ಮಾವಿನ ಹಣ್ಣು , ಹಣ್ಣುಗಳ ರಾಜ ಮಾರುಕಟ್ಟೆಗೆ ಬಂದ ಮೊದಲ ಮಾವು

Source: ಶಬ್ಬೀರ್ ಅಹಮದ್/S O News | By I.G. Bhatkali | Published on 28th May 2018, 11:04 AM | State News | Special Report |

ಶ್ರೀನಿವಾಸಪುರ: ಮಾವಿನ ಹಣ್ಣು , ಹಣ್ಣುಗಳ ರಾಜ ಮಾವಿನ ಹಣ್ಣು ಒಂದು ವರ್ಷ ಉತ್ತಮ ಬೆಳೆ ಬಂದರೆ ಮಾರನೇ ವರ್ಷ ಕಡಿಮೆ ಬೆಳೆ ಮರುವುದು. ಆದರೆ ಕರ್ನಾಟಕದಲ್ಲಿ ಈ ಎರಡು ವರ್ಷದಲ್ಲಿ ಬೆಳೆ ಕಡಿಮೆ ಆಗಿದೆ.

ಪಟ್ಟಣದ ಹೊರವಲಯದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಾವಿನ ಕಾಯಿ ವಹಿವಾಟು ಆರಂಭವಾಗಿದೆ. ಆದರೆ ನಿರೀಕ್ಷಿತ ಬೆಲೆ ಮಾತ್ರ ಬಂದಿಲ್ಲ.

ಪಟ್ಟಣದ ಮಾವಿನ ಕಾಯಿ ಮಾರುಕಟ್ಟೆ ಏಷ್ಯಾದಲ್ಲಿಯೇ ದೊಡ್ಡದು. ಈಗಷ್ಟೇ ರೈತರು ಕೆಲವು ತಳಿಯ ಮಾವಿನ ಕಾಯಿ ಕಿತ್ತುತಂದು ಮಂಡಿಗೆ ಹಾಕುತ್ತಿದ್ದಾರೆ. ವಾತಾವಣ ವೈಪರೀತ್ಯದಿಂದಾಗಿ ಈ ಬಾರಿ ಮಾವಿನ ಸುಗ್ಗಿ ಒಂದು ತಿಂಗಳು ತಡವಾಗಿ ಪ್ರಾರಂಭವಾಗಿದೆ. 

ಶ್ರೀನಿವಾಸಪುರ ತಾಲ್ಲೂಕಿನಲ್ಲಿ 12 ತಳಿಯ ಮಾವನ್ನು ಬೆಳೆಯಲಾಗುತ್ತಿದೆ. ರಾಜಗಿರಿ, ರಸಪುರಿ, ಮಲಗೋವಾ, ಬಾದಾಮಿ, ಬೇನಿಷಾ, ಮಲ್ಲಿಕಾ, ನೀಲಂ, ತೋತಾಪುರಿ, ಕುದೂಸ್‍, ಕಾಲಾಪಾಡ್‍, ಆಮ್ಲೆಟ್‍, ನಾಟಿ ತಳಿಗಳ ವಹಿವಾಟು ನಡೆಯುತ್ತಿದೆ. ಮಹಾರಾಷ್ಟ್ರ,ಗುಜರಾತ್‍, ರಾಜಸ್ತಾನ, ಮಧ್ಯಪ್ರದೇಶ, ನವದೆಹಲಿ, ಪಂಜಾಬ್‍, ಹರಿಯಾಣ ರಾಜ್ಯಗಳಿಗೆ ಈ ತಾಲ್ಲೂಕಿನ ಮಾವು ರವಾನೆಯಾಗುತ್ತದೆ. 

 ರಾಜಗೀರ ತಳಿ ಮಾವು ತಾಲ್ಲೂಕಿನಲ್ಲಿ ಮಾರುಕಟ್ಟೆಗೆ ಮೊದಲು ಬರುತ್ತದೆ. ಹಂತ ಹಂತವಾಗಿ ಇತರ ತಳಿಯ ಮಾವಿನ ಕಾಯಿಗಳು ಬರುತ್ತವೆ.

