ಭಟ್ಕಳ: ವ್ಯಾಪಾರ ಪರವಾನಿಗೆ ನವೀಕರಣ ಮಾಡದೇ ಇದ್ದರೆ ಏಕಾಏಕಿ ಅಂಗಡಿ ಬಂದ್ ಮಾಡಲು ಅವಕಾಶ ಇಲ್ಲ; ಪುರಸಭಾ ಮುಖ್ಯಾಧಿಕಾರಿಗಳ ಮುಂದೆ ಸದಸ್ಯರ ವಾದ

Source: S O News Service | By I.G. Bhatkali | Published on 20th September 2020, 12:17 AM | Coastal News |

ಭಟ್ಕಳ: ಅಂಗಡಿಕಾರರು ವ್ಯಾಪಾರ ಪರವಾನಿಗೆ (ಟ್ರೇಡ್ ಲೈಸೆನ್ಸ್) ನವೀಕರಣ ಮಾಡಿಕೊಳ್ಳದೇ ಇದ್ದರೆ ಏಕಾಏಕಿಯಾಗಿ ಅಂಗಡಿಗಳನ್ನು ಮುಚ್ಚಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಪುರಸಭಾ ಸದಸ್ಯರು ಶನಿವಾರ ಸಂಜೆ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿ ವಾದ ಮಂಡಿಸಿದರು. 

ಪುರಸಭಾ ಸದಸ್ಯರ ಪರವಾಗಿ ಮಾತನಾಡಿದ ಹಿರಿಯ ಸದಸ್ಯ ಫರ್ವೇಜ್ ಕಾಶೀಮ್‍ಜಿ, ಅಂಗಡಿಕಾರರು ವ್ಯಾಪಾರ ಪರವಾನಿಗೆ ನವೀಕರಣ ಮಾಡಿಕೊಳ್ಳದೇ ಇದ್ದರೆ ಅಂತವರಿಗೆ ನೋಟೀಸ್ ನೀಡಿ, ಅದಕ್ಕೆ ಸ್ಪಂದಿಸದೇ ಇದ್ದರೆ ಕಾನೂನಿನಲ್ಲಿ ಏನು ಅವಕಾಶ ಇದೆಯೋ ಅದನ್ನು ಮಾಡಿ, ಅದನ್ನು ಬಿಟ್ಟು ಅಂಗಡಿ ಮುಚ್ಚಲು ಹೋಗಬೇಡಿ, ಕಾನೂನಿನಲ್ಲಿ ಅಂಗಡಿ ಮುಚ್ಚಲು ಅವಕಾಶ ಇದ್ದರೆ ಅದನ್ನು ನಮ್ಮ ಗಮನಕ್ಕೆ ತನ್ನಿ, ನಾವು ಅದನ್ನು ಅಂಗಡಿಕಾರರಿಗೆ ತೋರಿಸುತ್ತೇವೆ ಎಂದರು.

ಹಲವು ಪುರಸಭಾ ಅಂಗಡಿ ಮಳಿಗೆಗಳಿಂದ ಇನ್ನೂ ಬಾಡಿಗೆ ಭರಣ ಆಗಿಲ್ಲ. ಬಹಳಷ್ಟು ಗೂಡಂಗಡಿಗಳು, ಬೀದಿ ವ್ಯಾಪಾರಿಗಳು ಕಾನೂನು ಮೀರಿ ವ್ಯಾಪಾರ ವಹಿವಾಟು ನಡೆಸುತ್ತಿವೆ. ಅದನ್ನು ತೆರವುಗೊಳಿಸಲು ಇನ್ನೂ ಆಗದೇ ಉಳಿದ ಅಂಗಡಿಗಳನ್ನು ಮುಚ್ಚಲು ಹೋಗಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಕೆಲವು ಪುರಸಭಾ ಅಂಗಡಿ ಮಳಿಗೆಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಕೆಲ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದರು.

ಸದಸ್ಯರ ಒಟ್ಟಾಭಿಪ್ರಾಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಪುರಸಭಾ ಮುಖ್ಯಾಧಿಕಾರಿ ದೇವರಾಜು ಭರವಸೆ ನೀಡಿದರು. 

ಅಲ್ತಾಫ್ ಖರೂರಿ, ಫಯ್ಯಾಜ್ ಮುಲ್ಲಾ, ಇಂಶಾದ್, ಅಬ್ದುಲ್ ರವೂಫ್ ನಾಯಿತೆ, ಪಾಸ್ಕಲ್ ಗೋಮ್ಸ್, ಕ್ರಿಷ್ಣಾನಂದ್ ಪೈ, ಮೊದಲಾದವರು ಉಪಸ್ಥಿತರಿದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...