ಮನಮೋಹನ್ ಸಿಂಗ್ ಅವಧಿಯಲ್ಲಿ  ಭಾರತ ಪ್ರಗತಿಯ ಸ್ವರ್ಣಯುಗ-ವರದಿ

Source: sonews | By Staff Correspondent | Published on 18th August 2018, 5:42 PM | National News | Don't Miss |

ಹೊಸದಿಲ್ಲಿ: ಭಾರತದ ಆರ್ಥಿಕತೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅಂದರೆ 2006-07ರಲ್ಲಿ ಐತಿಹಾಸಿಕ ಗರಿಷ್ಠ ಪ್ರಮಾಣದ ಪ್ರಗತಿ ದಾಖಲಿಸಿದೆ ಎಂದು ಅಧಿಕೃತ ಅಂಕಿ ಅಂಶಗಳು ದೃಢಪಡಿಸಿವೆ. ಈ ಅವಧಿಯಲ್ಲಿ ಭಾರತ ಶೇಕಡ 10.08ರಷ್ಟು ಪ್ರಗತಿ ದಾಖಲಿಸಿದ್ದು, ಆರ್ಥಿಕ ಉದಾರೀಕರಣದ ಬಳಿಕ ಸಾಧಿಸಿದ ಗರಿಷ್ಠ ಪ್ರಗತಿ ಇದಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ.

ಸ್ವಾತಂತ್ರ್ಯದ ಬಳಿಕ ಗರಿಷ್ಠ ಆರ್ಥಿಕ ಪ್ರಗತಿ ದಾಖಲಾದದ್ದು ರಾಜೀವ್‍ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ. 1988-89ರಲ್ಲಿ ಭಾರತ ಶೇಕಡ 10.2ರಷ್ಟು ಪ್ರಗತಿ ದಾಖಲಿಸಿತ್ತು.

ಭಾರತದ ಜಿಡಿಪಿ ಬಗೆಗಿನ ಹಿಂದಿನ ಸರಣಿಯ ಅಂಕಿ ಅಂಶಗಳನ್ನು, ರಾಷ್ಟ್ರೀಯ ಅಂಕಿ ಅಂಶಗಳ ಆಯೋಗ ನೇಮಕ ಮಾಡಿದ ವಾಸ್ತವ ವಲಯ ಅಂಕಿ ಅಂಶಗಳ ಸಮಿತಿ ಸಿದ್ಧಪಡಿಸಿದೆ. ಈ ವರದಿಯನ್ನು ಅಂಕಿ ಸಂಖ್ಯೆಗಳ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಯ ತನ್ನ ವೆಬ್‍ಸೈಟ್‍ ನಲ್ಲಿ ಪ್ರಕಟಿಸಿದೆ.

ಈ ವರದಿಯು ಹಳೆಯ ಸರಣಿ (2004-05) ಮತ್ತು ಹೊಸ ಸರಣಿಯ ಪ್ರಗತಿ ದರವನ್ನು 2011-12ರ ಬೆಲೆಗಳ ಆಧಾರದಲ್ಲಿ ತುಲನೆ ಮಾಡುತ್ತದೆ. ಹಳೆ ಸರಣಿಯ ಅನ್ವಯ 2006-07ರಲ್ಲಿ ಅಂದರೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸ್ಥಿರ ಬೆಲೆ ಆಧಾರದಲ್ಲಿ ಜಿಡಿಪಿ ವಿಸ್ತರಣೆ ದರ 9.57 ಆಗಿತ್ತು. ಹೊಸ ಸರಣಿ (2011-12)ಯ ಅನ್ವಯ ಪ್ರಗತಿ ಸಂಖ್ಯೆ ಬದಲಾಗಿದ್ದು, ಇದನ್ನು 10.08 ಎಂದು ಪರಿಷ್ಕರಿಸಲಾಗಿದೆ.

"ಜಿಡಿಪಿ ಬ್ಯಾಕ್‍ ಸೀರಿಸ್ ಡಾಟಾ ಅಂತಿಮವಾಗಿ ಹೊರಬಿದ್ದಿದೆ. ಯುಪಿಎ ಅಧಿಕಾರಾವಧಿಯ 10 ವರ್ಷಗಳಲ್ಲಿ ಜಿಡಿಪಿ ಪ್ರಗತಿ ದರ ಶೇಕಡ 8.1 ಆಗಿದ್ದರೆ, ಮೋದಿ ಯುಗದಲ್ಲಿ ಇದು ಶೇಕಡ 7.3ರಷ್ಟಿದೆ" ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ. ಆಧುನಿಕ ಭಾರತದ ಇತಿಹಾಸದಲ್ಲಿ ಎರಡಂಕಿಯ ಪ್ರಗತಿಯನ್ನು ದಾಖಲಿಸಿದ ಏಕೈಕ ವರ್ಷ ಯುಪಿಎ ಆಡಳಿತದ ಅವಧಿಯಲ್ಲಿದೆ ಎಂದು ಪಕ್ಷ ಹೇಳಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...