ಮಾರುತಿ ಇಕೋ ಕಾರಿನಲ್ಲಿ ಅಕ್ರಮ ಗೋಮಾಂಸ ಸಾಗಾಟ -350 ಕೆ.ಜಿ ಗೋಮಾಂಸ ವಶ

Source: SO NEWS | By MV Bhatkal | Published on 22nd May 2022, 12:31 AM | Coastal News |

ಭಟ್ಕಳ: ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಬಳಿಯಲ್ಲಿ ಬಿಳಿ ಬಣ್ಣದ ಮಾರುತಿ ಇಕೋ ಕಾರಿನಲ್ಲಿ ಗೋವನ್ನು ವಧೆ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಮಾಂಸವನ್ನು ತುಂಬಿಕೊಡು ಬರುತ್ತಿರುವ ಸಂದರ್ಭದಲ್ಲಿ ತಪಾಸಣೆ ಮಾಡಿದ ಪೊಲೀಸರು ವಾಹನ ಸಹಿತ ಮಾಂಸವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. 
ಗೋವನ್ನು ಎಲ್ಲಿಯೋ ವಧೆ ಮಾಡಿ ೩೫೦ ಕೆ.ಜಿ. ತೂಕದ ಸುಮಾರು ೭೦ ಸಾವಿರ ರೂಪಾಯಿ ಮೌಲ್ಯದ ಗೋಮಾಂಸವನ್ನು ತುಂಬಿಕೊAಡು ಬರುತ್ತಿದ್ದು ಕಾರಿನಲ್ಲಿದ್ದ ಕೋಕ್ತಿ ನಗರದ ಮೊಹದ್ದೀನ್ ರಾಶೀದ್ ತಂದೆ ಮೊಹಮ್ಮದ್ ರಿಯಾಜ್ ಎನ್ನುವನನ್ನು ವಶಕ್ಕೆ ಪಡೆದುಕೊಂಡಿದ್ದು ಇನ್ನಿಬ್ಬರು ಆರೋಪಿಗಳಾದ ಮಗ್ದಂ ಕಾಲೋನಿಯ ಹಸನ್ ಶಬ್ಬರ್, ಮೂಸಾ ನಗರದ ಮುಝಾಫರ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.  
ಕಾರ್ಯಾಚರಣೆಯನ್ನು ಎಸ್.ಪಿ. ಸುಮನ್ ಪೆನ್ನೇಕರ್, ಹೆಚ್ಚುವರಿ ಎಸ್.ಪಿ. ಬದರೀನಾಥ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ, ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಮಹಾಬಲೇಶ್ವರ ನಾಯ್ಕ ಮಾರ್ಗದರ್ಶನದಲ್ಲಿ ಸಬ್ ಇನ್ಸಪೆಕ್ಟರ್ ಭರತ್ ಕುಮಾರ್, ಸಿಬ್ಬಂದಿಗಳಾದ ಎಎಸ್‌ಐ ದಿನೇಶ ದಾತೇಕರ್, ದೀಪಕ್ ಎಸ್. ನಾಯ್ಕ, ರಾಜು ಎಫ್. ಗೌಡ, ನಾರಾಯಣ ಗೌಡ, ಸದಾಶಿವ ಕಟ್ಟಿಮನೆ ಮುಂತಾದವರು ಪಾಲ್ಗೊಂಡಿದ್ದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...