‌-19 ತಡೆ ನಿಯಮ ಉಲ್ಲಂಘಿಸಿದವರಿಂದ ಸೋಮವಾರ ಒಟ್ಟು 10,800 ರೂ. ದಂಡ ಸಂಗ್ರಹಿಸಲಾಗಿದೆ.
ನಾಲ್ಕು ದಿನಗಳಿಂದ ಮಾಸ್ಕ್ ಧರಿಸದೆ, ನಿಯಾಮವಳಿಯನ್ನು ಉಲ್ಲಂಘಿಸುತ್ತಿರುವವರ ದಂಡ ವಸೂಲಾತಿ ನಡೆಸುತ್ತಿದ್ದು, ಸೋಮವಾರ ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ಅವರ ನೇತೃತ್ವದಲ್ಲಿ ಉಳ್ಳಾಲ ವ್ಯಾಪ್ತಿಯಲ್ಲಿ 8,000ರೂ. ದಂಡ ವಸೂಲಿಯಾದರೆ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ ನೇತೃತ್ವದಲ್ಲಿ 1,800 ರೂ. ಮತ್ತು ಕೋಟೆಕಾರು ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಪ್ರಭಾಕರ ಎಂ. ಪಾಟೀಲ ಅವರ ನೇತೃತ್ವದಲ್ಲಿ 1,000 ರೂ. ದಂಡ ವಸೂಲಿ ಮಾಡಲಾಗಿದೆ.

Read These Next

ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ. ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಣೆ : ಆನಂದ ಅಸ್ನೋಟಿಕರ್.

ಕಾರವಾರ : ನವೆಂಬರ್ ಒಂದರಂದು ಕಾರವಾರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜೆ.ಡಿ.ಎಸ್.ನ ನಾಲ್ಕು ಮತ್ತು ...

ಎನ್ ಡಿಆರ್ ಎಫ್ ತಂಡದಿಂದ ಅಣಕು ಪ್ರದರ್ಶನ. ಸಾರ್ವಜನಿಕರಲ್ಲಿ ರಕ್ಷಣಾ ಕಾರ್ಯದ ರೀತಿ ಮತ್ತು ಮಹತ್ವದ ಅರಿವು ಮೂಡಬೇಕು: ಜಿಲ್ಲಾಧಿಕಾರಿ ನಿತೇಶ ಪಾಟೀಲ

ಧಾರವಾಡ : ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಲ್ಲಿ ನೆರೆಹೊರೆಯವರು ಸೇರಿದಂತೆ ಸಾರ್ವಜನಿಕರು ತತಕ್ಷಣ ಸ್ಪಂಧಿಸುವುದರಿಂದ ಮತ್ತು ...

ಮತ ಚಲಾಯಿಸಿದ ಕೋವಿಡ್ ಸೋಂಕಿತರು

ಧಾರವಾಡ : ಬುಧವಾರ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ...