ಮರಾಠ ಮೀಸಲಾತಿ ಮತ್ತು ಸರ್ಕಾರದ ಆತ್ಮದ್ರೋಹ

Source: sonews | By Staff Correspondent | Published on 17th December 2018, 10:16 PM | National News | Special Report | Don't Miss |

ಮರಾಠರಿಗೆ ಮೀಸಲಾತಿಯನ್ನು ನೀಡುವ ಸರ್ಕಾರದ ತೀರ್ಮಾನದಲ್ಲಿ ಯಾವುದೇ ಪ್ರಾಮಾಣಿಕತೆಯಿಲ್ಲ.

ಮಹಾರಾಷ್ಟ್ರ ಸರ್ಕಾರವು ಶಿಕ್ಷಣ ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳಲ್ಲಿ  ಮರಾಠ ಜಾತಿಯ ಜನರಿಗೆ ಶೇ.೧೬ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ. ತೀರ್ಮಾನವು ಅದರ ಫಲಾನುಭವಿಗಳಿಂದ ಮತ್ತು ರಾಜ್ಯ ಸರ್ಕಾರದಿಂದ ಗುಣಾತ್ಮಕವಾಗಿ ಎರಡು ಭಿನ್ನಭಿನ್ನವಾದ ಪ್ರತಿಸ್ಪಂದನೆಯನ್ನು ಹುಟ್ಟುಹಾಕಿದೆ. ತೀರ್ಮಾನವನ್ನು ನ್ಯಾಯಾಂಗದ ಅನುಮೋದನೆಗೆ ಒಳಪಡಿಸುವ ಪ್ರಯತ್ನಗಳ ಬಗ್ಗೆ ಉದ್ದೇಶಿತ ಫಲಾನುಭವಿಗಳು ತಮ್ಮ ಪ್ರತ್ಯಕ್ಷ ಹಾಗೂ ಪರೋಕ್ಷ ಅಸಮ್ಮತಿಯನ್ನು ಸೂಚಿಸುತ್ತಿದ್ದಾರೆ. ತಮ್ಮ ಪರವಾದ ತೀರ್ಮಾನವು ಕೂಡಲೇ ಅನುಷ್ಠಾನಕ್ಕೆ ಬರಬೇಕೆಂದು ಅವರು ತುದಿಗಾಲಮೇಲೆ ನಿಂತಿದ್ದಾರೆ. ಅವರ ಹತಾಷೆಯು ಅರ್ಥಮಾಡಿಕೊಳ್ಳಬಹುದಾದ ಸಂಗತಿಯಾಗಿದ್ದರೂ ಅದು  ಹಿಂಸಾಚಾರ ಮತ್ತು ಕಾನೂನುಬಾಹಿರ ಕ್ರಮಗಳ ಸಮರ್ಥನೆಯಾಗಲಾರದು. ಮತ್ತೊಂದು ಕಡೆ ತೀರ್ಮಾನದ ಸಂಪೂರ್ಣ ಶ್ರೇಯಸ್ಸನ್ನು ತಾನೇ ಪಡೆದುಕೊಳ್ಳುವ ಅತ್ಯುತ್ಸಾಹದಲ್ಲಿದೆ. ಸರ್ಕಾರ ತೆಗೆದುಕೊಂಡಿರುವ ಕ್ರಮಗಳಲ್ಲಿ ಅತ್ಯುತ್ಸಾಹವು ಎದ್ದುಕಾಣುತ್ತದೆ. ಅವುಗಳಲ್ಲಿ, ಮಸೂದೆಗೆ ರಾಜ್ಯಪಾಲರು ತುರ್ತಾಗಿ ಅನುಮೋದನೆ ನೀಡಿದ್ದು, ಮಹಾಭಾರತಿ ಎಂಬ ಹೆಸರಿನಲ್ಲಿ ದೊಡ್ಡ ಮಟ್ಟದ ನೇಮಕಾತಿಯನ್ನು ಪ್ರಾರಂಭಿಸಿರುವುದು ಮತ್ತು ಮರಾಠಾ ಜಾತಿಯ ಸದಸ್ಯರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿರುವುದೂ ಒಳಗೊಂಡಿದೆ.

ಮೀಸಲಾತಿಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕೆಂದು ಮರಾಠರು ತೋರುತ್ತಿರುವ ಆಗ್ರಹವನ್ನು   ವಿಷಯದ ಬಗ್ಗೆ ಹಿಂದಿನ ಸರ್ಕಾರಗಳು ನಡೆದುಕೊಂಡ ಸಂದರ್ಭದಲ್ಲಿಟ್ಟು ಅರ್ಥಮಾಡಿಕೊಳ್ಳಬೇಕು. ಇದರಲ್ಲಿ ಮರಾಠ ಮೀಸಲಾತಿ ವಿಷಯವನ್ನು ಗೊಂದಲಮಯವಾಗಿ ಮತ್ತು ಅನಿಶ್ಚಿತವಾಗಿ ನಿರ್ವಹಿಸಿದ ಹಿಂದಿನ ಬಿಜೆಪಿ-ಶಿವಸೇನಾ ಸರ್ಕಾರವು ಒಳಗೊಂಡಿದೆ. ಕಳೆದ ಮೂರು ವರ್ಷದಿಂದ ಮರಾಠ ಯುವಕರು ರಾಜ್ಯಾದ್ಯಂತ ಸಂಘಟಿಸುತ್ತಿದ್ದ ಬೃಹತ್ ಗಾತ್ರದ ಸಮಾವೇಶಗಳು, ವಾಸ್ತವವಾಗಿ ಗೊಂದಲ ಮತ್ತು ಅನಿಶ್ಚತೆಗಳನ್ನು ನಿವಾರಿಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದವು. ಬೃಹತ್ ಸಂಘಟನಾ ಪ್ರಕ್ರಿಯೆಯಲ್ಲಿ ಮರಾಠ ಯುವಕರು ಒಂದು ಸಾಮಾಜಿಕ ಬೆಲೆಯನ್ನು ತೆತ್ತಿದ್ದು, ಅವರ ಅಸಹನೆಗೆ ಒಂದು ನೈತಿಕ ಮಹತ್ವವಿದೆ. ತಮ್ಮ ಪ್ರಾಮಾಣಿಕ ಪ್ರಯತ್ನಗಳಿಂದಾಗಿಯೇ ಅವರು ತಮ್ಮ ಉದ್ದೇಶಿತ ಗುರಿಯನ್ನು ಮುಟ್ಟಲು ಸಾಧ್ಯವಾಯಿತೆಂದು ಕೆಲವರು ಭಾವಿಸಿಕೊಳ್ಳಲೂ ಬಹುದು. ತೀರ್ಮಾನಕ್ಕೆ ನ್ಯಾಯಾಂಗದ ಅನುಮೋದನೆಯ ಅಗತ್ಯವನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಮ್ಮತಿಸದವರು ಸರ್ಕಾರದ ತೀರ್ಮಾನದ ಹಿಂದಿನ ಪ್ರಾಮಾಣಿಕತೆಗೆ ಹೆಚ್ಚಿನ ನೈತಿಕ ಒತ್ತು ಕೊಡುತ್ತಿದ್ದಾರೆ. ಉದಾರತೆಯನ್ನು ತೀವ್ರಗೊಳ್ಳುತ್ತಿರುವ ನಿರುದ್ಯೋಗ ಸಮಸ್ಯೆಯಿಂದ ಹೊರಬರುವ ದಾರಿಯ ಪ್ರಯತ್ನವೆಂದೂ ವಿವರಿಸಬಹುದು. ಸರ್ಕಾರಗಳು ಯಥೇಚ್ಚವಾಗಿ ಪೊಳ್ಳು ಭರವಸೆಯನ್ನು ನೀಡುವ ಮೂಲಕಮಾತ್ರ ಸಮಸ್ಯೆಯನ್ನು ನಿಭಾಯಿಸಲು ಪ್ರಯತ್ನಿಸಿವೆ.

ಆದರೆ ಸರ್ಕಾರದ ಅತ್ಯುತ್ಸಾಹದ ಹಿಂದೆ ಪ್ರಾಮಾಣಿಕತೆಯ ನೈತಿಕ ಬಲವಿಲ್ಲ. ಏಕೆಂದರೆ ಮೀಸಲಾತಿಯ ತೀರ್ಮಾನದ ಸುತ್ತಾ ಆವರಿಸಿಕೊಂಡಿರುವ ಕಾನೂನಾತ್ಮಕ ಅತಂತ್ರತೆ ಮತ್ತು ಅನಿಶ್ಚತೆಯ ಅಂಶಗಳನ್ನು ಸರ್ಕಾರವೂ ಸಹ ಸಂಪೂರ್ಣವಾಗಿ ಹೋಗಲಾಡಿಸಿಲ್ಲ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಮೀಸಲಾತಿ ತೀರ್ಮಾನವನ್ನು ಮಾಡುವಾಗ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಬೇಕಿದ್ದ ಬದ್ಧತೆಯನ್ನು ತೋರಿಸಿಲ್ಲ. ವಾಸ್ತವವಾಗಿ ಸರ್ಕಾರದ ತಯಾರಿಯು ಏನೇನೂ ಸಾಲದಾಗಿತ್ತು. ಸರ್ಕಾರಕ್ಕೆ ತೀರ್ಮಾನ ಮಾಡುವುದು ಎಷ್ಟೇ ಅಗತ್ಯವಾಗಿದ್ದರೂ ಅದಕ್ಕೆ ಬೇಕಿದ್ದ ಸಾಂವಿಧಾನಿಕ  ನ್ಯಾಯದ ಬುನಾದಿಯನ್ನು ಒದಗಿಸಲು ಯಾವುದೇ ಧೃಢವಾದ ಪ್ರಕ್ರಿಯೆಗಳನ್ನೂ ಸಹ ಸರ್ಕಾರ ಅನುಸರಿಸಿಲ್ಲ

