ಲಂಚ ಪಡೆಯುವಾಗಲೇ ರೆಡ್‌ ಹ್ಯಾಂಡ್‌ ಆಗಿ ಎಸಿಬಿ ಬಲೆಗೆ ಬಿದ್ದ ಮಂಗಳೂರು ಸರ್ವೇಯರ್‌

Source: SO News | By Laxmi Tanaya | Published on 24th February 2021, 12:57 PM | Coastal News |

ಮಂಗಳೂರು :  ಮಂಗಳೂರಿನ ಮಿನಿ ವಿಧಾನ ಸೌಧದ ಎದುರು 20 ಸಾವಿರ ರೂ. ಲಂಚದ ಹಣ ತೆಗೆದುಕೊಳ್ಳುವ ಸಮಯದಲ್ಲಿ ಸಾಕ್ಷಿ ಸಮೇತ ಸರ್ವೇಯರ್‌ ಗಂಗಾಧರ್‌ ಅವರನ್ನು ಎಸಿಬಿ ತಂಡ ಬಂಧಿಸಿದೆ. 

 ನಗರದಲ್ಲಿ ಉದ್ಯಮಿಯೊಬ್ಬರು ತಮ್ಮ ಕಚೇರಿಯ ಪೀಠೋಪಕರಣ ಮಾಡಿಸಲು ತಮ್ಮ ಮನೆಯ ಆವರಣದಲ್ಲಿ ಇದ್ದ ಸಾಗುವಾನಿ ಮರವನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿಗಾಗಿ ಕೋರಿ ಪತ್ರ ಸಲ್ಲಿಸಿದ್ದರು.

ಮಂಗಳೂರು ನಗರದ ಅರಣ್ಯ ಇಲಾಖೆ ಈ ಪತ್ರವನ್ನು ಕಂದಾಯ ಇಲಾಖೆಗೆ ಕಳಿಸಿತ್ತು. ಒಂದು ತಿಂಗಳಾದರೂ ಸ್ಥಳ ಪರಿಶೀಲನೆ ನಡೆಸಲು ಬಾರದ ಸರ್ವೇಯರ್‌ ಗಂಗಾಧರ್‌ ಸ್ಥಳ ಪರಿಶೀಲನೆ ನಡೆಸಲು 3,000 ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಂದಾಯ ಇಲಾಖೆಗೆ ಕಟ್ಟಬೇಕಾದ 600 ರುಪಾಯಿ ಜತೆಯಲ್ಲಿ ಇರುವವರಿಗೆ 3,000 ರೂಪಾಯಿ ಕೊಟ್ಟ ಉದ್ಯಮಿಗೆ ,ಇನ್ನೊಂದು ತಿಂಗಳು ಕಳೆದರೂ ಮರ ಇರುವ ಸ್ಥಳದ ನಕಾಶೆ ನೀಡಲು ಪುನಃ 30,000 ರು. ಡಿಮಾಂಡ್‌ ಇರಿಸಿದ್ದರು.

ಇದರಿಂದ ಮನ ನೊಂದ ಉದ್ಯಮಿ ಮಂಗಳೂರಿನ ಪರಿಸರ ಸಂರಕ್ಷಣಾ ಸದಸ್ಯರ ಗಮನಕ್ಕೆ ತಂದರು. ನಂತರ ಈ ವಿಚಾರವನ್ನು ಮಂಗಳೂರಿನ ಎಸಿಬಿ ಇನ್ಸ್‌ಪೆಕ್ಟರ್‌‌ ಶ್ಯಾಮಸುಂದರ್‌ರವರ ಗಮನಕ್ಕೆ ತರಲಾಯಿತು. ಮಂಗಳವಾರ ಸಂಜೆ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು 20 ಸಾವಿರ ರೂ. ಲಂಚದ ಹಣ ತೆಗೆದುಕೊಳ್ಳುವ ಸಮಯದಲ್ಲಿ ಸಾಕ್ಷಿ ಸಮೇತ ಸರ್ವೇಯರ್‌ ಗಂಗಾಧರ್‌ನ್ನು ಎಸಿಬಿ ತಂಡ ಬಂಧಿಸಿ ವಿಚಾರಣೆ ನಡೆಸಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...