ಮಣಿಪಾಲ: ಜುಗಾರಿ ಅಡ್ಡೆಗೆ ಡಿಸಿಐಬಿ ಪೊಲೀಸರ ದಾಳಿ – 19 ಮಂದಿ ಬಂಧನ ರೂ. 1.56 ಲಕ್ಷ ನಗದು ವಶ

Source: S.O. News Service | Published on 20th July 2019, 9:48 PM | Coastal News | Don't Miss |

ಮಣಿಪಾಲ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಫೀಟು ಜುಗಾರಿ ಆಟವನ್ನು ಆಡುತ್ತಿದ್ದ ಮಣಿಪಾಳದ ಹೋಟೇಲಿಗೆ ಡಿಸಿಐಬಿ ಪೊಲೀಸರು ದಾಳಿ ನಡೆಸಿ 19 ಮಂದಿಯನ್ನು ಬಂಧಿಸಿ ರೂ.1,56,150 ನಗದನ್ನು ವಶಪಡಿಸಿಕೊಂಡಿದ್ದಾರೆ.
ಮೊದಲ ಪ್ರಕರಣದಲ್ಲಿ ಶುಕ್ರವಾರ 5.45 ಕ್ಕೆ ಕಿರಣ್ ಸಿ, ಪೊಲೀಸ್ ನಿರೀಕ್ಷಕರು, ಡಿಸಿಐಬಿ ಉಡುಪಿ ಇವರು ಮಣಿಪಾಲ ಠಾಣಾ ಸರಹದ್ದಿನ ಹೆರ್ಗಾ ಗ್ರಾಮ ಈಶ್ವರ ನಗರದಲ್ಲಿರುವ ಆಶ್ಲೇಷ್ ಹೋಟೇಲ್ ನ ಎರಡನೇ ಮಹಡಿಯಲ್ಲಿರುವ ರೂಮ್ ನಂಬ್ರ 212 ರಲ್ಲಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಫೀಟು ಜುಗಾರಿ ಆಟವನ್ನು ಆಡುತ್ತಿದ್ದ ಕೊಠಡಿಗೆ ದಾಳಿ ನಡೆಸಿದ್ದು, ಬೊಮ್ಮಾರಬೆಟ್ಟು ನಿವಾಸಿ ಜ್ಞಾನೇಶ್ ಶೆಟ್ಟಿ, ಮುಂಬೈ ನಿವಾಸಿ ಶೈಲೇಶ್ ಸನೀಲ್, ಕೊಪ್ಪಳ ನಿವಾಸಿ ಅಂಬರೀಶ, ಹೆರ್ಗ ಈಶ್ವರನಗರ ನಿವಾಸಿ ಉಮೇಶ್ ಸಾಲೀಯಾನ್, ಬನ್ನಂಜೆ ನಿವಾಸಿ ಭಾಸ್ಕರ ಎಂಬವರನ್ನು ವಶಪಡಿಸಿಕೊಂಡು, ಜುಗಾರಿ ಆಟಕ್ಕೆ ಸಂಬಂಧಿಸಿದಂತೆ ಬಿಳಿ ಬಣ್ಣದ ಬೆಡ್ ಶೀಟ್ – 1, ಇಸ್ಫೀಟು ಎಲೆ – 52, ಹಾಗೂ ರೂಪಾಯಿ 33,725/- ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಎರಡನೇ ಪ್ರಕರಣದಲ್ಲಿ ಶುಕ್ರವಾರ 3.15 ಕ್ಕೆ ಕಿರಣ್ ಸಿ, ಪೊಲೀಸ್ ನಿರೀಕ್ಷಕರು, ಡಿಸಿಐಬಿ ಉಡುಪಿ ರವರು ಸಿಬ್ಬಂದಿಯವರೊಂದಿಗೆ ಮಣಿಪಾಲ ಠಾಣಾ ಸರಹದ್ದಿನ ಹೆರ್ಗಾ ಗ್ರಾಮ ಈಶ್ವರ ನಗರದಲ್ಲಿರುವ ಆಶ್ಲೇಷ್ ಹೋಟೇಲ್ ನ ಎರಡನೇ ಮಹಡಿಯಲ್ಲಿರುವ ರೂಮ್ ನಂಬ್ರ 219 ರಲ್ಲಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಫೀಟು ಜುಗಾರಿ ಆಟವನ್ನು ಆಡುತ್ತಿದ್ದ ಕೊಠಡಿಗೆ ದಾಳಿ ನಡೆಸಿ ಉಡುಪಿ ನಿವಾಸಿ ಸುಧಾಕರ್ ಅಮೀನ್(43), ಮಲ್ಪೆ ಬಾಪುತೋಟ ನಿವಾಸಿ ಜಗದೀಶ (44), ಕುಂದಾಪುರ ಹಲ್ನಾಡು ನಿವಾಸಿ ಸುಕುಮಾರ (29), ಕುಂದಾಪುರ ಮುದ್ದುಗುಡ್ಡೆ ನಿವಾಸಿ ಸುಜಿತ್ (33), ಕೊಡವೂರು ನಿವಾಇಸ ಶಂಕರ (33), ಶರೀಫ್ (31), ಹಂಗಳೂರು ನಿವಾಸಿ ಹರೀಶ್ (32), ಕುಂದಾಪುರ ನಿವಾಸಿ ಶರಣ್ (25), ಹೆಮ್ಮಾಡಿ ನಿವಾಸಿ ಅಬ್ದುಲ್ ಮುನೀರ್ (28), ಕುಂದಾಪುರ ಟಿಟಿ ರಸ್ತೆ ನಿವಾಸಿಗಳಾದ ಶಾಹಿದ್ ಶೀಕ್ (29), ರಾಕೇಶ್ ದೇವಾಡಿಗ (31), ರಮೇಶ್ (41), ಸಂತೋಷ (33), ಕೆಮ್ಮಣ್ಣು ನಿವಾಸಿ ಯೋಗಿಶ (29) ಎಂಬವರನ್ನು ದಸ್ತಗಿರಿ ಮಾಡಿ, ಜುಗಾರಿ ಆಟಕ್ಕೆ ಸಂಬಂಧಿಸಿದಂತೆ ಬಿಳಿ ಬಣ್ಣದ ಬೆಡ್ ಶೀಟ್ – 1, ಇಸ್ಫೀಟು ಎಲೆ – 52, ಮೊಬೈಲ್ ಪೋನ್ – 12 , ಹಾಗೂ ರೂಪಾಯಿ 1,22,425/- ನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

Read These Next

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್