ಜಾಮೀಯಾ ಮಸೀದಿ ಈದ್ಗ ಮೈದಾನದಲ್ಲಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ

Source: sonews | By Staff Correspondent | Published on 13th August 2019, 3:16 PM | State News | Don't Miss |

ಶ್ರೀನಿವಾಸಪುರ: ಪಟ್ಟಣ ಹೊರವಲಯದ ಜಾಮೀಯಾ ಮಸೀದಿ ಈದ್ಗ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲೀಂ ಭಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಜಗತ್ತಿನ ಮನುಷ್ಯ ವರ್ಗದ ನಾಯಕರಾಗಿ ನೇಮಿಸಲ್ಪಟ್ಟ ಪ್ರವಾದಿ ಇಬ್ರಾಹಿಂರನ್ನು ಅನುಸರಿಸುತ್ತ ತಮ್ಮ ಜೀವನದಲ್ಲಿ ತ್ಯಾಗ ಮತ್ತು ಬಲಿದಾನಗಳಿಗೆ ಸಿದ್ದರಾಗುವಂತೆ ಜಾಮೀಯಾ ಮಸೀದಿ ಇಮಾಮ್ ಮೌಲಾನಾ ಮುಫ್ತಿ ಸಲೀಂ ಅಹ್ಮದ್ ಖಾಸಿಮ್ಮು ಮಸ್ಲೀಂ ಸಮುದಾಯಕ್ಕೆ ಕರೆ ನೀಡಿದರು. ಅವರು ಈದುಲ್ ಆಝ್ಹಾ(ಬಕ್ರೀದ್ ಹಬ್ಬದ) ಪ್ರಾರ್ಥನೆ ಸಲ್ಲಿಸಿ ಈ ಸಂದೇಶ ನೀಡಿದರು.

ಕುರ್ಬಾನಿ(ಬಲಿದಾನ) ಎನ್ನುವುದು ಕೇವಲ ಪ್ರಾಣಿ ಬಲಿಯಾಗದೆ ಅದರ ಹಿಂದೆ ಇರುವ ಮಹಾನ್ ಉದ್ದೇಶವನ್ನು ಅರಿಯಬೇಕಾಗಿದೆ ಎಂದ ಅವರು, ವ್ಯಕ್ತಿಯ ಬಲಿದಾನವು ಒಂದು ಸಮುದಾಯ ಹಾಗೂ ಸಮಾಜವನ್ನು ಜೀವಂತವಾಗಿಡುತ್ತದೆ. ಕುರ್ಬಾನಿ ಎನ್ನುವುದು ಇಸ್ಲಾಂನ ಚಿಹ್ನೆಗಳೊಂದಾಗಿದ್ದು, ನಮ್ಮ ಮೇಲೆ ಕಡ್ಡಾಯವಾಗಿದೆ, ಅಲ್ಲಾಹನ ಆದೇಶ ಮೇರೆಗೆ ಪ್ರವಾದಿ ಇಬ್ರಾಹಿಂ ರವರು ತಮ್ಮ ಪುತ್ರನನ್ನೇ ಬಲಿ ನೀಡಲು ಮುಂದಾದರು ಇದು ಕೇವಲ ಸಂಕೇತ ಮಾತ್ರ. ಇದು ಮುಸ್ಲಿಂ ಸಮುದಾಯವು ಕೋಡ ಯಾವುದೇ ರೀತಿಯ ತ್ಯಾಗ ಬಲಿದಾನಗಳಿಗೆ ಸನ್ನದ್ಧರಾಗಿರಬೇಕೆಂದು ಇದರ ಅಂತರಾಳವಾಗಿದೆ ಎಂದು ತಿಳಿಸುತ್ತಾ, ಮುಸ್ಲೀಂ ಸಮುದಾಯದಿಂದ ಅನ್ಯ ಸಮುದಾಯದವರಿಗೆ ತೊಂದರೆಯಾಗದಂತೆ ನಡೆದುಕೊಂಡು ಇಸ್ಲಾಂ ಧರ್ಮ ಮೂಲಮಂತ್ರವಾದ ಸ್ವಚ್ಛತೆ, ಶಾಂತಿ ಮತ್ತು ಸೌಹಾರ್ಧತೆ, ಸಹಭಾಳ್ವೆಗೆ ಒತ್ತುಕೊಡಬೇಕೆಂದರು ತಮ್ಮ ಸಂದೇಶದಲ್ಲಿ ತಿಳಿಸಿದರು.

ಇಂದು ಈದ್ಗ ಮೈದಾನದಲ್ಲಿ ಉತ್ತರ ಕರ್ನಾಟಕದ ಜಲಪ್ರಳಯದಿಂದ ನೊಂದಂತಹ ಸಂತ್ರಸ್ತರಿಗೆ ನಿಧಿ ಸಂಗ್ರಹಿಸಿದರು.

ಇದೇ ಸಂದರ್ಭದಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಜ್ಹಾಹೀದ್ ಅನ್ಸಾರಿ, ಕಾರ್ಯದರ್ಶಿ ನೂರುಲ್ಲಾಖಾನ್, ಪುರಸಭೆ ಸದಸ್ಯರು ಶಬ್ಬೀರ್ ಖಾನ್ ಇಫ್ತೈಕರ್ ಅಹ್ಮದ್ ಮುತ್ತಕಪಲ್ಲಿ ಸರ್ಧಾರ್, ಪುರಸಭೆ ಮಾಜಿ ಅಧ್ಯಕ್ಷ ಮಹಬೂಬ್ ಷರೀಪ್, ಮಾಜಿ ಸದಸ್ಯ ಏಜಾಜ್ ಪಾಷಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಕ್ಬರ್ ಷರೀಪ್, ಶ್ರೀನಿವಾಸಪುರ ಉರ್ದು ಶಿಕ್ಷಕರ ಸಂಘದ ಅಧ್ಯಕ್ಷರು ಮಹಮದ್ ಸಾಧಿಕ್, , ಸೈಯದ್ ಖಾದರ್, ಮುಜಾಹಿದ್ ಅನ್ಸಾರಿ, ಮತ್ತು ಸಮುದಾಯದ ಇತರೆ  ಸದಸ್ಯರು ಭಾವಹಿಸಿದರು.

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ...