ಸವಾಲಿನ ನಡುವೆ ಮಂಗಳೂರು ಮಹಾನಗರ ಪಾಲಿಕೆ ಈ ಖಾತಾ ಯೋಜನೆ

Source: SO News | By Laxmi Tanaya | Published on 16th October 2020, 8:02 PM | Coastal News | Don't Miss |

ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲಕರ ಅಧಿಕೃತ ಹಾಗೂ ಅನಧಿಕೃತವಲ್ಲದ ನಿವೇಶನ, ಕಟ್ಟಡಗಳ ಆಸ್ತಿ ಹಕ್ಕಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ವಿವರವನ್ನು ದಾಖಲಿಸಿದ ಇ ಖಾತಾ ಯೋಜನೆಗೆ ವೇಗ ದೊರಕಿದೆ. ಆದರೆ, ಇ ಖಾತಾ ಪಡೆಯಲು ಪಾಲಿಕೆಯಲ್ಲಿ ಸಮಸ್ಯೆಗಳ ಸವಾಲು ಕೂಡ ಅಧಿಕವಾಗಿದೆ.

ಪಾಲಿಕೆಯ ಮಾಹಿತಿ ಪ್ರಕಾರ ಇಲ್ಲಿಯವರೆಗೆ 1,716 ಆಸ್ತಿಗಳಿಗೆ ಇ-ಖಾತಾ ನೀಡಲಾಗಿದ್ದು, ರಾಜ್ಯದಲ್ಲಿಯೇ ಇದು ಗಮನೀಯ ಸಾಧನೆ ಎನ್ನಲಾಗುತ್ತಿದೆ. ಆದರೆ ಇ ಖಾತಾ ಪಡೆಯಲು ಸಾರ್ವಜನಿಕರಿಗೆ ಕೆಲವು ಸಮಸ್ಯೆಗಳು, ತಾಂತ್ರಿಕವಾದ ಸವಾಲುಗಳು ಎದುರಾಗುತ್ತಿದೆ.

“ಪ್ರಾಪರ್ಟಿ ಐಡಿ’ಯದ್ದೇ ಗಡಿಬಿಡಿ
ಪಾಲಿಕೆ ವ್ಯಾಪ್ತಿಯ ಪ್ರತೀ ಭೂಮಿಯನ್ನು ಪಾಲಿಕೆಯು ಸರ್ವೇ ಮಾಡಿ ನಿಗದಿತ ಐಡಿಯನ್ನು ನೀಡಲಾಗುತ್ತದೆ. 2002ರಲ್ಲಿ ಕೇಂದ್ರ ಸರಕಾರದ ನಿರ್ಮಲ ನಗರ ಯೋಜನೆಯಲ್ಲಿ ಐಡಿ ನೀಡುವ ಪ್ರಕ್ರಿಯೆ ಆರಂಭವಾಯಿತಾದರೂ ಇದು ಶೇ. 50ರಷ್ಟು ಪ್ರದೇಶಕ್ಕೆ ಮಾತ್ರ ಆಗಿದೆ. ಉಳಿದ ಭೂಮಿಗೆ ಪ್ರಾಪರ್ಟಿ ಐಡಿ ಆಗಿಲ್ಲ. ಸದ್ಯ ಇ-ಖಾತಾ ಮಾಡುವ ವೇಳೆಯಲ್ಲಿ ಪ್ರಾಪರ್ಟಿ ಐಡಿ ಕೂಡ ನಮೂದು ಮಾಡಬೇಕಾದ ಹಿನ್ನೆಲೆಯಲ್ಲಿ ಬಹುತೇಕ ಮಂದಿಗೆ ಈ ಐಡಿ ಇಲ್ಲದೆ ಸಮಸ್ಯೆ ಆಗಿದೆ. ಸದ್ಯ ಐಡಿ ಇಲ್ಲದವರಿಗೆ ಹತ್ತಿರದ ಭೂಮಿಯ ಐಡಿಗೆ ಸರಿ ಹೊಂದುವ ಹೊಸ ಐಡಿ ಹಾಕಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಮತ್ತೂಂದು ಸಮಸ್ಯೆಗೆ ಕಾರಣವಾಗಬಹುದು ಎಂಬ ಆತಂಕ ಎದುರಾಗಿದೆ.

ಇ ಖಾತಾಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಅದು ಅನುಮೋದನೆಯಾಗಿ ಇ ಖಾತಾ ದೊರೆಯಲು ಕೆಲವು ಸಮಯ ಕಾಯಬೇಕಾಗುತ್ತದೆ. ಹೀಗಾಗಿ ಪಾಲಿಕೆಗೆ ಅಲೆದಾಡುವಂತಾಗುತ್ತದೆ ಎಂಬ ದೂರು ವ್ಯಕ್ತವಾಗಿದೆ.

ಈ ಎಲ್ಲ ಸಮಸ್ಯೆಗಳ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್‌ ಅವರು ಇತ್ತೀಚೆಗೆ ಪಾಲಿಕೆಯಲ್ಲಿ ಸಭೆ ನಡೆಸಿ ಸಮಸ್ಯೆ ಪರಿಹಾರದ ಬಗ್ಗೆ ಭರವಸೆ ನೀಡಿದ್ದಾರೆ.

“ಐಡಿ’ಗಾಗಿ ಆ್ಯಪ್‌!
ನಗರಾಭಿವೃದ್ಧಿ ಇಲಾಖೆಯು “ಆ್ಯಪ್‌’ ಜಾರಿಗೆ ಮುಂದಾಗಿದೆ. ಇದರ ಪ್ರಕಾರ ಕಂದಾಯ ಇಲಾಖೆಯ ಬಿಲ್‌ ಕಲೆಕ್ಟರ್‌ ಇ-ಖಾತಾಕ್ಕೆ ಅರ್ಜಿ ಹಾಕಿದವರ ಜಾಗಕ್ಕೆ ಹೋಗಿ ಅಲ್ಲಿ ಆ್ಯಪ್‌ ಆನ್‌ ಮಾಡಿದಾಗ ಸ್ವಯಂಚಾಲಿತವಾಗಿಯೇ ಹೊಸ ಪ್ರಾಪರ್ಟಿ ಐಡಿ ಸಿಗಲಿದೆ. ಸದ್ಯ ಈ ಪ್ರಕ್ರಿಯೆ ಚಿಂತನೆಯ ಹಂತದಲ್ಲಿದೆ.

ಏನಿದು ಇ ಖಾತಾ?
ಗ್ರಾಮಾಂತರ ಭಾಗದಲ್ಲಿ ಆರ್‌ಟಿಸಿ ಇದ್ದ ಹಾಗೆ, ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಖಾತಾ ನೀಡಲಾಗುತ್ತಿತ್ತು. ಬಳಿಕ ಕರ್ನಾಟಕ ಮುನಿಸಿಪಲ್‌ ಡಾಟಾ ಸೊಸೈಟಿ, ರಾಷ್ಟ್ರೀಯ ಸೂಚ್ಯಂಕ ಕೇಂದ್ರದ ಸಹಯೋಗದೊಂದಿಗೆ ಆಸ್ತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಇ-ಖಾತಾ ಅನುಷ್ಠಾನಿಸಲಾಗಿದೆ. ತಂತ್ರಾಂಶದ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತವಲ್ಲದ, ಅಕ್ರಮ ಆಸ್ತಿಗಳ ಮಾಹಿತಿಯನ್ನು ದಾಖಲಿಸಲು/ತಿದ್ದುಪಡಿ ಮಾಡಲು ಆಸ್ತಿಗಳ ಮಾಲಕತ್ವ ಹಕ್ಕು ವರ್ಗಾವಣೆ ಮಾಡಲು, ಆಸ್ತಿ ತೆರಿ ಗೆಯ ನಕಲನ್ನು ಡಿಜಿಟಲ್‌ ಸಹಿಯೊಂದಿಗೆ ತಂತ್ರಾಂಶದಿಂದ ಪಡೆಯಲು ಅವಕಾಶ ನೀಡ ಲಾಗಿದೆ. ಇದರಂತೆ ಮಂಗಳೂರಿನಲ್ಲಿ ಇಲ್ಲಿಯವರೆಗೆ 1,716 ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ.

ಇ-ಖಾತಾ ನೋಂದಣಿಗೆ ವೇಗ
ಮಂಗಳೂರಿನಲ್ಲಿ ಇ-ಖಾತಾ ನೋಂದಣಿ ವೇಗ ದೊರಕಿದೆ. ಬೆಂಗಳೂರನ್ನು ಹೊರತುಪಡಿಸಿ ಮಂಗಳೂರಿನಲ್ಲಿಯೇ ಇ-ಖಾತಾ ನೋಂದಣಿ ಆಗುತ್ತಿದೆ. ಜಾಗದ ಕುರಿತ ಪೂರ್ಣ ದಾಖಲಾತಿಯನ್ನು ನೀಡುವ ಮುಖೇನ ಇ-ಖಾತಾ ಮಾಡಿಸಲು ಅವಕಾಶ ನೀಡಲಾಗಿದೆ. ಇ-ಖಾತಾ ಮಾಡಿಸುವಲ್ಲಿ ಜನರಿಗೆ ಸಮಸ್ಯೆ ಆಗದಂತೆ ಪಾಲಿಕೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು  ಮಹಾನಗರ ಪಾಲಿಕೆ ಉಪ ಆಯುಕ್ತರಾದ ಸಂತೋಷ್‌ ಕುಮಾರ್‌ ಹೇಳಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...