ಆದರೆ ರೈತರು ರಾಜಗೀರ ತಳಿಯ ಮಾವು ಮಾತ್ರವಲ್ಲದೆ, ಇನ್ನೂ ಪಕ್ವವಾಗದ ತೋತಾಪುರಿ, ಬಾದಾಮಿ, ಬೇನಿಷಾ ಮುಂತಾದ ತಳಿ ಮಾವನ್ನೂ ತಂದು ಮಂಡಿಗೆ ಹಾಕುತ್ತಿದ್ದಾರೆ. ತೋತಾಪುರಿ ಒಂದು ಟನ್‌ಗೆ ₹ 9 ಸಾವಿರದಿಂದ ₹ 14 ಸಾವಿರ, ಬಾದಾಮಿ ₹ 16 ರಿಂದ 19 ಸಾವಿರ, ರಾಜಗೀರ ₹ 9 ರಿಂದ 12 ಸಾವಿರದಂತೆ ಮಾರಾಟವಾಗುತ್ತಿದೆ ಎಂದು ಟಿ.ಎಮ್.ಬಿ. ಮಂಡಿ ಮಾಲೀಕ  ಮಹ್ಮದ್ ಇರ್ಷಾದ್ ತಿಳಿಸಿದರು.

ಈ ಬಾರಿ ತಡವಾಗಿ ಹೂ ಬಂದ ಪರಿಣಾಮ, ಫಸಲು ಪಕ್ವಗೊಳ್ಳುವುದು ತಡವಾಗಿದೆ. ಆದರೂ ಕೆಲವು ಮಾವು ಬೆಳೆಗಾರರು ಹಣದ ಅಗತ್ಯ, ಕಳ್ಳರ ಕಾಟ, ಕಾವಲಿಗೆ ತೊಡಕು ಇತ್ಯಾದಿ ಕಾರಣಗಳಿಂದ ಮುಂಚಿತವಾಗಿ ಕಾಯಿ ಕೀಳುತ್ತಿದ್ದಾರೆ. ಮಾರುಕಟ್ಟೆಗೆ ಇನ್ನೂ ಹೊರಗಿನ ವ್ಯಾಪಾರಿಗಳು ಬಂದಿಲ್ಲ. ಹಾಗಾಗಿ ಕಾಯಿಗೆ ಲಾಭದಾಯಕ ಬೆಲೆ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಮಾವು ಬೆಳೆಗಾರರು ವೈಜ್ಞಾನಿಕವಾಗಿ ಕಾಯಿ ಕೀಳುವುದಿಲ್ಲ. ಅದು ಬೆಲೆ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಕೆಲವು ರೈತರು ತೊಟ್ಟು ಸಹಿತ ಕಾಯಿ ಕಟಾವು ಮಾಡಿ, ಕ್ರೇಟ್‌ಗಳಿಗೆ ತುಂಬಿ ಮಂಡಿಗೆ ತರುತ್ತಿದ್ದಾರೆ. ಹಾಗೆ ಮಾಡುವುದರಿಂದ ಸರಕು ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ ಎಂಬ ನಂಬಿಕೆ ಅವರದ್ದು.‌

ಸಗಟು ಮಾರುಕಟ್ಟೆಯಲ್ಲಿ ಮಾವಿನ ಕಾಯಿ ಬೆಲೆ ಕುಸಿದಿದ್ದರೂ ಚಿಲ್ಲರೆ ಬೆಲೆ ಮಾತ್ರ ಗಗನಕ್ಕೇರಿದೆ. ಚಿಲ್ಲರೆ ವ್ಯಾಪಾರಿಗಳು ಕಡಿಮೆ ಬೆಲೆಗೆ ಕಾಯಿ ಖರೀದಿಸಿ ತಮ್ಮದೇ ಆದ ವಿಧಾನದಲ್ಲಿ ಹಣ್ಣು ಮಾಡಿ ಮಾರುತ್ತಿದ್ದಾರೆ. ಹಣ ಕೊಟ್ಟರೂ ಕಾಯಿ ರುಚಿಯಿಲ್ಲ ಎನ್ನುತ್ತಿದ್ದಾರೆ ಗ್ರಾಹಕರು.

ಮಾವಿನ ಕಾಯಿ ಮಂಡಿಗಳಲ್ಲಿ ಕೆಲಸ ಮಾಡಲು ನೆರೆಯ ಆಂಧ್ರಪ್ರದೇಶದಿಂದ ಕಾರ್ಮಿಕರು ಕುಟುಂಗಳ ಸಹಿತ ಬಂದಿದ್ದಾರೆ. ಆದರೆ ಕೆಲಸ ಮಾತ್ರ ಇಲ್ಲ. ಮಾವು ವಹಿವಾಟು ಪೂರ್ಣ ಪ್ರಮಾಣದಲ್ಲಿ ನಡೆಯಲು ಇನ್ನೂ ಒಂದೆರಡು ವಾರಗಳು ಕಳೆಯಬೇಕು. ಆಗಷ್ಟೇ ವಹಿವಾಟಿನ ಪೂರ್ಣ ಚಿತ್ರಣ ಕಂಡುಬರಲು ಸಾಧ್ಯ ಎನ್ನುವರು ವ್ಯಾಪಾರಿಗಳು

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...