ಭಟ್ಕಳದ ಶಬ್ಬೀರ್‍ಗೆ ಪಾಸ್‍ಪೋರ್ಟ ನೀಡಲು ಪೊಲೀಸ್ ತಡೆ

Source: sonews | By Staff Correspondent | Published on 17th November 2019, 10:57 PM | Coastal News | Don't Miss |

2017ರಲ್ಲಿ ಈತ ಜೈಲಿನಿಂದ ಬಿಡುಗಡೆಯಾಗಿದ್ದ !

ಭಟ್ಕಳ: ಶಂಕಿತ ಉಗ್ರನಾಗಿ ಜೈಲು ಸೇರಿ 2017ರಲ್ಲಿ ಬಿಡುಗಡೆಯಾಗಿದ್ದ ತಾಲೂಕಿನ ಮುಗ್ಧಮ್ ಕಾಲೋನಿಯ ನಿವಾಸಿ ಶಬ್ಬೀರ್ ಗಂಗೊಳ್ಳಿ ಯಾನೆ ಶಬ್ಬೀರ್ ಮೌಲಾನಾಗೆ ಪಾಸ್ಪೋರ್ಟ ನೀಡಲು ಭಟ್ಕಳ ಪೊಲೀಸರು ಅಡ್ಡಗಾಲು ಹಾಕಿರುವ ಮಾಹಿತಿ ಬೆಳಕಿಗೆ ಬಂದಿದೆ.

ಜೈಲಿನಿಂದ ಬಿಡುಗಡೆಗೊಂಡು ಒಂದೂವರೆ ವರ್ಷ ಕಳೆದ ಬಳಿಕ ವಿದೇಶದಲ್ಲಿ ಉದ್ಯೋಗ ಕಂಡುಕೊಳ್ಳಲು ಪಾರ್ಸಪೋರ್ಟಗೆ ಅರ್ಜಿ ಸಲ್ಲಿಸಿದ್ದ ಶಬ್ಬೀರ್, ದಾಖಲಾತಿ ಪರಿಶೀಲನೆಯ ಸಂಬಂಧ ಪೊಲೀಸರ ಮುಂದೆ ಹಾಜರಾಗಿದ್ದು, ಪೊಲೀಸರು ನಕಾರ ಸೂಚಿಸಿದ್ದಾರೆ. ಭಟ್ಕಳದಲ್ಲಿದ್ದು ಜೀವನ ನಡೆಸಲು ಕಷ್ಟವಾಗುತ್ತಿದೆ ಎನ್ನುತ್ತ ಶಬ್ಬೀರ್, ಸ್ಥಳೀಯ ಮುಖಂಡರೊಂದಿಗೆ ಠಾಣೆಗೆ ತೆರಳಿ ಪೊಲೀಸರಿಗೆ ಮನವರಿಕೆ ಮಾಡಿಸುವ ಕೆಲಸ ಮಾಡಿದನಾದರೂ ಫಲ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಜೀವನದ ಅಮೂಲ್ಯ ಸಮಯವನ್ನು ಜೈಲಿನಲ್ಲಿ ಕಳೆದಿದ್ದೇನೆ. ಇದೀಗ ಭಟ್ಕಳದಲ್ಲಿ ಕೆಲಸ ಹುಡುಕಿಕೊಳ್ಳಲು ಕಷ್ಟವಾಗುತ್ತಿದೆ. ಬೇರೆ ದೇಶಕ್ಕೆ ಹೋಗಿ ಕೆಲಸ ಹುಡುಕಿಕೊಳ್ಳೋಣ ಎಂದರೆ ಇದೀಗ ಪಾಸ್ಪೋರ್ಟ ಸಮಸ್ಯೆ ಎದುರಾಗಿದೆ. -ಶಬ್ಬೀರ್ ಮೌಲಾನ