ಮುಂಬೈ ಹೈಕೋರ್ಟು ಈಗಾಗಲೇ ಸೂಚಿಸಿರುವಂತೆ ಇಡೀ ಮೀಸಲಾತಿ ವಿಷಯವನ್ನು ಅಧ್ಯಯನ ಮಾಡಿ ಶಿಫಾರಸ್ಸನ್ನು ಮಾಡಲು ನೇಮಕ ಮಾಡಿದ್ದ ಸಮಿತಿಯ ವರದಿಯನ್ನು ಸರ್ಕಾರ ಈವರೆಗೆ ಬಹಿರಂಗಗೊಳಿಸಿಲ್ಲ. ಹೀಗಾಗಿ ತನ್ನ ಮೀಸಲಾತಿ ತೀರ್ಮಾನವನ್ನು ಕಾನೂನಾತ್ಮಕ ಹೋರಾಟದ ಸಿಕ್ಕಿನಲ್ಲಿ ಸಿಲುಕದಂತಿರಲು ಬೇಕಾದ ತಳಹದಿಯನ್ನು ಸರ್ಕಾರ ರೂಪಿಸಲು ಸಿದ್ಧವಾಗಿದೆ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಕಾರಣದಿಂದಾಗಿಯೇ ಜಾತಿ ಶ್ರೇಣೀಕರಣದ ಯಾವ ನಿರ್ದಿಷ್ಟ ಅಂಶಗಳಿಂದಾಗಿ ಮರಾಠರನ್ನೂ ಒಳಗೊಂಡಂತೆ ಯಾವುದೇ ಜಾತಿಗಳಿಗೆ ವಿವಿಧ ವಲಯಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಗುತ್ತಿಲ್ಲ. ಜಾತಿ ಶ್ರೇಣೀಕರಣದಲ್ಲಿ ಅಂತರ್ಗತವಾಗಿರುವ ದಮನ ಪ್ರವೃತ್ತಿಯ ಭಾಗವಾಗಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮರಾಠ ಜಾತಿಯ ಸದಸ್ಯರು ಸಾಮಾಜಿಕ ದಮನಕ್ಕೆ ಒಳಗಾಗುತ್ತಿದ್ದಾರೆಂಬುದನ್ನು ತೋರಿಸಬಹುದು. ಸಾಮಾಜಿಕವಾಗಿ ಹೇರಲ್ಪಟ್ಟ ದೌರ್ಬಲ್ಯಗಳು ವಿವಿಧ ಮಟ್ಟದಲ್ಲಿ ಮರಾಠರನ್ನು ಸಹ ದಮನದ ಪರಿಧಿಯೊಳಗೆ ತಂದಿದೆಯೆಂಬುದು ತೀರ್ಮಾನಕ್ಕೆ ಸಾಮಾಜಿಕ ನ್ಯಾಯದ ಸಾಂವಿಧಾನಿಕ ಬುನಾದಿಯನ್ನು ಒದಗಿಸುತ್ತದೆ. ಆದರೆ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ನ್ಯಾಯದ ಬಗೆಗಿನ ವಿಶಾಲ ತತ್ವವು ಮಹಾರಾಷ್ಟ್ರ ಸರ್ಕಾರದ ತೀರ್ಮಾನಕ್ಕೆ ಬೆಂಬಲ ಒದಗಿಸುವುದಿಲ್ಲ. ಹಿನ್ನೆಲೆಯಲ್ಲಿ ನ್ಯಾಯದ ತತ್ವವನ್ನು ರಾಜಕೀಯದ ತಂತ್ರವಾಗಿ ಬಳಸಿಕೊಳ್ಳಲಾಗುತ್ತಿದೆಯೆಂಬುದು ಯಾರಿಗಾದರೂ ಸ್ಪಷ್ಟವಾಗುತ್ತದೆ. ಮರಾಠ ಮೀಸಲಾತಿಗೆ ಶಿಫಾರಸ್ಸು ಮಾಡಿದ ಸಮಿತಿಯ ವರದಿಯು ಬಹಿರಂಗ ಮಾಡದ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ತೀರ್ಮಾನವನ್ನು ಅವಸರದಲ್ಲಿ ಮಾಡಿದೆಯೆಂಬ ತೀರ್ಮಾನಕ್ಕೆ ಬರದೆ ಗತ್ಯಂತರವಿಲ್ಲ.