2008ರಲ್ಲಿ ಮಂಗಳೂರು ಉಳ್ಳಾಲದ ಮನೆಯೊಂದರ ಮೇಲೆ ಮುಂಬಯಿ ಪೊಲೀಸರು ದಾಳಿಯ ಸಂಬಂಧ ಶಬ್ಬೀರ್ 13ನೇ ಆರೋಪಿಯಾಗಿ ಶಂಕಿತ ಉಗ್ರರ ಪಟ್ಟಿ ಸೇರಿದ್ದ. ಭಟ್ಕಳ ಜಾಲಿ ಸಮುದ್ರ ತೀರದ ಬೆಹ್ರೀನ್ ಹೌಸ್ನಲ್ಲಿ ಈತ ಯುವಕರಿಗೆ ಜಿಹಾದಿ ಬೋಧನೆ ಮಾಡಿದ್ದ ಬಗ್ಗೆ ಆರೋಪ ಹೊರಿಸಲಾಗಿತ್ತು. ನಂತರ ಆತ ಪುಣೆಗೆ ಪಲಾಯನಗೈದು ಮಾವನೊಂದಿಗೆ ವಾಸವಾಗಿದ್ದ. 2008 ಡಿಸೆಂಬರ್ನಲ್ಲಿ ಖೋಟಾ ನೋಟು ಚಲಾವಣೆಯ ಆರೋಪದ ಮೇರೆಗೆ ಪುಣೆಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಅಲ್ಲದೇ ಉಗ್ರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಕ್ಕೆ ಸಂಬಂಧಿಸಿದಂತೆ ಈತ ಅರೆಬಿಕ್ ಬರಹಗಳುಳ್ಳ ಕೆಲವು ಪ್ರತಿಗಳನ್ನು ಇಟ್ಟುಕೊಂಡಿದ್ದ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು. ಖೋಟಾ ನೋಟು ಪ್ರಕರಣದಲ್ಲಿ ಪುಣೆ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ತೀರ್ಪಿನ ವಿರುದ್ಧ ಶಬ್ಬೀರ್ ಹೈಕೋರ್ಟ ಮೆಟ್ಟಿಲನ್ನು ಏರಿದ್ದನಾದರೂ ಹೊತ್ತಿಗೆ ಕೆಳ ನ್ಯಾಯಾಲಯ ನೀಡಿದ ಜೈಲು ಶಿಕ್ಷೆಯ ಅವಧಿ ಮುಗಿದ ಕಾರಣ ಖೋಟಾನೋಟು ಆರೋಪದ ಸಂಬಂಧ ನ್ಯಾಯಾಲಯದ ಹೋರಾಟವನ್ನು ಅಲ್ಲಿಗೇ ನಿಲ್ಲಿಸಿ ಆತ ಮನೆಯನ್ನು ಸೇರಿಕೊಳ್ಳಲು ಆಸಕ್ತನಾಗಿದ್ದ. ಅರೇಬಿಕ್ ಬರಹ ಪ್ರಕರಣದಲ್ಲಿ ಈತನನ್ನು ನ್ಯಾಯಾಲಯ ನಿರ್ದೋಷಿ ಎಂದು ತೀರ್ಪಿತ್ತಿತು. ವಿಶೇಷ ಎಂದರೆ ಜೈಲಿನಲ್ಲಿದ್ದ ಅವಧಿಯಲ್ಲಿಯೇ ನಡೆದ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಮ್ ಸ್ಪೋಟ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ ಈತನನ್ನು ನಂತರ ನ್ಯಾಯಾಲಯ ನಿರಪರಾಧಿ ಎಂದು ಹೇಳಿತ್ತು. ಕೊನೆಯದಾಗಿ ಭಟ್ಕಳ ಜಾಲಿ ಬೀಚ್ ಜಿಹಾದಿ ಬೋಧನೆ ಪ್ರಕರಣದಲ್ಲಿಯೂ ಈತ ಆರೋಪ ಮುಕ್ತನಾಗಿ ಮನೆಗೆ ಬಂದಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.

ಕುರಿತು ಮೀಡಿಯಾ 'ಗೆ ಪ್ರತಿಕ್ರಿಯಿಸಿರುವ ಶಬ್ಬೀರ್, ಜೀವನದ ಅಮೂಲ್ಯ ಸಮಯವನ್ನು ಜೈಲಿನಲ್ಲಿ ಕಳೆದಿದ್ದೇನೆ. ಇದೀಗ ಭಟ್ಕಳದಲ್ಲಿ ಕೆಲಸ ಹುಡುಕಿಕೊಳ್ಳಲು ಕಷ್ಟವಾಗುತ್ತಿದೆ. ಬೇರೆ ದೇಶಕ್ಕೆ ಹೋಗಿ ಕೆಲಸ ಹುಡುಕಿಕೊಳ್ಳೋಣ ಎಂದರೆ ಇದೀಗ ಪಾಸ್ಪೋರ್ಟ ಸಮಸ್ಯೆ ಎದುರಾಗಿದೆ. ನಾವು ಬಡವರಾಗಿದ್ದು, ಮನೆಯವರಿಗೆ ನಾನೇ ಆಧಾರವಾಗಿದ್ದೇನೆ. ಪೊಲೀಸರು ಪಾಸ್ಪೋರ್ಟ ಪರಿಶೀಲನೆಯ ವೇಳೆ ನಿಮಗೆ ಪಾಸ್ಪೋರ್ಟ ಸಾಧ್ಯವಿಲ್ಲ ಎಂದಿದ್ದಾರೆ. ಈಗ ಏನು ಮಾಡುವುದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

 

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...