ಸರ್ಕಾರವಂತೂ ಮರಾಠ ಯುವಕರು ತಮ್ಮ ಸರ್ಕಾರದ ಬಗ್ಗೆ ಸಕಾರಾತ್ಮಕ ಧೋರಣೆಯಿಂದ ಇರುವಂತೆ ಮಾಡಲು ಬೇಕಾದ ಎಲ್ಲವನ್ನೂ ಮಾಡುತ್ತಿದೆ. ಧೋರಣೆಯು ೨೦೧೯ರ ಚುನಾವಣೆಯತನಕವೂ ಉಳಿದುಕೊಳ್ಳಬೇಕೆಂಬುದು ಸರ್ಕಾರದ ನಿರೀಕ್ಷೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಮೀಸಲಾತಿ ಕೋಟಾದ ಸುತ್ತಲಿನ ವಾಸ್ತವವು ಅನಾವರಣಗೊಳ್ಳುತ್ತಿದ್ದಂತೆ ೨೦೧೯ರಲ್ಲಿ ಅಧಿಕಾರವನ್ನು ಹಿಡಿಯಬೇಕೆಂಬ ಬಿಜೆಪಿ-ಶಿವಸೇನಾ ಪಕ್ಷಗಳ ಹಂಬಲಕ್ಕೆ ಮಿತಿಗಳು ಸೃಷ್ಟಿಯಾಗುತ್ತಾ ಹೋಗುತ್ತವೆ. ಖಾಸಗಿ ಕ್ಷೇತ್ರಕ್ಕೂ ಮೀಸಲಾತಿಯನ್ನು ವಿಸ್ತರಿಸಬೇಕೆಂಬ ಆಗ್ರಹದಲ್ಲಿ ಈಗಾಗಲೇ ಮಿತಿಯು ಸ್ಪಷ್ಟಗೊಳ್ಳುತ್ತಿದೆ. ಇದು ಸರ್ಕಾರಿ ವಲಯದಲ್ಲಿ ಉದ್ಯೋಗವನ್ನು ಸೃಷ್ಟಿಸುವ ಸಾಮರ್ಥ್ಯವು ಸರ್ಕಾರಕ್ಕಿಲ್ಲವೆಂಬುದನ್ನೇ ಹೇಳುತ್ತದೆ. ವಾಸ್ತವವಾಗಿ ಉದ್ಯೋಗ ಸೃಷ್ಟಿಗಾಗಿ ಹೆಚ್ಚುತ್ತಿರುವ ಆಗ್ರಹಗಳು ಬರಲಿರುವ ದಿನಗಳಲ್ಲಿ ಯಾವುದೇ ಸರ್ಕಾರವು ಎದುರಿಸಬೇಕಿರುವ ನಿರಂತರ ಸಾಮಾಜಿಕ ಸವಾಲಾಗಿದೆ. ಒಂದು ಸುಭದ್ರ ಮತ್ತು ಘನತೆಯುಳ್ಳ ಬದುಕಿಗಾಗಿ ನಿರಂತರ ಸಂಘರ್ಷ ಮಾಡಬೇಕಾದ ಪರಿಸ್ಥಿತಿಯನ್ನು  ಮರಾಠ ಯುವಕರು ಮಾತ್ರವಲ್ಲ ದೇಶದ ಇಡೀ ಯುವಜನತೆ ಬಯಸುವುದಿಲ್ಲ. ಇದೇ ದೇಶದ ನಿರುದ್ಯೋಗಿ ಸುಶಿಕ್ಷಿತ ಯುವಜನತೆಯ ಸಂಘರ್ಷದ ಹಿಂದಿನ ಪ್ರೇರಣೆಯಾಗಿದೆ. ಸಂಘರ್ಷವು ಹೋರಾಟ ನಿರತ ಯುವಜನರ ಹೊಸಪಯಣವನ್ನು ಸೂಚಿಸುತ್ತದೆ. ಯುವಜನತೆಯ ಮೇಲೆ ಯಾವುದೇ ಸರ್ಕಾರಗಳು ತಮ್ಮ ಭರವಸೆ ಅಥವಾ ಅರೆಂದ ನೀತಿಗಳ ಮೂಲಕ ಶಾಶ್ವತ ನಿಯಂತ್ರಣವನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇದು ಇತಿಹಾಸದಲ್ಲಿ ಸಾಬೀತಾಗಿದ್ದರೂ ಮತ್ತೆ ಅದೇ ಕಸರತ್ತಿನಲ್ಲಿ ತೊಡಗಿರುವ ಸರ್ಕಾರ ಆತ್ಮದ್ರೋಹ ಮಾಡಿಕೊಳ್ಳುತ್ತಿದೆ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...